ಸುಶ್ಮಿತಾ ಲಲಿತ್ ಮೋದಿ ಪೋಟೋ ಎಡಿಟ್ ಮಾಡಿ ಕಿಚಾಯಿಸಿದ ಹಾಸ್ಯನಟ
ಹಿಂದಿ ಹಾಸ್ಯನಟ ತನ್ಮಯ್ ಭಟ್ ಅವರು ಈ ಲಲಿತ್ ಮೋದಿ ಮತ್ತು ಸುಶ್ಮಿತಾ ಸೇನ್ ಅವರ ಈ ಸುಂದರ ಫೋಟೋವನ್ನು ಎಡಿಟ್ ಮಾಡಿ ಮರುಸೃಷ್ಟಿಸಿದ್ದು, ಅದು ಸೋಶಿಯಲ್ ಮೀಡಿಯಾದಲ್ಲಿ ಬಿರುಗಾಳಿ ಎಬ್ಬಿಸಿದೆ.
ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್‌ನ ಸಂಸ್ಥಾಪಕ ಲಲಿತ್ ಮೋದಿ ಅವರು ತಾವು ಹಾಗೂ ಮಾಜಿ ಭುವನ ಸುಂದರಿ ಸುಶ್ಮಿತಾ ಸೇನ್ ಡೇಟಿಂಗ್ ಮಾಡುತ್ತಿರುವುದಾಗಿ ಹೇಳಿ ತಮ್ಮಿಬ್ಬರ ರೋಮ್ಯಾಂಟಿಕ್ ಫೋಟೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು. ಇವರ ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದಲ್ಲದೇ ಅನೇಕರು ಅಚ್ಚರಿಯ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದರು. ಇವರ ಈ ಘೋಷಣೆಯಿಂದಾಗಿ ಸುಶ್ಮಿತಾ ಹಾಗೂ ಲಲಿತ್ ಮೋದಿಗೆ ಸಂಬಂಧಿಸಿದ ಹಳೆಯ ಟ್ವಿಟ್ಟರ್ ಪೋಸ್ಟ್‌ಗಳು ಕೂಡ ವೈರಲ್ ಆಗಿದ್ದವು.
ಈ ನಡುವೆ ಹಿಂದಿ ಹಾಸ್ಯನಟ ತನ್ಮಯ್ ಭಟ್ ಅವರು ಈ ಲಲಿತ್ ಮೋದಿ ಮತ್ತು ಸುಶ್ಮಿತಾ ಸೇನ್ ಅವರ ಈ ಸುಂದರ ಫೋಟೋವನ್ನು ಎಡಿಟ್ ಮಾಡಿ ಮರುಸೃಷ್ಟಿಸಿದ್ದು, ಅದು ಸೋಶಿಯಲ್ ಮೀಡಿಯಾದಲ್ಲಿ ಬಿರುಗಾಳಿ ಎಬ್ಬಿಸಿದೆ. ಹಲವು ಟ್ವೀಟ್‌ಗಳ ಮೂಲಕ ಲಲಿತ್ ಮೋದಿ ಅವರು ತಮ್ಮ ಹಾಗೂ ಸುಶ್ಮಿತಾ ಸೇನ್ ಅವರ ಸಂಬಂಧವನ್ನು ಘೋಷಿಸುವಾಗ ತಾವಿಬ್ಬರು ಜೊತೆಯಾಗಿರುವ ಹಲವು ಫೋಟೋಗಳನ್ನು ಪೋಸ್ಟ್ ಮಾಡಿದ್ದರು. "ಹೊಸ ಆರಂಭ ಹೊಸ ಜೀವನ. ಚಂದ್ರನ ಮೇಲೆ ಎಂದು ಅವರು ಬರೆದುಕೊಂಡಿದ್ದರು. ಈ ರೊಮ್ಯಾಂಟಿಕ್ ಫೋಟೋವನ್ನು ತನ್ಮಯ್ ಭಟ್ ಇನ್ಸ್ಟಾಗ್ರಾಮ್‌ನಲ್ಲಿ ಎಡಿಟ್ ಮಾಡಿ ಪೋಸ್ಟ್ ಮಾಡಿದ್ದು, ಅದರಲ್ಲೊಂದು ಟ್ವಿಸ್ಟ್ ಇದೆ.
ಐಪಿಎಲ್ ಮಾಜಿ ಕಮೀಷನರ್ ಲಲಿತ್ ಮೋದಿ-ಸುಶ್ಮಿತಾ ಸೇನ್ ವಿವಾಹ?
ಫೋಟೋದಲ್ಲಿ ತನ್ಮಯ್‌ಭಟ್ ಲಲಿತ್ ಮೋದಿಯಂತೆಯೇ ಸೋಫಾದಲ್ಲಿ ಮಲಗಿದ್ದಾರೆ. ಸುಶ್ಮಿತಾ ಜಾಗದಲ್ಲಿ ಇವರ ಸ್ನೇಹಿತ ನವೀದ್ ಮನಕ್ಕೋಡನ್ ಕುಳಿತಿದ್ದಾರೆ. ಪರಸ್ಪರರ ಕಣ್ಣುಗಳು ಕಲೆತಂತೆ ಈ ಫೋಟೋ ಕಾಣಿಸುತ್ತಿದೆ. ತನ್ಮಯ್ ಭಟ್ ಸುಶ್ಮಿತಾ ಹಾಗೂ ಲಲಿತ್ ಅವರ ಮೂಲ ಫೋಟೋದಲ್ಲಿ ಇರುವಂತೆ ತನ್ನ ಸ್ನೇಹಿತನ ತಲೆಯ ಮೇಲೆ ಕೈ ಇಟ್ಟುಕೊಂಡಿದ್ದಾನೆ. ಪೋಸ್ಟ್ ಅನ್ನು ಇನ್ನಷ್ಟು ತಮಾಷೆಯಾಗಿ ಮಾಡಿದ್ದು,, ಇವರು ಫೋಟೋಗೆ ಕೊಟ್ಟಿರುವ ಶೀರ್ಷಿಕೆ.
ತನ್ಮಯ್ ಭಟ್ ಅವರ ಶೀರ್ಷಿಕೆಯು ಕೂಡ ಲಲಿತ್ ಮೋದಿಯವರು ಬರೆದುಕೊಂಡಂತೆ ಇದೆ. "ಹೊಸ ಆರಂಭ. ಹೊಸ ಜೀವನ. ಚಂದ್ರನ ಮೇಲೆ." ಆದರೆ ಕೊನೆಯಲ್ಲಿ ಹಾಸ್ಯನಟ ತನ್ಮಯ್ ನಾವಿಬ್ಬರು ರೂಮ್‌ಮೇಟ್‌ಗಳು ಎಂದು ಘೋಷಿಸುತ್ತಾರೆ. ಇದಕ್ಕೆ ತನ್ಮಯ್ ಭಟ್ ಅಭಿಮಾನಿಗಳು ಕಾಮೆಂಟ್‌ಗಳ ಮೂಲಕ ಮತ್ತಷ್ಟು ಹಾಸ್ಯದ ಲೇಪನ ನೀಡಿದ್ದಾರೆ.
4,500 ಕೋಟಿ ಆಸ್ತಿ ಮಾಲೀಕ ಲಲಿತ್ ಮೋದಿ ಗರ್ಲ್ ಫ್ರೆಂಡ್ ಸುಶ್ಮಿತಾ ನಿವ್ವಳ ಆಸ್ತಿ ಎಷ್ಟು?
ನೀವು ಇದನ್ನು ಏಕೆ ಮಾಡುತ್ತೀರಿ ಎಂದು ಒಬ್ಬರು ಬಳಕೆದಾರರು ಕಾಮೆಂಟ್‌ನಲ್ಲಿ ತನ್ಮಯ್ ಅವರನ್ನು ಕೇಳಿದ್ದಾರೆ. ಈ ಸಂಭಾಷಣೆಯು ಎಸ್‌ಎಂಎಸ್ ಮೂಲಕ ಆರಂಭವಾಯಿತು ಎಂದು ಕಿಚಾಯಿಸಿದ್ದಾರೆ. ಸುಶ್ಮಿತಾ ರೀತಿ ನೀವು ಮತ್ತಷ್ಟು ಹತ್ತಿರವೇಕೆ ಬಂದಿಲ್ಲ ಎಂದು ಮತ್ತೊಬ್ಬರು ಕೇಳಿದ್ದಾರೆ. ಅನೇಕರು ನಗುವಿನ ಇಮೊಜಿಗಳನ್ನು ಕಾಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ ಸುಶ್ಮಿತಾ ಹಾಗೂ ಲಲಿತ್ ಮೋದಿ ಅವರನ್ನು ಕಿಚಾಯಿಸುವಂತಿರುವ ಈ ಫೋಟೋ ನೋಡುಗರನ್ನು ಹೊಟ್ಟೆ ಹುಣ್ಣಾಗುವಂತೆ ನಗುವಂತೆ ಮಾಡುತ್ತಿರುವುದಂತು ಸುಳ್ಳಲ್ಲ.
ಲಲಿತ್ ಮೋದಿ ಅವರು ಮಾಜಿ ವಿಶ್ವ ಸುಂದರಿಯೊಂದಿಗೆ ಡೇಟಿಂಗ್ ಮಾಡುತ್ತಿದ್ದೇನೆ ಎಂದು ಘೋಷಿಸಿದ ಕೂಡಲೇ ಗುರುವಾರ (ಜುಲೈ 14) ದೊಡ್ಡ ಟ್ರೆಂಡ್ ಆಗಿದ್ದಾರೆ. ಇಬ್ಬರೂ ಇನ್ನೂ ಮದುವೆಯಾಗಿಲ್ಲ ಮತ್ತು "ಇದು ಹೊಸ ಆರಂಭ" ಎಂದು ಅವರು ಸ್ಪಷ್ಟಪಡಿಸಿದ್ದರು. ಇದಾದ ಬಳಿಕ ಲಲಿತ್ ಮೋದಿ ಹಾಗೂ ಸುಶ್ಮಿತಾ ಸೇನ್ ನಡುವಿನ ಸಂಬಂಧ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಹಲ್‌ಚಲ್ ಸೃಷ್ಟಿಸಿದೆ. ಈ ಬಗ್ಗೆ ಅನೇಕ ಮಂದಿ ಖುಷಿ ವ್ಯಕ್ತಪಡಿಸಿದರೂ, ಅನೇಕರು ಹಾಸ್ಯ ಮಾಡಿದ್ದಾರೆ.