Asianet Suvarna News Asianet Suvarna News

ಟೀಚರನ್ನು ‘ಲಕ್ಷ್ಮೀ ಬಾರಮ್ಮ’ ನಟಿಯಾಗಿ ಬದಲಾಯಿಸಿತು ಫೇಸ್ಬುಕ್!

ಸೈಲೆಂಟ್‌ ಅ್ಯಂಡ್ ಡಿಫರೆಂಟ್ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಾ ಮನೆ ಮಾತಾದ ಬೆಡಗಿ, ಲಕ್ಷ್ಮೀ ಬಾರಮ್ಮ ಧಾರವಾಹಿಯ ಮುದ್ದು ಮುಖದ ಚೆಲುವೆ  ಮೇಧಾ ಅಲಿಯಾಸ್ ಸೌಮ್ಯ ಭಟ್.

Colors Kannada Lakshmi Baramma Fame Sowmya Bhat Cine journey
Author
Bangalore, First Published Sep 4, 2019, 1:24 PM IST

ಕರಾವಳಿಯ ಚೆಂದುಳ್ಳಿ ಬೆಡಗಿ ಸೌಮ್ಯ ಭಟ್‌ ಇಂದು ಕಿರುತೆರೆಯಲ್ಲಿ ಹವಾ ಕ್ರಿಯೇಟ್ ಮಾಡುತ್ತಿದ್ದಾರೆ. ಸಣ್ನ ಸಣ್ಣ ಪಾತ್ರಗಳ ಮೂಲಕ ಇಂಡಸ್ಟ್ರಿಗೆ ಕಾಲಿಟ್ಟಇವರ ಜರ್ನಿ ತುಂಬಾ ಇಂಟ್ರೆಸ್ಟಿಂಗ್ ಆಗಿದೆ.

ಶಾಲೆಯಿಂದ ಕಿರುತೆರೆಗೆ:

ಕಡಲ ತೀರದ ಈ ಚೆಂದುಳ್ಳಿ ಚೆಲುವೆ ತಿರುಪತಿಯ ಆರ್‌ ಎಸ್ ವಿಪಿ ಕಾಲೇಜಿನಲ್ಲಿ  ಸಂಸ್ಕತ ವಿದ್ಯಾಭ್ಯಾಸ ಮುಗಿಸಿ, ಹೌಸ್ಕೂಲ್ ಶಿಕ್ಷಕಿಯಾಗಿ ಸೇರಿಕೊಂಡರು. ತಾನು ನಟಿಯಾಗುತ್ತೇನೆ ಎಂದು ಯಾವತ್ತಿಗೂ ಭಾವಿಸಿರದ ಇವರು ಬಣ್ಣದ ಲೋಕಕ್ಕೆ ಕಾಟಿಟ್ಟದ್ದು ವಿಶೇಷ. ಸಂಸ್ಕೃತ ಉಪನ್ಯಾಸಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಇವರ ಬದುಕು ಬದಲಾಯಿಸಿದ್ದು ಫೇಸ್ಬುಕ್.

ದೇಸಿ ಪಾತ್ರದಲ್ಲಿ ಕ್ಲಾಸಿ ಬೆಡಗಿ 'ಕಮಲಿ'ಯ ನಿಂಗಿ!

ಯೂಟರ್ನ್‌ ಕೊಟ್ಟ ಪೇಸ್‌ಬುಕ್:

ಪೇಸ್‌ಬುಕ್ ನಲ್ಲಿ ಆಗಾಗ ಫೋಟೋ ಅಪ್ಲೋಡ್ ಮಾಡುತ್ತಿದ್ದರು. ಇದನ್ನು ಗಮನಿಸಿದ ನಿರ್ದೇಶಕ ಜಗದೀಶ್ ಮಲ್ನಾಡ್ ‘ಮಿಲನಾ’ ಸೀರಿಯಲ್ ನ ಒಂದು ಪಾತ್ರಕ್ಕೆ ಆಡಿಷನ್ ನೀಡುವಂತೆ ಕೆಳಿಕೊಂಡರು. ಮೊದಲೇ ಕಲಾ ಚಟುವಟಿಕೆಗಳಲ್ಲಿ ಆಸಕ್ತಿ ಇದ್ದಇವರು ದೊರೆತೆ ಅವಕಾಶವನ್ನು ಕೈ ಚೆಲ್ಲದೇ ಆಡಿಷನ್ ನೀಡಿಯೇ ಬಿಟ್ಟರು. ಮಿಲನಾ ಧಾರವಾಹಿಯಲ್ಲಿ ಪುಟ್ಟ ಪಾತ್ರವೊಂದನ್ನು ನಿರ್ವಹಿಸಿದರು. ಸಣ್ಣ ಪುಟ್ಟ ಪಾತ್ರಗಳಲ್ಲಿ ನಟಿಸುತ್ತಾ, ನಟನೆಯ ಸಾರವನ್ನು ಅರಿತ ಸೌಮ್ಯ ತದ ನಂತರ ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ‘ಒಂದೂರಲ್ಲಿ ರಾಜ ರಾಣಿ’, ಕಸ್ತೂರಿಯ ‘ಅಸಾಧ್ಯ ಅಳಿಯಂದಿರು’ ಧಾರವಾಹಿಯಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡರು. ರಾಜು ಎಂಬ ಆರ್ಟ್ ಸಿನಿಮಾದಲ್ಲೂ ನಟಿಸಿ ಅದಕ್ಕೆ ರಾಜ್ಯ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಮಾಡಲ್‌ ಕಮ್‌ ಡಬ್ಬಿಂಗ್‌ ಆಕ್ಟಿಸ್ಟ್:

ನಟನೆ ಮಾತ್ರವಲ್ಲದೇ ಭರತನಾಟ್ಯ ಕಲಿತಿರುವ ಇವರು ಡಬಿಂಗ್‌ ಕೂಡಾ ಮಾಡಬಲ್ಲರು. ಈಗಾಗಲೇ ಹಲವಾರು ನಟಿಯರಿಗೆ ಹಿನ್ನಲೆ ಧ್ವನಿಯನ್ನು ನೀಡಿರುವ ಇವರು, ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ಒಲವೇ ಜೀವನ ಸಾಕ್ಷಾತ್ಕಾರ, ಪಂಚಕಜ್ಜಾಯ ಧಾರವಾಹಿಗಳ ಕಲಾವಿದರಿಗೆ ಧ್ವನಿ ನೀಡಿದ್ದಾರೆ. ಇತ್ತೀಚಿಗೆ ಜಾಹಿರಾತುಗಳಿಗೂ ಮಾಡೆಲ್ ಆಗಿ ಗುರುತಿಸಿಕೊಂಡಿದ್ದಾರೆ. 

13 ನೇ ವಯಸ್ಸಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ 'ಪುಟ್ಟಗೌರಿ' ಅಜ್ಜಮ್ಮ!

ಪರಭಾಷೆಗಳಲ್ಲೂ ನಟನೆ:

ಪರಭಾಷೆಯಲ್ಲೂ ಕನ್ನಡದ ಕಂಪನ್ನು ಬೀರುತ್ತಿದ್ದಾರೆ. ಈಗಾಗಲೇ ತುಳು, ಕನ್ನಡ ಸೇರಿದಂತೆ ಪರಭಾಷೆಗಳಿಂದಲೂ ಆಫರ್ಸ್‌ಗಳು ಬಂದಿದ್ದು,  ಉತ್ತಮ ಕಥೆ ಸಿಕ್ಕರೆ ಸಿನಿಮಾದಲ್ಲಿ ನಟಿಸ ಬೇಕೆಂಬುದು ಇವರ ಹಂಬಲ.

ಸುಷ್ಮಾ ಸದಾಶಿವ್,ವಿವೇಕಾನಂದಕಾಲೇಜು,ಪುತ್ತೂರು

Follow Us:
Download App:
  • android
  • ios