'ಶನಿ' ಬಗ್ಗೆ ಭಯ ಹೊಂದಿರುವ ಬಹುತೇಕ ಭಾರತೀಯರು ಟಿವಿಯಲ್ಲಿ ಪ್ರಸಾರವಾಗೋ ಸೀರಿಯಲ್ ಅನ್ನೂ ಭಯ ಭಕ್ತಿಯಿಂದಲೇ ನೋಡುತ್ತಾರೆ. 

ನವಗ್ರಹಗಳಲ್ಲಿ ಒಂದಾದ ಶನಿಯೊಂದಿಗೆ ವಿಶೇಷ ಬಾಂಧವ್ಯ ಇರುವುದರೊಂದಿಗೆ ಈ ಧಾರಾವಾಹಿಯ ಕಲಾವಿದರ ಅದ್ಭುತ ನಟನೆಯೂ ಇದಕ್ಕೆ ಕಾರಣ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

'ಶನಿ' ಧಾರಾವಾಹಿ ಜನಪ್ರಿಯತೆಗೆ ಪ್ರೇಕ್ಷಕರು ಅದನ್ನು ಗಂಭೀರವಾಗಿ ವೀಕ್ಷಿಸುವುದೇ ಸಾಕ್ಷಿ. ಒಂದು ದಿನ ಮಿಸ್ ಆದರೂ, ಅಯ್ಯೋ ಎಂದು ಬೇಸರಿಸುವುದು ಉಂಟು. ಅಷ್ಟು ಪ್ರೇಕ್ಷಕರನ್ನು ಸೆಳೆದಿರೋ ಈ ಸೀರಿಯಲ್‌ನ ಪ್ರತಿಯೊಬ್ಬ ಕಲಾವಿದನ ಕೊಡುಗೆಯೂ ಅಪಾರ.

ಬಾಲಕನಾಗಿದ್ದ ಶನಿ ಯವ್ವೌನಕ್ಕೆ ಕಾಲಿಟ್ಟಿದ್ದಾನೆ. ಅವನ ವಾರಿಗೆಯವರೆಲ್ಲರೂ ಬೆಳೆದಿದ್ದಾರೆ. ಹೊಸ ಹೊಸ ಕಲಾವಿದರನ್ನು ಪರಿಚಯಿಸಲಾಗಿದೆ. ಪಳಗಿದ ಈ ಕಲಾವಿದರ ಹಿಂದೆ ಅನೇಕ ಕಥೆಗಳಿವೆ. ವೀಕ್ಷಕರನ್ನು ಆಕರ್ಷಿಸಿದ ಅಂಥ ಪಾತ್ರಗಳಲ್ಲಿ ಕಾಕರಾಜನದ್ದೂ ಒಂದು.

ಶನಿ ವಾಹನ ಕಾಕರಾಜ: ಶನಿಯಷ್ಟೇ ಮಹತ್ವ ಪಡೆದಿರುವ ಕಾಕರಾಜ, ಶನಿಯ ವಾಹನ. ಈ ಪಾತ್ರಕ್ಕೆ ಜೀವ ತುಂಬಿರುವ ಹುಡುಗನ ಹೆಸರು ಹರೀಶ್. ಈ ಬಾಲಕನ ಕಲಾ ಪಯಣದಲ್ಲಿ ಮುಳ್ಳಿನ ಹಾಸೇ ಇದ್ದಿದ್ದು. ಆದರೂ, ಅದನ್ನೇ ಹೂ ದಳನ್ನಾಗಿ ಮಾಡಿಕೊಂಡು ಕಲಾ ಪ್ರಪಂಚಕ್ಕೆ ಕಾಲಿಟ್ಟ ಈತನ ಸಾಧನೆಗೊಂದು ಹ್ಯಾಟ್ಸ್ ಆಫ್.

ಮೂಲತಃ ಶಿವಮೊಗ್ಗದನವಾದ ಹರೀಶ್ ರಂಗಭೂಮಿ ಕಲಾವಿದ. ಜೂನಿಯರ್ ಆರ್ಟಿಸ್ಟ್ ಆಗಿ ಕಲಾ ಪಯಣ ಆರಂಭಿಸಿದ ಇವರು ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಶ್ರೀ ವಿಷ್ಣು' ಧಾರಾವಾಹಿಯಲ್ಲಿ ಬ್ರಾಹ್ಮಣನ ಪಾತ್ರವನ್ನು ನಿಭಾಯಿಸಿದ್ದರು. ಇದೀಗ ಶನಿ ಸೀರಿಯಲ್‌ನಲ್ಲಿ ಮಿಂಚುತ್ತಿದ್ದಾರೆ. ಕ್ಯಾರೆಕ್ಟರ್ ಆರ್ಟಿಸ್ಟ್ ಹಾಗೂ ಎಡಿಟಿಂಗ್ ಕೂಡ ಮಾಡುವ ಹರೀಶ್ ಕಲಾ ಪಯಣ ಯಶಸ್ವಿಯಾಗಲಿ...