ನಮ್ಮ ನಿಮ್ಮ ಮನಸ್ಸಿಗೆ ಹತ್ತಿರವಾಗುವ, ನಮ್ಮ ನಿಮ್ಮ ನಡುವಿನ ಕತೆಗಳನ್ನು ಹಲವು ವರ್ಷಗಳಿಂದ ಮನಮುಟ್ಟುವ ರೀತಿ ಹೇಳುತ್ತಾ ಬಂದಿರುವ ಕಲರ್ಸ್‌ ಕನ್ನಡ ಪರಿಚಯಿಸುತ್ತಿರುವ ಹೊಸ ಕತೆ ಇವಳು ಸುಜಾತಾ. ಸುಜಾತಾಳ ಕತೆ ಕೇಳುತ್ತಿದ್ದರೆ ಇವಳು ಯಾರೋ ಎಂದೆನಿಸುವುದಿಲ್ಲ. ನಮಗೆ ಬೇಗನೆ ಹತ್ತಿರವಾಗುತ್ತಾಳೆ. ನಮಗೆ ಇಷ್ಟವಾಗುತ್ತಾಳೆ. ತಾನು ಇದ್ದಲ್ಲೆಲ್ಲ ನಗು ಹಂಚುತ್ತಾ ಹೋಗುವವಳು.

ಅಗ್ನಿಸಾಕ್ಷಿ ಚಂದ್ರಿಕಾ ಮನೆಗೆ ಲಿಟಲ್ ಪ್ರಿನ್ಸೆಸ್!

ಇವಳಿಗೆ ಸಿಗುವ ಹುಡುಗ ಇವಳಿಗಿಂತಲೂ ಮೂರು ವರ್ಷ ಚಿಕ್ಕವನು. ದೊಡ್ಡ ಉದ್ಯಮಿ. ರಾಷ್ಟ್ರ ಮಟ್ಟದ ಈಜುಗಾರ. ಈತನ ಅಮ್ಮನಿಗೋ ಮಗ ಅಂದ್ರೆ ಆಯ್ತು. ಮಗನಿಗೆ 24 ವರ್ಷಕ್ಕಿಂತ ಒಂದು ದಿನ ದೊಡ್ಡವಳಾದರೂ ಹುಡುಗಿ ಸರಿ ಹೋಗದು ಎಂದು ನಂಬಿರುವವಳು. ಇಂಥ ಹುಡುಗನಿಗೆ ಅಂಥಾ ಹುಡುಗಿ ಸಿಗುತ್ತಾಳಾ? ಇವರಿಬ್ಬರು ಸಂಸಾರ ಸಾಗರದಲ್ಲಿ ಈಜುತ್ತಾರಾ? ಇದಕ್ಕೆಲ್ಲ ಉತ್ತರ ಇವಳು ಸುಜಾತಾದಲ್ಲಿ ಆಗಸ್ಟ್‌ 26ರಿಂದ ಸಂಜೆ 5.30ಕ್ಕೆ ಸೋಮವಾರದಿಂದ ಶನಿವಾರದವರೆಗೆ ಕಲರ್ಸ್‌ ಕನ್ನಡದಲ್ಲಿ ಸಿಗಲಿದೆ.

ಬಿಗ್‌ಬಾಸ್‌ ಮೂಲಕ ಖ್ಯಾತಿ ಪಡೆದ ಮೇಘಶ್ರೀ ಸುಜಾತಾ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಯಶವಂತ್‌ ಎಂಬ ಸ್ಪುರದ್ರೂಪಿ ಹೊಸ ಹುಡುಗ ಇದರ ನಾಯಕ. ಸುಮಾರು ಐದು ವರ್ಷಗಳ ಬಳಿಕ ಕನ್ನಡದ ಹೆಮ್ಮೆಯ ನಟಿ, ನಿರೂಪಕಿ ಅಪರ್ಣ ಮತ್ತೆ ಕಿರುತೆರೆಗೆ ಕಾಳಿಡುತ್ತಿದ್ದಾರೆ. ಮಾತ್ರವಲ್ಲ ನಾಯಕನ ತಾಯಿ ಪಾತ್ರ ನಿರ್ವಹಿಸುತ್ತಿದ್ದಾರೆ. ನಾಯಕನ ಅಜ್ಜಿಯಾಗಿ ಹಿರಿಯ ನಟಿ ಗಿರಿಜಾ ಲೋಕೇಶ್‌ ಅಭಿನಯಿಸುತ್ತಾರೆ. ಮಂಡ್ಯ ರಮೇಶ್‌ ಮತ್ತು ಜಗದೀಶ್‌ ಮಲ್ನಾಡ್‌ ಕೂಡಾ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಇದು ಟಾಕಿಂಗ್‌ ಸ್ಟಾರ್‌ ಸೃಜನ್‌ ಲೋಕೇಶ್‌ ಅವರ ಲೋಕೇಶ್‌ ಪೊ›ಡಕ್ಷನ್ಸ್‌ ನಿರ್ಮಾಣದ ಧಾರಾವಾಹಿ.

ದಾಂಪತ್ಯಕ್ಕೆ ಕಾಲಿರಿಸಿದ ‘ಸರ್ವಮಂಗಳ ಮಾಂಗಲ್ಯೇ’ ನಟಿ ಫೋಟೋಸ್ ವೈರಲ್!

ಸೃಜನ್‌ ಮತ್ತು ಕಲರ್ಸ್‌ ಕನ್ನಡದ ನಂಟು ಬಹಳ ವರ್ಷಗಳದ್ದು. ನಮ್ಮ ಸಂಸ್ಥೆಗಾಗಿ ಅವರು ನಿರ್ಮಿಸಿದ ಪ್ರತಿಯೊಂದು ಕಾರ್ಯಕ್ರಮವೂ ಒಂದೊಂದು ಹೆಜ್ಜೆ ಗುರುತನ್ನು ಮೂಡಿಸಿದಂಥವು. ಗುಣಮಟ್ಟಮತ್ತು ಮನರಂಜನೆಯ ಕಾರ್ಯಕ್ರಮಗಳನ್ನು ಆ ಸಂಸ್ಥೆ ನೀಡಿದೆ, ಕತೆಯ ದೃಷ್ಟಿಯಲ್ಲಿ ಇವಳು ಸುಜಾತಾ ತುಂಬಾ ಸುಂದರವಾದುದು. ಈ ಕತೆಯನ್ನು ಅಷ್ಟೇ ಆಕರ್ಷಕವಾಗಿ ತೆರೆಯ ಮೇಲೆ ತಂದಿದೆ ಲೋಕೇಶ್‌ ಪೊ›ಡಕ್ಷನ್ಸ್‌. ಈ ಸಂಸ್ಥೆ ಮತ್ತು ನಗುವಿನ ಮಧ್ಯೆ ಇರುವ ಸಂಬಂಧವನ್ನು ಬಿಡಿಸಿ ಹೇಳಬೇಕಾಗಿಲ್ಲ. ಇವಳು ಸುಜಾತಾ ಸಮಾಜದಲ್ಲಿ ನಗು ಹಂಚುವ ಹುಡುಗಿಯ ಕತೆ. ಕಲರ್ಸ್‌ ಕನ್ನಡದ ಪ್ರತಿಯೊಬ್ಬ ವೀಕ್ಷಕನಿಗೂ ಇದು ಇಷ್ಟವಾಗುವುದರಲ್ಲಿ ಸಂದೇಹವಿಲ್ಲ, ಎನ್ನುತ್ತಾರೆ ವಯಾಕಾಂ 18 ಸಂಸ್ಥೆಯ ಕನ್ನಡ ಕ್ಲಸ್ಟರ್‌ನ ಬ್ಯುಸಿನೆಸ್‌ ಹೆಡ್‌ ಪರಮೇಶ್ವರ ಗುಂಡ್ಕಲ್‌.

ಮಜಾ ಟಾಕೀಸ್‌, ಮಂಗ್ಳೂರ್‌ ಹುಡ್ಗಿ ಹುಬ್ಳಿ ಹುಡ್ಗ ಧಾರಾವಾಹಿ ಮತ್ತು ಇದೀಗ ಸೃಜನ್‌ ಲೋಕೇಶ್‌ ಅವರ ಎಲ್ಲಿದ್ದೆ ಇಲ್ಲಿ ತನಕ ಸಿನಿಮಾವನ್ನೂ ನಿರ್ದೇಶಿಸಿರುವ ತೇಜಸ್ವಿ ಈ ಧಾರಾವಾಹಿಯ ನಿರ್ದೇಶಕರು. ಇವಳು ಸುಜಾತಾ ಆಗಸ್ಟ್‌ 26ರಿಂದ ಸಂಜೆ 5.30ಕ್ಕೆ ಸೋಮವಾರದಿಂದ ಶನಿವಾರದವರೆಗೆ ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗಲಿದೆ.