ಸ್ಯಾಂಡಲ್’ವುಡ್’ನಲ್ಲಿ ಮತ್ತೊಂದು ಟೈಟಲ್ ವಿವಾದ; ಏನಿದು ಹೊಸ ವರಾತ?

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 27, Jul 2018, 1:29 PM IST
Challenging Star Darshan starer 'Odeyar' cinema tittle controversy raised
Highlights

ಸ್ಯಾಂಡಲ್'ವುಡ್ ನಲ್ಲಿ ಮತ್ತೊಂದು ಟೈಟಲ್ ವಿವಾದ ಶುರುವಾಗಿದೆ.  ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಒಡೆಯರ್ ಚಿತ್ರದ ಹೆಸರು ಬದಲಾವಣೆಗೆ ಕನ್ನಡ ಕ್ರಾಂತಿದಳ ಸಂಘಟನೆ ಪಟ್ಟು ಹಿಡಿದಿದೆ. 

ಬೆಂಗಳೂರು (ಜು. 27): ಸ್ಯಾಂಡಲ್'ವುಡ್ ನಲ್ಲಿ ಮತ್ತೊಂದು ಟೈಟಲ್ ವಿವಾದ ಶುರುವಾಗಿದೆ. 

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಒಡೆಯರ್ ಚಿತ್ರದ ಹೆಸರು ಬದಲಾವಣೆಗೆ ಕನ್ನಡ ಕ್ರಾಂತಿದಳ ಸಂಘಟನೆ ಪಟ್ಟು ಹಿಡಿದಿದೆ. ಮೈಸೂರಿನ ಕೆ.ಆರ್.ಠಾಣೆಯಲ್ಲಿ ಚಿತ್ರ ತಂಡದ ವಿರುದ್ದ ದೂರು ನೀಡಿದೆ. 
 
ಒಡೆಯರ್ ಎಂಬ ಪದ ಮೈಸೂರು ಅರಸರ ಸ್ವತ್ತು. ಅವರ ಮೇಲೆ ಅಪಾರ ಗೌರವ ಅಭಿಮಾನವಿದೆ. ನೆಲ ಜಲ‌ ವಿಚಾರದಲ್ಲಿ ಅವರ ಕೊಡುಗೆ ಅಪಾರ. ಮೈಸೂರು ಜನತೆ ಅರಸರನ್ನು ಭಗವಂತನ‌ ರೀತಿ ಕಾಣುತ್ತೇವೆ. ರೌಡಿಂ ,ಹಾಸ್ಯ,ವ್ಯಾಪರಿ ಚಿತ್ರಗಳಿಗೆ ಒಡೆಯರ್ ಹೆಸರು ಇಡಲು ಬಿಡುವುದಿಲ್ಲ. ಟೈಟಲ್ ಬದಲಾಯಿಸದಿದ್ದರೆ ಚಿತ್ರಿಕರಣಕ್ಕೆ ಅಡ್ಡಿಪಡಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.  

loader