ನಿರ್ದೇಶಕ ಪ್ರೀತಂ ಗುಬ್ಬಿ ನಿರ್ದೇಶನದ ಯುವ ನಟ ಪೃಥ್ವಿ ಅಭಿನಯದ ನಾನು ಮತ್ತು ವರಲಕ್ಷ್ಮಿ ಚಿತ್ರ ತಂಡ ಹೊಸ ಆಫರ್ ಒಂದನ್ನ ನೀಡಿದೆ. ಬೈಕ್ ರೇಸ್'ಗೆ ಸಂಬಂಧಪಟ್ಟ ಸಿನಿಮಾವಾಗಿರುವುದರಿಂದ ನಿರ್ದೇಶಕರು ಸ್ಪೆಷಲ್ ಬೈಕ್ ಗೆಲ್ಲುವ ಆಫರ್ ನೀಡಿದೆ.

ಈ ಚಿತ್ರದಲ್ಲಿ ನಟ ಪ್ರಕಾಶ್ ರೈ ಅವರು ಬಳಸಿರುವ RX 100 ಬೈಕ್'ನ್ನು ಗೆಲ್ಲುವ  ಅವಕಾಶವನ್ನು ಚಿತ್ರತಂಡ ಮಾಡಿದೆ. ನೀವು ಮಾಡಬೇಕಾಗಿರುವುದು ಇಷ್ಟೇ, ವಿ.ಹರಿಕೃಷ್ಣ ಅವರು ಹಾಡಿರುವ 'ಎಸ್ ಬ್ರೋ' ಎಂಬ ಹಾಡನ್ನು ಡಬ್ ಸ್ಮಾಶ್ ಮಾಡಿ 9901707818 ಫೋನ್ ನಂ.ಗೆ ಕಳುಹಿಸಿಕೊಡಬೇಕು. ನಟ ಕಮ್ ಸಂಗೀತ ನಿರ್ದೇಶಕ ಸಾಧು ಕೋಕಿಲಾ ವಿಜೇತರನ್ನು ಆಯ್ಕೆ ಮಾಡಲಿದ್ದಾರೆ.

ವಿಜೇತರಾದವರಿಗೆ ಚಿತ್ರದ ಫಸ್ಟ್ ಡೇ ಫಸ್ಟ್ ಶೋ ದಿನ, ನಿರ್ದೇಶಕರು ಮತ್ತು ತಂಡದವರು ಸ್ಪೆಷಲ್ ಬೈಕ್ ವಿತರಣೆ ಮಾಡಲಿದ್ದಾರೆ.