ಬಾಲಿವುಡ್ ದಂತಕತೆ, ಅತಿಲೋಕ ಸುಂದರಿ ಶ್ರೀದೇವಿ ಸಾವನ್ನಪ್ಪಿ ಒಂದು ವರ್ಷದ ಮೇಲಾಗಿದೆ. ಆದರೂ ಅವರ ಸಾವಿನ ಬಗ್ಗೆ ಇನ್ನೂ ಅನುಮಾನಗಳು ಮುಂದುವರೆಯುತ್ತಲೇ ಇವೆ. 

ಫೆ. 24 2018 ರಂದು ಮುಂಬೈನ ಪ್ರತಿಷ್ಠಿತ ಹೊಟೇಲ್ ವೊಂದರಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದರು. ಇದು ಆಕಸ್ಮಿಕ ಸಾವು. ಪಾನಮತ್ತರಾಗಿ ಕಾಲು ಜಾರಿ ಬಾತ್ ಟಬ್ ನಲ್ಲಿ ಬಿದ್ದು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಹೇಳಿದ್ದರು. 

ಲಿಪ್‌ಲಾಕ್‌ ಸೀನ್ ಬಗ್ಗೆ ಕೇಳಿದ್ರೆ '****' ಹಾಗೂ 'IDC' ಅಂದ ವಿಜಯ್ ದೇವರಕೊಂಡ!

ಕೇರಳ ಜೈಲು ಡಿಜಿಪಿ ರಿಶಿರಾಜ್ ಸಿಂಗ್ ಪತ್ರಿಕೆಯೊಂದಕ್ಕೆ ಬರೆದ ಅಂಕಣದಲ್ಲಿ ಇದು ಸಹಜ ಸಾವಲ್ಲ. ಕೊಲೆಯಾಗಿರಬಹುದು ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ. 

ನನ್ನ ಸ್ನೇಹಿತ ಡಾ. ಉಮಾದತನ್ ಬಳಿ ಶ್ರೀದೇವಿ ಸಾವಿನ ಬಗ್ಗೆ ಕೇಳಿದಾಗ ಇದು ಸಹಜ ಸಾವಲ್ಲ. ಕೊಲೆಯಾಗಿರಬಹುದು ಎಂಬ ಅನುಮಾನ ವ್ಯಕ್ತಪಡಿಸಿದ್ದರು ಎಂದಿದ್ದಾರೆ. 

ಡಿಯರ್ ಕಾಮ್ರೇಡ್‌ ಕಿಸ್ಸಿಂಗ್ ಸೀನ್‌ಗೆ ರಶ್ಮಿಕಾ ಸ್ಪಷ್ಟನೆ!

ಉಮಾದತನ್ ಪ್ರಕಾರ, ಎಷ್ಟೇ ಪಾನಮತ್ತರಾಗಿದ್ದರೂ ಒಂದು ಅಡಿಯಿಂದ ಮುಳುಗಿ ಯಾರೂ ಸಾಯುವುದಿಲ್ಲ. ಯಾರಾದರೂ ಬಲವಂತವಾಗಿ ತಲೆಯನ್ನು ನೀರಿನಲ್ಲಿ ಮುಳುಗಿಸಿದರೆ ಮಾತ್ರ ಸಾಯುವ ಸಾಧ್ಯತೆ ಇರುತ್ತದೆ ಎಂದಿದ್ದಾರೆ. ಹಾಗಾಗಿ ಇದು ಸಹಜ ಸಾವಲ್ಲ. ಬದಲಾಗಿ ಕೊಲೆ ಎಂದಿದ್ದಾರೆ. 

ಈ ಅನುಮಾನಕ್ಕೆ ಬೋನಿ ಕಪೂರ್ ಪ್ರತಿಕ್ರಿಯಿಸಿದ್ದು, ಇಂತಹ ಸ್ಟುಪಿಡ್ ಸ್ಟೋರಿಗಳಿಗೆ ನಾನು ಪ್ರತಿಕ್ರಿಯಿಸಲು ಇಷ್ಟಪಡುವುದಿಲ್ಲ. ಇವೆಲ್ಲಾ ಆಗಾಗ ಬರುತ್ತಿರುತ್ತವೆ. ಬೇಸಿಕಲಿ ಇದು ಕೆಲವರ ಕಲ್ಪನೆ’ ಎಂದು ಹೇಳಿದ್ದಾರೆ.