ಇದು ತಮಿಳಿನ ‘ವಿಐಪಿ’ ಚಿತ್ರದ ರಿಮೇಕ್. ಗಣ್ಯರ ಮಾತುಗಳ ನಡುವೆ ಮಾತಿಗೆ ನಿಂತರು ಮನೋರಂಜನ್. ‘ಆಸಕ್ತಿ ಮತ್ತು ಭಯದಿಂದಲೇ ಈ ಸಿನಿಮಾ ಮಾಡಿರುವೆ. ಯಾಕೆಂದರೆ ಇದು ನನಗೆ ಎರಡನೇ ಸಿನಿಮಾ.
ಅದು ರಾಕ್‌ಲೈನ್‌ವೆಂಕಟೇಶ್ ನಿರ್ಮಾಣದ ‘ಬೃಹಸ್ಪತಿ’ ಚಿತ್ರದ ಆಡಿಯೋ ಮತ್ತು ಟ್ರೇಲರ್ ಬಿಡುಗಡೆ. ಚಿತ್ರದ ನಾಯಕ ಮನೋರಂಜನ್ ರವಿಚಂದ್ರನ್ ಅವರನ್ನು ಉದ್ದೇಶಿಸಿ ಎಲ್ಲರು ಹೇಗೆ ಮಾತನಾಡಿದವರು ಎಂಬುದಕ್ಕೆ ಈ ಮೇಲಿನ ಹೇಳಿಕೆಗಳೇ ಸಾಕ್ಷಿ. ಅಪ್ಪನ ಜತೆ ನಿಲ್ಲಿಸಿ ಮಗನ ಪ್ರತಿಭೆ ಹೊಗಳುವ ಮೂಲಕ ಮನೋರಂಜನ್'ಗೆ ಶುಭ ಕೋರಿದ್ದು ನಿರ್ಮಾಪಕರ ಸಂಘದ ಅಧ್ಯಕ್ಷ ಮುನಿರತ್ನ, ಸೂರಪ್ಪ ಬಾಬು, ಜಗ್ಗೇಶ್, ಸಾಧು ಕೋಕಿಲ, ಅವಿನಾಶ್ ಮುಂತಾದವರು.
ವೇದಿಕೆಗೆ ಮನೋರಂಜನ್ ಎಂಟ್ರಿಯಾಗಿದ್ದೆ ವಿಶೇಷವಾಗಿತ್ತು. ನಾಯಕ ಮನೋರಂಜನ್, ಖಳನಾಯಕ ತಾರಕ್ ಅದಪ್ಪಯ್ಯ ಮುಖಾಮುಖಿಯಾಗಿ ನಿಂತರು. ಚಿತ್ರದ ಎರಡ್ಮೂರು ಪುಟದ ದೃಶ್ಯದ ಪವರ್‌ಫುಲ್ ಡೈಲಾಗ್'ಅನ್ನು ನಾನ್ ಸ್ಟಾಪ್ ಆಗಿ ಹೇಳಿ ವಿಲನ್‌ಗೆ ಅವಾಜ್ ಹಾಕುವ ಮೂಲಕ ವೇದಿಕೆ ಕಾರ್ಯಕ್ರಮ ಶುರುವಾಯಿತು. ಇದು ತಮಿಳಿನ ‘ವಿಐಪಿ’ ಚಿತ್ರದ ರಿಮೇಕ್. ಗಣ್ಯರ ಮಾತುಗಳ ನಡುವೆ ಮಾತಿಗೆ ನಿಂತರು ಮನೋರಂಜನ್. ‘ಆಸಕ್ತಿ ಮತ್ತು ಭಯದಿಂದಲೇ ಈ ಸಿನಿಮಾ ಮಾಡಿರುವೆ. ಯಾಕೆಂದರೆ ಇದು ನನಗೆ ಎರಡನೇ ಸಿನಿಮಾ. ಧನುಷ್ ಅವರ 25ನೇ ಚಿತ್ರವನ್ನು ರೀಮೇಕ್ ಮಾಡಬೇಕು ಅಂದಾಗ ತುಂಬಾ ಜವಾಬ್ದಾರಿ ಬೇಕಾಗುತ್ತದೆ. ನಾನು ಏನೇ ಮಾಡಿದರೂ ಅದರ ಕ್ರೆಡಿಟ್ಟು ನಿರ್ದೇಶಕರಿಗೆ ಸೇರಬೇಕು.

ರಾಕ್‌ಲೈನ್ ವೆಂಕಟೇಶ್ ಅವರು ನನಗೆ ಗಾಡ್‌ಫಾದರ್ ಇದ್ದಂತೆ. ನಟನೆ ಕಲಿತಿದ್ದು ನಿರ್ದೇಶಕ ನಂದಕಿಶೋರ್ ಅವರಿಂದ. ಅದ್ಧೂರಿಯಾಗಿ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಇಂಥದ್ದೊಂದು ಅವಕಾಶ ಕೊಟ್ಟು ಪ್ರೇಕ್ಷಕರ ಮುಂದೆ ಕರೆದುಕೊಂಡು ಹೋಗುತ್ತಿರುವ ಪ್ರತಿಯೊಬ್ಬರಿಗೂ ನಾನು ಋಣಿ’ ಎಂದು ಮಾತು ಮುಗಿಸಿದರು ಮನೋರಂಜನ್. ಈ ಚಿತ್ರಕ್ಕೆ ಹೆಸರು ಸೂಚಿಸಿದ್ದು ನಿರ್ದೇಶಕ ಯೋಗರಾಜ ಭಟ್. ಆದರೆ, ಆ ಹೆಸರು ಇದ್ದಿದ್ದು ನಿರ್ಮಾಪಕ ಶ್ರೀಕಾಂತ್ ಅವರ ಬಳಿ. ಮರು ಮಾತನಾಡದೆ ಟೈಟಲ್ ಕೊಟ್ಟ ಮತ್ತು ಹೆಸರು ಸೂಚಿಸಿದ ಇಬ್ಬರಿಗೂ ನಿರ್ಮಾಪಕರು ಕೃತಜ್ಞತೆ ಸಲ್ಲಿಸಿದರು.
‘ನಮ್ಮ ತಂದೆಗೆ ರವಿಚಂದ್ರನ್ ಅವರು ರಣಧೀರ ಚಿತ್ರದಲ್ಲಿ ಒಳ್ಳೆಯ ಪಾತ್ರ ಕೊಟ್ಟಿದ್ದಾರೆಂದು ಹೇಳಿದ್ದು ಈಗಲೂ ನನಗೆ ನೆನಪಿದೆ. ಆ ಕುಟುಂಬದ ಋಣ ತೀರಿಸುವುದಕ್ಕೆ ನನಗೆ ಈ ಚಿತ್ರದ ಮೂಲಕ ಅವಕಾಶ ಸಿಕ್ಕಿದೆ. ತುಂಬಾ ಪ್ರೀತಿಯಿಂದ ಈ ಚಿತ್ರವನ್ನು ನಿರ್ದೇಶಿಸಿದ್ದೇನೆ. ಯಾಕೆಂದರೆ ಅಪ್ಪನಿಗೆ ಅನ್ನ ಕೊಟ್ಟ ಮನೆಯ ಮಗನ ಸಿನಿಮಾ ಇದು’ ಎಂದಿದ್ದು ನಿರ್ದೇಶಕ ನಂದಕಿಶೋರ್.
ಹೀಗೆ ತಮ್ಮ ಮಗನ ಚಿತ್ರದ ಆಡಿಯೋ ಬಿಡುಗಡೆ ಸಂಭ್ರಮದಲ್ಲಿ ಕೂತು ಅಪ್ಪ- ಮಗನ ಬಗ್ಗೆ ಗಣ್ಯರು ಮಾತನಾಡುತ್ತಿದ್ದರೆ ಖುಷಿ ಮತ್ತು ಹೆಮ್ಮೆಯಿಂದ ಕೇಳಿಸಿಕೊಳ್ಳುತ್ತ ವೇದಿಕೆ ಮುಂದಿನ ಸೀಟ್‌ನಲ್ಲಿ ಕೂತಿದ್ದವರು ಮನೋರಂಜನ್ ಅಮ್ಮ ಹಾಗೂ ಅವರ ತಂಗಿ. ‘ಸುಧೀರ್ ಅವರನ್ನ ಇಲ್ಲಿಯವರೆಗೂ ವಿಲನ್ ಆಗಿಯೇ ನೋಡಿದ್ದಾರೆ. ಹೀರೋ ಆಗಿ ನೋಡಿಲ್ವಲ್ಲ. ತೋರಿಸುತ್ತೇನೆ’ ಇದು ಚಿತ್ರದ ನಾಯಕ ಹೇಳುವ ಡೈಲಾಗ್. ಟ್ರೇಲರ್‌ಗೆ ಇದೇ ಪವರ್ ಎನ್ನುವುದರೊಂದಿಗೆ ‘ಬೃಹಸ್ಪತಿ’ ಮಾತು ಮುಗಿಯಿತು.
