ಖಡಕ್ ಅಧಿಕಾರಿ ಡಿಕೆ ರವಿ ಆತ್ಮಚರಿತ್ರೆಯ ಚಂಬಲ್ ಟ್ರೈಲರ್!
ಸ್ಯಾಂಡಲ್‌ವುಡ್‌ನಲ್ಲಿ ದೂಳು ಎಬ್ಬಿಸಲಿರುವ ಐಎಎಸ್ ಅಧಿಕಾರಿ ಡಿಕೆ ರವಿ ಆತ್ಮಚರಿತ್ರೆ ಟ್ರೈಲರ್ ಗೆ ಭರ್ಜರಿ ರೆಸ್ಪಾನ್ಸ್ ಸಿಗುತ್ತಿದೆ.
ನೀನಾಸಂ ಸತೀಶ್ ಹಾಗೂ ಸೋನು ಗೌಡ ಅಭಿನಯದ ಚಿತ್ರ ಚಂಬಲ್ ಈಗಾಗಲೆ ಸಾಕಷ್ಟು ಗಮನ ಸೆಳೆದಿದೆ. ಚಿತ್ರದ ಟೀಸರ್ ತಮಿಳು ನಟ ಧನುಷ್ ಬಿಡುಗಡೆ ಮಾಡಿದ್ದರು. ಟ್ರೈಲರ್‌ನ್ನು ಸ್ಯಾಂಡಲ್‌ವುಡ್ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ರಿಲೀಸ್ ಮಾಡಿದರು.
ಚಿತ್ರದ ನಿರ್ದೇಶನ ಜೇಕಬ್ ವರ್ಗೀಸ್ ಮಾಡಿದ್ದು ಈ ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ ಯಾವುದೆ ಕಟ್ ಇಲ್ಲದೆ ಯು/ಎ ಸರ್ಟಿಫಿಕೆಟ್ ಸಿಕ್ಕಿತ್ತು.
ಡಿಕೆ ರವಿಯ ಪಾತ್ರವನ್ನು ಘನತೆ ಗೌರವದಿಂದ ಕಾಪಾಡಿಕೊಂಡು ತನ್ನ ಅಧಿಕಾರದಲ್ಲಿದ್ದಾಗ ಮಾಡಿದ ಸಾಮಾಜ ಸೇವೆ, ಭ್ರಷ್ಟಾಚಾರ ನಿರ್ಮೂಲನೆ, ಐಟಿ ರೇಡ್ ಮಾಡಿಸಿದ ರೀತಿ ಎಲ್ಲವು ಒಳಗೊಂಡಿದೆ.
ಟ್ರೈಲರ್ ನೋಡಿದಾಕ್ಷಣ ಚಿತ್ರ 100 ದಿನ ಓಡು ನಿರೀಕ್ಷೆ ಮೂಡಿಸಿದೆ. .ಸಾಮಾಜಕ್ಕೆ ಇದೊಂದು ಮಾದರಿ ಚಿತ್ರವಾಗಿ ನಿಲ್ಲುತ್ತದೆ.