ಕಲರ್ಸ್ ಕನ್ನಡದ ಖ್ಯಾತ ರಿಯಾಲಿಟಿ ಶೋ 'ಕನ್ನಡದ ಕೋಟ್ಯಧಿಪತಿ'! ಸರಿ ಉತ್ತರ ಕೊಟ್ಟರೆ ಕೋಟಿ, ಹಂತಗಳು ಮುಗಿಸಿದರೆ ಲಕ್ಷ, ಸೋತರೆ ಸಾವಿರ. ಲೈಫ್‌ನ ಚಾಲೆಂಜ್‌ ಆಗಿ ತೆಗೆದುಕೊಂಡು ವಾಹ್...! ಒಮ್ಮೆ ಆದ್ರೂ ಹಾಟ್‌ ಸೀಟ್‌ನಲ್ಲಿ ಕೂರಬೇಕಪ್ಪಾ ಅಂತ ಸ್ಪರ್ಧಿಸಿದ ಶಮೀಮ್ ಬಾನು ಒಂದೇ ಒಂದು ತಪ್ಪಿನಿಂದ ಎರಡನೇ ಹಂತಕ್ಕೆ ತಲುಪುವ ಚಾನ್ಸ್‌ ಮಿಸ್ ಮಾಡಿಕೊಂಡರು.

ಸ್ಪರ್ಧಿಯಾಗಿ ಆಯ್ಕೆ ಆಗಲು ಶಮೀಮ್ ಬಾನುಗೆ 'ಕರ್ನಾಟಕದ ಈ ಮುಖ್ಯಮಂತ್ರಿಗಳನ್ನು ಅವರ ಮೊದಲ ಅಧಿಕಾರ ಸ್ವೀಕರಿಸಿದ ಕಾಲಾನುಕ್ರಮದಲ್ಲಿ ಜೋಡಿಸಿ?' ಎಂಬ ಪ್ರಶ್ನೆ ಕೇಳಲಾಗಿತ್ತು. ಇದಕ್ಕೆ ಜೆ.ಎಚ್.ಪಟೇಲ್, ಕೆಂಗಲ್ ಹನುಮಂತಯ್ಯ, ರಾಮಕೃಷ್ಣ ಹೆಗಡೆ, ಎಚ್‌.ಡಿ. ಕುಮಾರಸ್ವಾಮಿ- 4 ಆಯ್ಕೆಗಳನ್ನು ನೀಡಲಾಗಿತ್ತು. ಇದಕ್ಕೆ ಶಮೀಮ್ ಸರಿಯಾದ ಉತ್ತರ ನೀಡಿದರು. ಸ್ವತಃ ಪುನೀತ್ ರಾಜ್‌ಕುಮಾರ್ ಇವರ ಕಾನ್ಫಿಡೆನ್ಸ್ ಗೆ ಫಿದಾ ಆಗಿದ್ದರು.

ಅಬ್ಬಬ್ಬಾ..! ಕೋಟ್ಯಧಿಪತಿ ಮೊದಲ ಸ್ಪರ್ಧಿಗೆ ಇಷ್ಟು ಲಕ್ಷನಾ?

ಮೊದಲನೇ ಹಂತದಲ್ಲಿ 5 ಪ್ರಶ್ನೆಗಳಿಗೆ ಉತ್ತರಿಸಿ ಇನ್ನೇನು 2 ನೇ ಹಂತ ಶುರುವಾಗುವುದರಲ್ಲಿ ಕೇಳಿದ ಪ್ರಶ್ನೆಗೆ ಶಮೀಮ್ ಕೊಂಚ ಎಟವಟ್ಟು ಮಾಡಿಕೊಂಡರು. 'ಕಾಂತಾ ಎಂಬ್ರಾಯಿಡರಿ ಸೀರೆಗಳನ್ನು ಸಂಪ್ರದಾಯವಾಗಿ ಯಾವ ರಾಜ್ಯದಲ್ಲಿ ತಯಾರಿಸುತ್ತಾರೆ? ಎಂದು ಕೇಳಲಾಯಿತು. ಇದಕ್ಕೆ ಲೈಫ್‌ ಲೈನ್ ಬಳಸಿ ಆ ನಂತರ ಕೊಟ್ಟ ಉತ್ತರ ತಪ್ಪಾಗಿತ್ತು. ಮೊದಲ ಹಂತದಿಂದ ಪಡೆದ 10 ಸಾವಿರ ರೂಪಾಯಿಗೆ ತೃಪ್ತಿಪಟ್ಟುಕೊಳ್ಳಲಾಯಿತು.