ಬಾಲಿವುಡ್ ನಟ ಟೈಗರ್ ಶ್ರಾಫ್ ಮೇಲೆ ನಡೆದ ಗುಂಡಿನ ದಾಳಿ ತನಿಖೆ ತೀವ್ರಗೊಂಡಿದೆ. ಈ ಘಟನೆಯಿಂದ ಇಡೀ ಬಾಲಿವುಡ್ ಬೆಚ್ಚಿ ಬಿದ್ದಿದೆ. ಈ ಘಟನೆ ಬೆನ್ನಲ್ಲೇ ಇದೀಗ ಟೈಗರ್ ಶ್ರಾಫ್ ಮಂಬೈನ ಮನೆಯನ್ನು 9 ಕೋಟಿ ರೂಪಾಯಿಗೆ ಮಾರಾಟ ಮಾಡಿದ್ದಾರೆ.

ಮುಂಬೈ (ಅ.24) ಬಾಲಿವುಡ್ ನಟ ಟೈಗರ್ ಶ್ರಾಫ್ ಮೇಲೆ ಇತ್ತೀಚೆಗೆ ಭೀಕರ ಗುಂಡಿನ ದಾಳಿ ನಡೆದಿತ್ತು. ಅದೃಷ್ಟವಶಾತ್ ಟೈಗರ್ ಶ್ರಾಫ್ ಸಣ್ಣ ಪುಟ್ಟ ಗಾಯಗಳಿಂದ ಪಾರಾಗಿದ್ದರು. ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಈ ದಾಳಿಯ ಹೊಣೆ ಹೊತ್ತುಕೊಂಡಿದೆ. ಇತ್ತ ಪೊಲೀಸರ ತನಿಖೆ ಚುರುಕಾಗಿದ್ದು, ಮೂವರು ಆರೋಪಿಗಳನ್ನು ಅರೆಸ್ಟ್ ಮಾಡಿ ವಿಚಾರಣೆ ನಡೆಸಲಾಗುತ್ತಿದೆ. ಟೈಗರ್ ಶ್ರಾಫ್ ಸೇರಿದಂತೆ ಬಾಲಿವುಡ್ ಇಂಡಸ್ಟ್ರಿ ಇದೀಗ ಆತಂಕದಲ್ಲಿ ದಿನದೂಡುವಂತಾಗಿದೆ. ಈ ಘಟನೆಗಳ ಬೆನ್ನಲ್ಲೇ ಟೈಗರ್ ಶ್ರಾಫ್ ತಮ್ಮ ಮುಂಬೈನ ಮನೆಯನ್ನು ಮಾರಾಟ ಮಾಡಿದ್ದಾರೆ. 9 ಕೋಟಿ ರೂಪಾಯಿಗೆ ಮನೆ ಮಾರಾಟವಾಗಿದೆ.

ಖರ್ ವೆಸ್ಟ್‌ನಲ್ಲಿರುವ ಮನೆ

ಅಕ್ಟೋಬರ್ 18 ರಂದು ಮುಂಬೈನ ಜುಹು ಬಳಿ ಟೈಗರ್ ಶ್ರಾಫ್ ಮೇಲೆ ಗುಂಡಿನ ದಾಳಿ ನಡೆದಿತ್ತು. ಒಂದೇ ವಾರದಲ್ಲಿ ಟೈಗರ್ ಶ್ರಾಫ್ ಖರ್ ವೆಸ್ಟ್‌ನಲ್ಲಿರುವ ಅಪಾರ್ಟ್‌ಮೆಂಟ್ ಮಾರಾಟ ಮಾಡಿದ್ದಾರೆ. ಡಿ ಕೋ ಆಫರೇಟೀವ್ ಹೌಸಿಂಗ್ ಸೊಸೈಟಿಯಲ್ಲಿರುವ ರುಸ್ತೊಮ್ಜಿ ಪಾರಾಮೌಂಟ್ ಅಪಾರ್ಟ್‌ಮೆಂಟ್‌ನ 9ನೇ ಮಹಡಿಯಲ್ಲಿದೆ ಈ ಮನೆ. 1ಸ291.14 ಚದರ ಅಡಿ ವಿಸ್ತೀರ್ಣ ಹೊಂದಿದೆ. ಪ್ರತಿ ಚದರ ಅಡಿಗೆ ಸರಿಸುಮಾರು 64,891 ರೂಪಾಯಿಗೆ ಮಾರಾಟ ಮಾಡಿದ್ದಾರೆ. ಮನೆ ಮಾರಾಟದ ಸ್ಟಾಂಪ್ ಡ್ಯೂಟಿ 54 ಲಕ್ಷ ರೂಪಾಯಿ ಪಾವತಿ ಮಾಡಲಾಗಿದೆ. ಈ ಮನೆ ಎರಡು ಪಾರ್ಕಿಂಗ್ ಸ್ಲಾಟ್ ಹೊಂದಿದೆ. 2018ರಲ್ಲಿ ಈ ಮನೆಯನ್ನು ಟೈಗರ್ ಶ್ರಾಫ್ ಖರೀದಿಸಿದ್ದರು. ಅಂದು 7.61 ಕೋಟಿ ರೂಪಾಯಿ ನೀಡಿ ಮನೆ ಖರೀದಿಸಿದ್ದರು. ಇದೀಗ 9 ಕೋಟಿ ರೂಪಾಯಿಗೆ ಮಾರಾಟ ಮಾಡಿದ್ದಾರೆ.

ಮನೆ ಮಾರಾಟ ಇದೀಗ ಹಲವು ಚರ್ಚೆಗೆ ಕಾರಣವಾಗಿದೆ. ದಾಳಿ ಬೆನ್ನಲ್ಲೇ ಮುಂಬೈ ಮನೆ ಮಾರಾಟ ಮಾಡಿದ್ದು ಯಾಕೆ ಅನ್ನೋ ಪ್ರಶ್ನೆಗಳು ಹುಟ್ಟಿಕೊಂಡಿದೆ. ಟೈಗರ್ ಶ್ರಾಫ್ ಮಾಲೀಕತ್ವದ ಒಂದು ಮನೆಯನ್ನು ಮಾತ್ರ ಮಾರಾಟ ಮಾಡಲಾಗಿದೆ. ಮಾರಾಟ ಪ್ರಕ್ರಿಯೆ ದಾಳಿಗೂ ಮೊದಲೇ ಆರಂಭಗೊಂಡಿತ್ತು ಎಂದು ಮೂಲಗಳು ಹೇಳಿವೆ.

ಟೈಗರ್ ಶ್ರಾಫ್ ಮೇಲಿನ ದಾಳಿ, ಆರೋಪಿಗಳ ವಿಚಾರಣೆ

ಟೈಗರ್ ಶ್ರಾಫ್ ಮೇಲಿನ ಗುಂಡಿನ ದಾಳಿ ನಡೆಸಿದ ಮೂವರು ಆರೋಪಿಗಳ ಅರೆಸ್ಟ್ ಮಾಡಿ ವಿಚಾರಣೆ ನಡೆಸಲಾಗುತ್ತಿದೆ. ಇವರ ಟಾರ್ಗೆಟ್ ಸಲ್ಮಾನ್ ಖಾನ್ ಸೇರಿದಂತೆ ಇತರ ಪ್ರಮುಖ ನಟರಾಗಿದ್ದರು. ಆದರೆ ಪ್ರಮುಖ ನಟರ ಭದ್ರತೆ ಹೆಚ್ಚಿದ್ದ ಕಾರಣ ಸಲ್ಮಾನ್ ಖಾನ್ ಹೊಗಳಿದ್ದ ಟೈಗರ್ ಶ್ರಾಫ್ ಮೇಲೆ ದಾಳಿ ಮಾಡಲಾಗಿತ್ತು ಎಂಬುದು ಬಹಿರಂಗವಾಗಿದೆ. 2022ರಲ್ಲಿ ಟೈಗರ್ ಶ್ರಾಫ್ ಮಹತ್ವದ ಹೇಳಿಕೆ ನೀಡಿದ್ದರು. ಸಲ್ಮಾನ್ ಖಾನ್ ಹೊಗಳಿ ಮಾತನಾಡಿದ್ದರು. ಇದರಿಂದ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಕೆರಳಿ ಈ ದಾಳಿ ನಡೆಸಲಾಗಿದೆ ಅನ್ನೋ ಮಾಹಿತಿಗಳು ಹೊರಬಂದಿದೆ. ಇಂಡಸ್ಟ್ರೀಯಲ್ಲಿ ಒಬ್ಬರೈ ಟೈಗರ್, ಅದು ಸಲ್ಮಾನ್ ಖಾನ್, ಅದ್ಕೆ ಸಲ್ಮಾನ್ ಖಾನ್ ಎಕ್ತಾ ಟೈಗರ್ ಎಂದು ಟೈಗರ್ ಶ್ರಾಫ್ ಹೇಳಿದ್ದರು.