ಕಲರ್ಸ್ ಕನ್ನಡದ ಖ್ಯಾತ ರಿಯಾಲಿಟಿ ಶೋ 'ಕನ್ನಡ ಕೋಟ್ಯಧಿಪತಿ' ಕೇಳುವ ಪ್ರಶ್ನೆಗೆ ಉತ್ತರಿಸಿ ವೇದಿಕೆ ಮೇಲೆ ಫಾಸ್ಟೆಸ್ಟ್ ಫಿಂಗರ್ ಆಟ ಆಡುವ ಅವಕಾಶ ಪಡೆದುಕೊಳ್ಳುವ ಮಂದಿ ಕಡಿಮೆ. ಫಾಸ್ಟೆಸ್ಟ್ ಫಿಂಗರ್ ರೌಂಡ್ ನಲ್ಲಿ ಭಾಗವಹಿಸಲು ಸಿಕ್ಕ ಅವಕಾಶ ಕಳೆದುಕೊಂಡ ಯುವತಿ ರೇಣುಕಾ ಕಣ್ಣೀರಿಟ್ಟಿದ್ದಾರೆ.

ಅಬ್ಬಬ್ಬಾ..! ಕೋಟ್ಯಧಿಪತಿ ಮೊದಲ ಸ್ಪರ್ಧಿಗೆ ಇಷ್ಟು ಲಕ್ಷನಾ?

 

ಫಾಸ್ಟೆಸ್ಟ್‌ ಫಿಂಗರ್‌ ಸುತ್ತಿನಲ್ಲಿ ವೇಗವಾಗಿ ಉತ್ತರ ನೀಡುವ ವ್ಯಕ್ತಿಗೆ ಕೋಟಿ ಆಟದಲ್ಲಿ ಅವಕಾಶ ಲಭ್ಯವಾಗುತ್ತದೆ. ಮೊದಲ ಸರಿ ಉತ್ತರ ನೀಡಿ ಗೆದ್ದವರು ನರೇಂದ್ರನಾಥ್‌. ಮುಂದಿನ ಹಂತಕ್ಕೆ ಹೋಗಲು ಅವಕಾಶ ಕಳೆದುಕೊಂಡರು. ಎರಡನೇ ಹಂತದ ಫಾಸ್ಟೆಸ್ಟ್ ಫಿಂಗರ್ ಸುತ್ತಿನಲ್ಲಿ ಪುನೀತ್ ರೇಣುಕಾ, ರತ್ನ ಹೆಸರು ಹೇಳಿದರು. ಇಬ್ಬರ ನಡುವೆ ಭಾರೀ ಸ್ಪರ್ಧೆ ಏರ್ಪಡುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಎರಡೇ ನಿಮಿಷ ಅಂತರದಲ್ಲಿ ರೇಣುಕಾ ಅವಕಾಶ ಕಳೆದುಕೊಂಡರು.

ಕೋಟ್ಯಧಿಪತಿಯಲ್ಲಿ ಲೈಫ್ ಲೈನ್ ಇದ್ರೂ ಎಡವಟ್ಟು ಮಾಡಿಕೊಂಡ ಡಾಕ್ಟರ್!

ನಾಲ್ಕು ಸಲ ಫಾಸ್ಟೆಸ್ಟ್‌ ಫಿಂಗರ್‌ ಆಟವಾಡಿದ ರೇಣುಕಾ ಕೊನೆಯ ಹಂತದಲ್ಲಿ ಅವಕಾಶ ವಂಚಿತರಾಗಿದ್ದಕ್ಕೆ ವೇದಿಕೆ ಮೇಲೆ ಕಣ್ಣೀರಿಟ್ಟರು. ರೇಣುಕಾಳನ್ನು ನೋಡಿ ಪುನೀತ್ ರಾಜ್‌ಕುಮಾರ್‌ ಸಮಾಧಾನಪಡಿಸುವ ಪ್ರಯತ್ನ ಮಾಡಿದರು.