ನಿಮಗೆ ಗೊತ್ತಿರದ ಶಾನ್ವಿ ಶ್ರೀವಾಸ್ತವ್

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 10, Aug 2018, 9:41 AM IST
Cine journey of Shanvi Shrivastav
Highlights

ಆ್ಯಕ್ಟಿಂಗ್ ಜತೆಗೆ ಸಿಂಗಿಂಗ್, ಸ್ವಿಮ್ಮಿಂಗ್, ಡಾನ್ಸಿಂಗ್ ಹಾಗೂ ಕುದುರೆ ಸವಾರಿ ನನ್ನ ಆಸಕ್ತಿಗಾಗಿ. ನಟಿಯಾಗಿ ಅವೆಲ್ಲವೂ ಗೊತ್ತಿರಬೇಕು ಅಂತಲೂ ಕಲಿತುಕೊಂಡಿದ್ದೇನೆ. ಓದುವುದರಲ್ಲೂ ನನಗೆ ಆಸಕ್ತಿ ಹೆಚ್ಚು. ವಿಶೇಷವಾಗಿ ಕಾದಂಬರಿ ಓದುವ ಹುಚ್ಚು. ಮನೆಯಲ್ಲಿದ್ದರೆ, ಓದುವುದು ಮಾಮೂಲು. ಅದು ಬಿಟ್ಟರೆ ಅಡುಗೆ ಮಾಡುವುದರಲ್ಲೂ ಖುಷಿಯಿದೆ ಎನ್ನುತ್ತಾರೆ ಶಾನ್ವಿ ಶ್ರೀವಾಸ್ತವ್. 

ಬೆಂಗಳೂರು (ಆ. 10): ಶಾನ್ವಿ ಶ್ರೀವಾಸ್ತವ ಹೆಸರಿನ ವಾರಣಾಸಿ ಮೂಲದ ಮುಂಬೈ ಬೆಡಗಿ ‘ಚಂದ್ರಲೇಖ’ ಚಿತ್ರದೊಂದಿಗೆ ಕನ್ನಡಕ್ಕೆ ಬಂದು ಆರು ವರ್ಷ ಕಳೆದಿವೆ.

ಎಂಟ್ರಿಯಾದ ಹೊತ್ತಲ್ಲಿ ಕನ್ನಡದಲ್ಲೇ ಭದ್ರವಾಗಿ ನೆಲೆಯೂರಿ ನಿಲ್ಲಬಲ್ಲ ನಟಿಯಾಗುತ್ತಾರೆನ್ನುವ ನಿರೀಕ್ಷೆ ಯಾವೊಬ್ಬ ಸಿನಿಮಾ ಪ್ರೇಮಿಗೂ ಇರಲಿಲ್ಲ. ಆದರೆ ಇವತ್ತು ಕನ್ನಡದ ಬಹುಬೇಡಿಕೆಯ ನಟಿ. ಸಾಲು ಸಾಲು ಸ್ಟಾರ್ ಸಿನಿಮಾಗಳಲ್ಲಿ ಅಭಿನಯಿಸುವ ಅವಕಾಶ ಗಿಟ್ಟಿಸಿಕೊಂಡ ಲಕ್ಕಿ ಹೀರೋಯಿನ್. ಚಿರಂಜೀವಿ ಸರ್ಜಾ,ಯಶ್, ಶ್ರೀಮುರಳಿ, ಗಣೇಶ್, ದರ್ಶನ್ ಸಿನಿಮಾಗಳಲ್ಲಿ ಅಭಿನಯಿಸಿದ್ದಾಗಿದೆ. ಈಗ ರಕ್ಷಿತ್ ಶೆಟ್ಟಿ, ಉಪೇಂದ್ರ, ರವಿಚಂದ್ರನ್ ಸಿನಿಮಾಗಳಲ್ಲೂ ಅಭಿನಯಿಸುವ ಅವಕಾಶ ಸಿಕ್ಕಿದೆ.

ಮನೋರಂಜನ್, ಸುಮಂತ್ ಅವರಂತಹ ಹೊಸಬರಿಗೂ ನಾಯಕಿ ಆಗಿ ಸಾಥ್ ನೀಡಿದ್ದಾರೆ. ಇದೀಗ ರಾಜ್ ಕುಟುಂಬದ ಸಂಬಂಧಿ ಸೂರಜ್ ನಾಯಕನಾಗಿ ಎಂಟ್ರಿಯಾಗುತ್ತಿರುವ ‘ಅಖಿಲ್’ ಚಿತ್ರಕ್ಕೂ ಶಾನ್ವಿ ನಾಯಕಿ. ಹೊಸಬರ ಮತ್ತೆರಡು ಪ್ರಾಜೆಕ್ಟ್‌ಗಳು ಅವರ ಕೈಯಲ್ಲಿವೆ. ಒಂದೆಡೆ ಸ್ಟಾರ್, ಮತ್ತೊಂದೆಡೆ ಹೊಸಬರು, ಯಾವುದೇ ಬ್ರಾಂಡ್‌ಗೆ ಸಿಲುಕದೆ ಮನಸ್ಸಿಗೆ ಒಪ್ಪುವ ಪಾತ್ರಗಳ ಬೆನ್ನು ಬಿದ್ದು ಕನ್ನಡದ ಪ್ರೇಕ್ಷಕರನ್ನು ರಂಜಿಸುತ್ತಿರುವ ಪರಭಾಷೆಯ ನಟಿ ಎನ್ನುವುದೇ ಶಾನ್ವಿ ಸಿನಿಜರ್ನಿಯ ವಿಶೇಷ.

ಶಾನ್ವಿ ಅದೃಷ್ಟ
ನಾನು ಅಲ್ಲಿಂದ ಬಂದು ಇಲ್ಲಿ ಬ್ಯುಸಿ ಆಗಿದ್ದೇನೆ. ನಿಜಕ್ಕೂ ಐ ಆ್ಯಮ್ ಲಕ್ಕಿ. ಗುಡ್ ಆ್ಯಂಡ್ ಬ್ಯಾಡ್ ಟೈಮ್ ಅನ್ನೋದು ಎಲ್ಲರಿಗೂ ಇರುತ್ತೆ. ಇಲ್ಲಿಗೆ ಬಂದ ಆರಂಭದ ದಿನಗಳಲ್ಲಿ ಒಂದಷ್ಟು ನಿರಾಸೆ, ಬೇಸರ ಅಂತೆನಿಸಿದ್ದು ನಿಜ. ಇಲ್ಲಿದ್ದುಕೊಂಡೇ ಅತ್ತ ಒಂದು ತೆಲುಗು ಸಿನಿಮಾ ಮುಗಿಸಿಕೊಂಡು ಬಂದೆ. ಆ ಹೊತ್ತಿಗೆ ಸಿಕ್ಕಿದ್ದು ‘ಮಾಸ್ಟರ್ ಪೀಸ್’. ಅದು ಬಂದ ನಂತರ ನನ್ನ ಸಿನಿ ಜರ್ನಿಗೆ ಟ್ವಿಸ್ಟ್ ಸಿಕ್ಕಿತು. ಒಂದಾದ ಮೇಲೊಂದು ಸಿನಿಮಾಗಳ ಆಫರ್ ಬಂದವು. ಗಣೇಶ್, ದರ್ಶನ್ ಅವರಂತಹ ಸ್ಟಾರ್ ಸಿನಿಮಾಗಳೇ ಸಿಕ್ಕವು.

ಈಗಲೂ ಅಷ್ಟೇ ದೊಡ್ಡ ಸ್ಟಾರ್ ಸಿನಿಮಾಗಳು ಸಿಕ್ಕಿವೆ. ಕನ್ನಡದ ಜನ ನನ್ನನ್ನು ಒಪ್ಪಿಕೊಂಡಿದ್ದಾರೆ. ಅವರ ಪ್ರೀತಿ ಸಿಕ್ಕಿದೆ. ಅದು ನನ್ನ ಅದೃಷ್ಟ. ಶಾನ್ವಿ ನಿಲುವು ‘ಸ್ಟಾರ್ ಸಿನಿಮಾಗಳ ಹೀರೋಯಿನ್’ ಎನ್ನುವ ಹಣೆಪಟ್ಟಿ ಕಟ್ಟಿಕೊಳ್ಳುವುದು
ನಂಗಿಷ್ಟವಿಲ್ಲ. ಕಥೆ, ಪಾತ್ರ ಮತ್ತು ತಂಡ ಚೆನ್ನಾಗಿದ್ದರೆ ಹೊಸಬರು-ಹಳಬರು ಎಂಬ ಭೇದ ಇಲ್ಲದೆ ಸಿನಿಮಾ ಒಪ್ಪಿಕೊಳ್ಳುತ್ತೇನೆ.

ನಂಗೀಗ 24 ವರ್ಷ. ಈ ವಯಸ್ಸಿನಲ್ಲಿ 24 ವರ್ಷದ ಹೀರೋ ಜತೆಗೂ ನಟಿಸಬಲ್ಲೆ. ಹಾಗೆಯೇ 50 ವರ್ಷದ ಅನುಭವಿ ನಟರಿಗೂ ಹೀರೋಯಿನ್ ಆಗಬಲ್ಲೆ. ಹೀರೋಯಿನ್ ಎನಿಸಿಕೊಳ್ಳುವುದಕ್ಕಿಂತ ಉತ್ತಮ ಕಲಾವಿದೆ ಎನಿಸಿಕೊಳ್ಳಬೇಕು. ಕೆಲವು ನಿರ್ದೇಶಕರು ಬಂದು ಇದು ಸ್ಟಾರ್ ಸಿನಿಮಾ ಅಂತಾರೆ. ಆದ್ರೆ ನಾನು ಮೊದಲು ಕೇಳುವುದು ನಿಮ್ಮ ಚಿತ್ರದಲ್ಲಿ ನನ್ನ ಪಾತ್ರ ಹೇಗಿದೆ ಹೇಳಿ ಅಂತ.

ಶಾನ್ವಿ ಗುರಿ
ಸ್ಟ್ರಾಂಗ್ ಪಾತ್ರ ಇನ್ನೂ ಸಿಕ್ಕಿಲ್ಲ ಎನ್ನುವ ಕೊರಗಿದೆ. ಇಂಥದ್ದೇ ಪಾತ್ರಕ್ಕೆ ಬ್ರಾಂಡ್ ಆಗಬೇಕೆನ್ನುವ ಬಯಕೆ ನನಗಿಲ್ಲ. ನಟಿ ಎನ್ನುವುದಕ್ಕಿಂತ ಕಲಾವಿದೆ ಆಗಬೇಕೆನ್ನುವುದು ನನ್ನಾಸೆ. ಅದಕ್ಕೆ ಪೂರಕವಾಗಿ ಎಮೋಷನಲ್ ಕತೆಯೊಳಗೆ ಸ್ಟ್ರಾಂಗ್ ಪಾತ್ರದಲ್ಲಿ ಕಾಣಿಸಿಕೊಳ್ಳುವ ಹಂಬಲವಿದೆ. ಯಾವಾಗ ಸಿಗುತ್ತಾ ಕಾಯುತ್ತಿದ್ದೇನೆ.

ಶಾನ್ವಿ ಕನ್ನಡತಿ
ನನಗೆ ಖುಷಿ ಕೊಟ್ಟಿದ್ದು ಕನ್ನಡ ಚಿತ್ರರಂಗ. ಬೇರೆ ಭಾಷೆಗಳತ್ತ ಮನಸ್ಸು ಮಾಡಿಲ್ಲ, ನನ್ನ ಸಿನಿಜರ್ನಿ ಶುರುವಾಗಿದ್ದೇ ಟಾಲಿವುಡ್‌ನಿಂದ. ಅಲ್ಲಿಂದಲೂ ಈಗ ಆಫರ್ ಬರುತ್ತಿವೆ. ಆದ್ರೆ, ನಾನು ಬಯಸುವ ಪಾತ್ರ ಅಲ್ಲಿ ಸಿಗುತ್ತಿಲ್ಲ. ಹಾಗಾಗಿ ನಾನು ಅಲ್ಲಿಗೆ ಹೋಗಲು ಬಯಸಿಲ್ಲ. ತಮಿಳಿನಲ್ಲೂ ಅಷ್ಟೇ. ಇಲ್ಲಿ ತನಕ ಐಡೆಂಟಿಟಿ ಸಿಗುವಂತಹ ಪಾತ್ರ ಸಿಕ್ಕಿಲ್ಲ . ಈಗ ಒಂದು ಸಿನಿಮಾದ ಆಫರ್ ಬಂದಿದೆ. ಒಳ್ಳೆಯ ಪಾತ್ರವೂ ಅದರಲ್ಲಿದೆ. ಹಾಗೆಯೇ ಅದು ಸ್ಟಾರ್ ಸಿನಿಮಾ ಕೂಡ. ಮಾತುಕತೆ ನಡೆದಿದೆ. ಕನ್ನಡದಲ್ಲೇ ನಾನು ಖುಷಿ ಆಗಿದ್ದೇನೆ. ಇನ್ನಾಕೆ ಪರಭಾಷೆ? 

-ದೇಶಾದ್ರಿ ಹೊಸ್ಮನೆ 

loader