ಕಿರುತೆರೆಯಲ್ಲಿ ವಿಲನ್ ಪಾತ್ರದಲ್ಲಿ ಮಿಂಚಿದ ನಟಿ ಚಂದ್ರಿಕಾ ಅಲಿಯಾಸ್ ರಾಜೇಶ್ವರಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು ಕೆಲ ದಿನಗಳ ಹಿಂದೆ ನಾಮಕರಣವೂ ನಡೆದಿದೆ.

ಕಲರ್ಸ್ ಕನ್ನಡ ವಾಹಿನಿಯ 'ಅಗ್ನಿಸಾಕ್ಷಿ' ಧಾರಾವಾಹಿಯಲ್ಲಿ ಮಿಂಚಿದ ಚಂದ್ರಿಕಾ ಅಲಿಯಾಸ್ ರಾಜೇಶ್ವರಿ ಹೆಣ್ಣು ಮಗುವಿನ ತಾಯಿಯಾಗಿದ್ದಾರೆ. ಮಗಳಿಗೆ ಹವ್ಯಾ ಕೃಷ್ಣ ಎಂದು ನಾಮಕರಣ ಮಾಡಿದ್ದಾರೆ. ಮಗಳೊಂದಿಗಿರುವ ಫೋಟೋವನ್ನು ಇನ್‌ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.

View post on Instagram

ತಮ್ಮ ಉದ್ದ ಕೂದಲಿನಿಂದ ಹಾಗೂ ಡ್ರೆಸಿಂಗ್ ಸ್ಟೈಲಿಂದ ಎಲ್ಲರ ಗಮನ ಸೆಳೆದ ರಾಜೇಶ್ವರಿ ಆಸ್ಟ್ರೇಲಿಯಾ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿರುವ ಉದ್ಯೋಗಿ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಂತರ ಸಿನಿಮಾ ಹಾಗೂ ಧಾರಾವಹಿಯಿಂದ ದೂರ ಸರಿದಿದ್ದರು. ಇದೀಗ ಕೌಟುಂಬಿಕ ಜೀವನದಲ್ಲಿ ಖುಷಿಯಾಗಿರುವ ಅವರಿಗೆ ಸಂತಸ ಡಬಲ್ ಆಗಿದ್ದು, ಪುಟ್ಟ ಪಿನ್ಸೆಸ್ ಇದಕ್ಕೆ ಕಾರಣವಾಗಿದ್ದಾಳೆ.

View post on Instagram