ಲೇ ಗುಬ್ಬಿ! ಅಚ್ಚು ನನಿಗೆ ಸೇರಿದವನು ಕಣೇ ಎಂದು ತನ್ನ ಹಠಮಾರಿ ಬುದ್ಧಿಯನ್ನು ಸ್ಟೈಲ್ ಆಗಿ ಹೋಳೋ ಕ್ಯೂಟ್ ವಿಲನ್‌ಗೆ ಮನಸೋತವರು ಒಬ್ಬರಾ, ಇಬ್ಬರಾ?ಎಸ್, ಇವರೇ ಸೀತಾವಲ್ಲಭ ಧಾರಾವಾವಿಯ ಮುಂಗೋಪಿ ಅಂಕಿತಾ ಅಲಿಯಾಸ್‌ ಚಂದನಾ ಮಹಾಲಿಂಗಯ್ಯ. 

‘ಸೀತಾವಲ್ಲಭ’ ಗುಬ್ಬಿ ಹಿಂದಿದೆ ಇಂಟರೆಸ್ಟಿಂಗ್ ಕಹಾನಿ!

ಮಹಾನಗರಿ ಬೆಂಗಳೂರಿನ ಇವರು ಸೀತಾವಲ್ಲಭ ಧಾರವಾಹಿಯ ಖಡಕ್ ವಿಲನ್. ತನ್ನ ಚಿಕ್ಕ ವಯಸ್ಸಿನಲ್ಲೇ ಸಾಂಸ್ಕೃತಿಕ  ಚಟುವಟಿಕೆಗಳಲ್ಲಿ ಭಗವಹಿಸಿಕೊಂಡು ಬೆಳೆದ ಚೆಲುವೆ ಈಕೆ. ರಂಗಭೂಮಿ ಅಂದ್ರೆ ಅಷ್ಟೇ ಅಚ್ಚುಮೆಚ್ಚು. 

 
 
 
 
 
 
 
 
 
 
 
 
 

Anubandha 2019 !!! #colorskannada #anubandhaawards #beingbride😍

A post shared by Chandana M (@chandana_mahalingaiah) on Aug 31, 2019 at 1:56am PDT

ರಂಗಭೂಮಿಯಿಂದ ಬಣ್ಣದ ಲೋಕ:

ಬೆಂಗಳೂರಿನಲ್ಲಿ ಇಂಜಿನಿಯರಿಂಗ್ ವಿದ್ಯಾಭ್ಯಾಸ ಪಡೆದ ಇವರು ರಂಗಭೂಮಿ ಕಲಾವಿದೆ.ನಟನೆಎಂದರೆ ಮೊದಲೆ ಅಚ್ಚುಮೆಚ್ಚು. ’ಬಣ್ಣ’ ಎಂಬ ನಟನಾ ಶಾಲೆಯಲ್ಲಿ ಅಭ್ಯಸಿಸುತ್ತಿದ್ದ ವೇಳೆ ಬಣ್ಣದ ಲೋಕ ಇವರನ್ನು ಕೈ ಬೀಸಿ ಕರೆದಿತ್ತು. 
ಇಂಜಿನಿಯರಿಂಗ್‌ ಓದುವಾಗಲೂ ನಟನೆಯಲ್ಲಿ ನಿರತರಾಗಿದ್ದ ಇವರ ಅದೃಷ್ಟ ಬದಲಾಯಿಸಿದ್ದು ನಾಗಕನ್ನಿಕೆ ಎಂಬ ಧಾರವಾಹಿ. ಮೊದಲೇರಂಗಭೂಮಿ ಕಲಾವಿದೆಯಾಗಿದ್ದರಿಂದ ಬಣ್ಣದ ಲೋಕದ ಪಯಣ ಅಷ್ಟೊಂದು ಕಠಿಣವೆನಿಸಿರಲಿಲ್ಲ.

13 ನೇ ವಯಸ್ಸಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ 'ಪುಟ್ಟಗೌರಿ' ಅಜ್ಜಮ್ಮ!

ಹಠಮಾರಿ ವಿಲನ್ ಅಂಕಿತಾ:

ನಾಗಕನ್ನಿಕೆ ಧಾರವಾಹಿಯ ನಂತರ ಅವಕಾಶ ಸಿಕ್ಕಿದ್ದು, ಸೀತಾವಲ್ಲಭ ಧಾರವಾಹಿಗೆ. ಅದೂ ಖಡಕ್ ಹಠಮಾರಿ ಅಂಕಿತಾ ಎಂಬ ವಿಲನ್ ಪಾತ್ರ. ನಿಜ ಜೀವನದಲ್ಲಿ ಸ್ಟ್ರೆಯ್ ಫಾರ್ವರ್ಡ್ ಹುಡುಗಿಯಾದ ಚಂದನಾಗೆ ಅಂಕಿತಾ ಪಾತ್ರದ ಕಳ್ಳ ಬುದ್ಧಿಗಳು ಮೊದಮೊದಲು ಕಷ್ಟವಾಗುತ್ತಿತ್ತಂತೆ. ಆದ್ರೆ ಈಗ ಅಂತಹ ಕುಚೇಷ್ಟೆಗಳು ಇವರಜೀವನಕ್ಕೆ ಸಮದೂಗಿದೆ. 

ಈಗಾಗಲೇ ಹಲವಾರು ಮೋಡಲಿಂಗ್‌ ಆಫರ್ ಹಾಗೂ ಸಿನಿಮಾ ಆಫರ್ಸ್‌ ಗಳೂ ಸಹ ಇವರನ್ನು ಅರಸಿ ಬಂದಿದೆ. ಮುಂದಿನ ದಿನಗಳಲ್ಲಿ ಸಿನಿಮಾದಲ್ಲಿ ಕಾಣಿಸಿಕೊಳ್ಳುವುದರ ಜೊತೆಗೆ ಪೌರಾಣಿಕ ಪಾತ್ರಗಳಿಗಾಗಿ ಕಾಯುತ್ತಿದ್ದಾರೆ. 

ಸುಷ್ಮಾ ಸದಾಶಿವ್
ವಿವೇಕಾನಂದಕಾಲೇಜು, ಪುತ್ತೂರು