ಬೆಂಗಳೂರು (ಜೂ. 24): ಕಿರುತೆರೆಯ ಬಹುಜನಪ್ರಿಯ ರಿಯಾಲಿಟಿ ಶೋ ‘ಕನ್ನಡದ ಕೋಟ್ಯಧಿಪತಿ’ ಸೀಸನ್ 4 ಶುರುವಾಗಿದೆ. ಮೊದಲ ಅಭ್ಯರ್ಥಿಯಾಗಿ ಕುಮಟಾ ಮೂಲದ ದೀಪಾ ಶ್ರೀನಿವಾಸ್ ಹರಿಕಾಂತ್ ಆಯ್ಕೆಯಾದರು. 
ಮೊದಲ ಐದು ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡಿ ಸೇಫ್ ಆದರು. ಹತ್ತು ಸಾವಿರ ಗಳಿಸಿದರು. 

2 ನೇ ಮಗುವಿನ ಸೀಮಂತದಲ್ಲಿ ಮಿಂಚಿದ ಸ್ಯಾಂಡಲ್‌ವುಡ್ ನಟಿ

ಮೊದಲ ಹಂತ ಗೆದ್ದು ಸರಾಗವಾಗಿ ಆಡುತ್ತಿದ್ದ ದೀಪಾ ಎರಡನೇ ಹಂತದಲ್ಲೂ ಚೆನ್ನಾಗಿಯೇ ಆಡಿದರು. ಹತ್ತೂ ಪ್ರಶ್ನೆಗೆ ಸರಿಯಾಗಿ ಉತ್ತರಿಸಿ 3.20 ಲಕ್ಷ ತಮ್ಮದಾಗಿಸಿಕೊಂಡರು. ಆಗ ಅವರ ಮೇಲಿನ ನಿರೀಕ್ಷೆ ಇನ್ನಷ್ಟು ಹೆಚ್ಚಾಯಿತು.

ಯಾವ ಲವ್‌ಸ್ಟೋರಿಗೂ ಕಮ್ಮಿ ಇಲ್ಲ ಈ ಬಿಗ್‌ಬಾಸ್ ಸ್ಪರ್ಧಿ ಕಹಾನಿ!

ಮುಂದಿನ ಪ್ರಶ್ನೆ 6.40 ಲಕ್ಷ ರೂಪಾಯಿಯದ್ದಾಗಿತ್ತು. ಅದಕ್ಕೂ ಸರಿ ಉತ್ತರ ನೀಡಿ ಅಚ್ಚರಿ ಮೂಡಿಸಿದರು. ನಂತರ 12 ಪ್ರಶ್ನೆಗಳಿಗೆ ಸರಿಯುತ್ತರ ನೀಡಿ 12.50 ಲಕ್ಷವನ್ನು ಸೇಫ್ ಮಾಡಿಕೊಂಡರು. ಇಲ್ಲಿಗೆ ಕ್ವಿಟ್ ಮಾಡಿ 12.50 ಲಕ್ಷವನ್ನು ತಮ್ಮದಾಗಿಸಿಕೊಂಡರು.