ಬೆಂಗಳೂರು (ನ. 04): ನಟ ದುನಿಯಾ ವಿಜಿಗೆ ಮತ್ತೊಂದು ಆಘಾತ ಎದುರಾಗಿದೆ. ನಿರ್ಮಾಪಕ ಸುಂದರ್ ಗೌಡನನ್ನ ಎಸ್ಕೇಪ್ ಮಾಡಿಸಿದ ಕೇಸಲ್ಲಿ ವಿಜಿ ಮೇಲೆ ಅಚ್ಚುಕಟ್ಟು ಪೊಲೀಸರು ಚಾರ್ಜ್ ಶೀಟ್  ಸಲ್ಲಿಸಿದ್ದಾರೆ. 

ಮಾಸ್ತಿಗುಡಿ ಚಿತ್ರೀಕರಣದ ವೇಳೆ ಖಳನಟರ ಸಾವಿನ ಕೇಸ್ ನಲ್ಲಿ ಸುಂದರ್ ಗೌಡ ಕೋರ್ಟ್ ಗೆ ಹಾಜರಾಗಿರಲಿಲ್ಲ. ಹೀಗಾಗಿ ಸುಂದರ್ ಗೌಡ ಮನೆಗೆ ಪೊಲೀಸರು ಅರೆಸ್ಟ್ ವಾರೆಂಟ್ ತಂದಿದ್ದರು.   ಈ ವೇಳೆ ಅಲ್ಲೇ ಇದ್ದ ದುನಿಯಾ ವಿಜಿ ಪೊಲೀಸರ ಮೇಲೆ ದಬ್ಬಾಳಿಕೆ ಮಾಡಿದರು.  ರಾತ್ರಿ ವೇಳೆ ದಬ್ಬಾಳಿಕೆ ಮಾಡ್ತಿದ್ದೀರ, ನಿಮ್ಮ ಮೇಲೆ ಕೇಸ್ ಹಾಕಿಸ್ತೀನಿ ಅಂತಾ ಅವಾಜ್ ಹಾಕಿದ್ದರು  ಅಲ್ಲದೇ ಸುಂದರ್ ಪಿ ಗೌಡನನ್ನ ತಪ್ಪಿಸಿಕೊಳ್ಳಲು ಸಹಾಯ ಮಾಡಿದ್ದರು ವಿಜಿ. 

ಕೋರ್ಟ್ ಆದೇಶವನ್ನ ಉಲ್ಲಂಘಿಸಿ, ಸರ್ಕಾರಿ ಕೆಲಸಕ್ಕೆ ತಡೆಯೊಡ್ಡಿದ ಆರೋಪದ ಮೇಲೆ ದುನಿಯಾ ವಿಜಿ ಮೇಲೆ ದೂರು ದಾಖಲಿಸಲಾಗಿತ್ತು. ಇದೀಗ 65 ಪುಟಗಳ ಚಾರ್ಜ್ ಶೀಟ್ ಸಲ್ಲಿಸಿದ ಪೊಲೀಸರು ಎರಡನೇ ಎಸಿಎಂಎಂ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದಾರೆ.