ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ಮಂಡ್ಯ MP ಸುಮಲತಾ ಅಂಬರೀಶ್ ಭಾಗಿಯಾಗಿದ್ದರು. ತಮ್ಮ ಜೀವನದ ಅಮೂಲ್ಯ ಕ್ಷಣಗಳನ್ನು ತೆರೆದಿಟ್ಟಿದ್ದಾರೆ.

Valentines Dayಗೆ ಅಂಬಿ ಸುಮಲತಾಗೆ ಪ್ರಪೋಸ್ ಮಾಡಿದ ಫೋಟೋ ರಿವೀಲ್!

ಖ್ಯಾತ ನಟಿ ಸುಮಲತಾ ಮಂಡ್ಯದ ರೆಬೆಲ್ ಮ್ಯಾನ್ ಜೊತೆ 1991 ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಅದಕ್ಕೂ ಮೊದಲು ಶಾಲಾ ದಿನಗಳಲ್ಲಿ ಅವರಿಗಿದ್ದ ಕ್ರಶ್ ಯಾರು ಗೊತ್ತಾ? ಅವರೇ ದಿ ಮಲ್ಟಿ ಟ್ಯಾಲೆಂಟೆಡ್ ಮ್ಯಾನ್ ಕಮಲ್ ಹಾಸನ್.

 

ಸುಮಲತಾಗೆ ಅಂದು 13 ವರುಷ. ಶಾಲಾ ದಿನಗಳಲ್ಲಿ ಸುಮಲತಾಗೆ ಕಮಲ್ ಹಾಸನ್ ಕಂಡರೆ ಸಿಕ್ಕಾಪಟ್ಟೆ ಇಷ್ಟವಂತೆ. ಅದೂ 'ಮನ್ಮದ ಲೀಲಾ' ಚಿತ್ರದ ಮೂಲಕ ಅವರ ಮೇಲೆ ಕ್ರಶ್ ಆಗಿತ್ತು. ಕಮಲ್ ಫೋಟೋಗಳನ್ನು ಕಲೆಕ್ಟ್ ಮಾಡಿಕೊಂಡು ಒಂದು ಪುಸ್ತಕದಲ್ಲಿ ಅಂಟಿಸಿ ಇಟ್ಟುಕೊಂಡಿದ್ದರು. ಆ ಫೋಟೋ ಬುಕ್ ವೀಕೆಂಡ್ ವಿತ್ ರಮೇಶ್ ರೀಸರ್ಜ್ ಟೀಂಗೆ ಸಿಕ್ಕಿತ್ತು.