ಬೆಂಗಳೂರು (ಜ. 28):  ಫೆ. 16 ಕ್ಕೆ ಸ್ಯಾಂಡಲ್ ವುಡ್ ಡಿ ಬಾಸ್ ಹುಟ್ಟುಹಬ್ಬವಿದ್ದು ನೆಚ್ಚಿನ ನಟನಿಗೆ ಬರ್ತಡೇ ಗಿಫ್ಟ್ ಕೊಡಲು ಅಭಿಮಾನಿಗಳು ತಯಾರಾಗಿದ್ದಾರೆ.

ಖ್ಯಾತ ಗೀತ ರಚನೆಗಾರ ನಾಗೇಂದ್ರ ಪ್ರಸಾದ್ ದರ್ಶನ್ ಬರ್ತಡೇಗೆ ಸ್ಪೆಷಲ್ ಗಿಫ್ಟ್ ನೀಡಲಿದ್ದಾರೆ.

ಕಚಗುಳಿ ಇಡುವಂತಿದೆ ’ಯಜಮಾನ’ ಚಿತ್ರದ ಈ ಹಾಡು

 

ಸಿದ್ಧಗಂಗಾ ಮಠ ಅನ್ನದಾಸೋಹಕ್ಕೆ ದರ್ಶನ್ ಸಾಥ್

ಸಾರಥಿಗಾಗಿ ಒಂದು ಹಾಡು ಬರೆಯಲಿದ್ದಾರೆ. ಇದು ದರ್ಶನ್ ಹಾಗೂ ಅಭಿಮಾನಿಗಳ ನಡುವಿನ ಬಾಂಧವ್ಯವನ್ನು ಹೇಳಲಿದೆಯಂತೆ. ಈ ಹಾಡಿಗೆ ನಾಗೇಂದ್ರ ಪ್ರಸಾದ್ ಅವರ ಏ ಸಾಹಿತ್ಯ, ಸಂಗೀತ ನೀಡಲಿದ್ದಾರೆ. 

ಅದೇ ರೀತಿ ಆನಂದ್ ಎನ್ನುವ ಅಭಿಮಾನಿಯೊಬ್ಬ ಸ್ಪೆಷಲ್ ಗಿಫ್ಟ್ ಕೊಡಲು ಮುಂದಾಗಿದ್ದಾನೆ.  ಬೆನ್ನ ತುಂಬಾ ದರ್ಶನ್ ಹಚ್ಚೆ ಹಾಕಿಸಿಕೊಂಡಿದ್ದಾನೆ. ಸುಮಾರು 16 ಗಂಟೆಗಳ ಕಾಲ ಆನಂದ್ ಬೆನ್ನಮೇಲೆ ಟ್ಯಾಟೂ ಹಾಕಿಸಿಕೊಂಡಿದ್ದಾರೆ. 

ಅಂಬರೀಶ್ ನಿಧನದ ಹಿನ್ನಲೆಯಲ್ಲಿ ಈ ಬಾರಿ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಮಾಡಿಕೊಳ್ಳಲು ದರ್ಶನ್ ನಿರಾಕರಿಸಿದ್ದಾರೆ. ಅಭಿಮಾನಿಗೋಸ್ಕರ ಸರಳವಾಗಿ ಸೆಲಬ್ರೇಶನ್ ಮಾಡಿಕೊಳ್ಳಲು ಒಪ್ಪಿದ್ದಾರೆ.