ಬೆಂಗಳೂರು: ಬಿಗ್‌ಬಾಸ್ ಸೀಸನ್ 5ನಲ್ಲಿ ಹೆಚ್ಚು ಮನೋರಂಜನೆ ನೀಡಿದ್ದು ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ. ಅಲ್ಲದೇ ಜೆಕೆ, ಚಂದನ್  ಹಾಗೂ ಶೃುತಿ ಪ್ರಕಾಶ್ ನಡುವಿನ ಕೆಮಿಸ್ಟ್ರಿ ಇಂಟರೆಸ್ಟಿಂಗ್ ಆಗಿರುತ್ತಿದ್ದವು.

ಬಿಗ್‌ಬಾಸ್ ಮನೆಯಲ್ಲಿ ಜೆಕೆ ಮೇಲೆ ಶೃತಿ ಪ್ರಕಾಶ್‌ ವಿಶೇಷ ಒಲವು ತೋರಿಸುತ್ತಿದ್ದರು. 'ನನ್ನ ಡ್ರೀಮ್ ಗರ್ಲ್‌ನಂತಿದ್ದಾಳೆ ಶೃತಿ' ಎಂದು ಚಂದನ್ ಹೇಳಿಕೊಳ್ಳುವ ಮೂಲಕ, ಆಕೆ ಮೇಲಿರುವ ಒಲವನ್ನು ವ್ಯಕ್ತಪಡಿಸಿದ್ದರು. ಇದೀಗ ಈ ಎರಡು ಅದ್ಭುತ ಸಂಗೀತ ಪ್ರತಿಭೆಗಳು ಒಂದಾಗುತ್ತಿದ್ದು, ಅಭಿಮಾನಿಗಳಿಗೊಂದು ಗುಡ್ ನ್ಯೂಸ್ ಹೇಳಿದ್ದಾರೆ.

ಸಂಗೀತ ಯೋಜನೆಯೊಂದಕ್ಕೆ ಈ ಇಬ್ಬರೂ ಜೋಡಿಯಾಗಲಿದ್ದಾರೆ. ಹೊಸ ಹಾಡೊಂದನ್ನು ಜತೆಯಾಗಿ ಹೇಳಲಿದ್ದು, ಎಲ್ಲರನ್ನೂ ಮನರಂಜಿಸುವುದು ಗ್ಯಾರಂಟಿ ಎನ್ನಲಾಗುತ್ತಿದೆ. 

 

A song coming out soon 😊🎥👸🏻 Stay tuned.! @chandanshettyofficial

Shruti Prakash (@shrutiprakash) ರಿಂದ ಹಂಚಲಾದ ಪೋಸ್ಟ್ ಅವರು ಮೇ 8, 2018 ರಂದು 12:37ಪೂರ್ವಾಹ್ನ PDT ಸಮಯಕ್ಕೆ ರಂದು

ಕಳೆದ ತಿಂಗಳೇ ಇನ್‌ಸ್ಟಾಗ್ರಾಮ್‌ನಲ್ಲಿ ಈ ಬಗ್ಗೆ ಪೋಸ್ಟ್ ಹಾಕಿದ್ದು, ಏನೆಂಬ ಕುತೂಹಲಕ್ಕೆ ಇದೀಗ ಶೃತಿ ತೆರೆ ಎಳೆದಿದ್ದಾರೆ. ಇದಲ್ಲದೇ ಬಿಗ್‌ಬಾಸ್‌ನ ಈ ಸ್ಪರ್ಧಿ ವಿವಿಧ ಕಿರುತೆರೆ ಕಾರ್ಯಕ್ರಮಗಳಲ್ಲಿಯೂ ಕಾಣಿಸಿಕೊಳ್ಳುತ್ತಿದ್ದಾರೆ. ಸಾಥ್ ನಿಭಾನಾ ಸಾತಿಯಾ ಮತ್ತು ರಾಧ ಹಿ ಬವಾರಿಯಲ್ಲಿ ನಟಿಸುತ್ತಿದ್ದಾರೆ. ವಿವಿಧ ಭಾಷೆಗಳಲ್ಲಿಯೂ ಹಾಡುತ್ತಿದ್ದು, ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಇತ್ತ ಚಂದನ್ ಶೆಟ್ಟಿ ವಿವಿಧ ಕಾರ್ಯಕ್ರಮಗಳಲ್ಲಿ ಬ್ಯುಸಿಯಾಗಿದ್ದು, ಮಾಸ್ಟರ್ ಡ್ಯಾನ್ಸರ್ ಕಾರ್ಯಕ್ರಮದಲ್ಲಿ ಜಡ್ಜ್ ಆಗಿ ಕಾಣಿಸಿಕೊಂಡಿದ್ದಾರೆ.