ಸಂಜಯ್ ದತ್ ಕನ್ನಡಕ್ಕೆ ಬರುತ್ತಿದ್ದಾರೆ. ‘ಕೆಜಿಎಫ್ ಚಾಪ್ಟರ್ 2’ನಲ್ಲಿ ಅವರು ಪೂರ್ತಿಯಾಗಿ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರ ತಂಡದ ಮೂಲಗಳ ಪ್ರಕಾರ ಸಂಜಯ್ ದತ್ ‘ಕೆಜಿಎಫ್ ಚಾಪ್ಟರ್‌೨’ ನಲ್ಲಿ ಪ್ರಮುಖ ವಿಲನ್.  

1ರ ಕ್ಲೈಮ್ಯಾಕ್ಸ್ ದೃಶ್ಯದಲ್ಲಿ ಅವರ ಎಂಟ್ರಿಯನ್ನು ತೋರಿಸಿ, ಚಾಪ್ಟರ್ 2ರಲ್ಲಿ ಅವರನ್ನು ಚಿತ್ರದ ಪ್ರಮುಖ ವಿಲನ್ ಆಗಿ ತೋರಿಸುವ ಇರಾದೆ ಚಿತ್ರತಂಡದ್ದು. 

Add Asianetnews Kannada as a Preferred SourcegooglePreferred

ಸಂಜಯ್ ದತ್ ಅವರೊಂದಿಗೆ ಈಗಾಗಲೇ ಒಂದು ಹಂತದ ಮಾತುಕತೆ ನಡೆದಿದೆ. ಕತೆಯಲ್ಲಿನ ಅವರ ಪಾತ್ರದ ಬಗ್ಗೆ ಹೇಳಿ ಮುಗಿದಿದೆ. ಆದರೆ ಅವರು ಆಗ ಓಕೆ ಹೇಳಿರಲಿಲ್ಲ. ‘ಕೆಜಿಎಫ್’ ಅಂದ್ರೆ ಕನ್ನಡ ಸಿನಿಮಾನ ಅಂತ ಕೇಳಿ ಒಂದಷ್ಟು ಟೈಮ್ ಕೊಡಿ ಅಂದಿದ್ದರಂತೆ. ಯಾವಾಗ ಫರ್ಹಾನ್ ಅಖ್ತರ್ ಹಾಗೂ ಅನಿಲ್ ತಡಾನಿ ‘ಕೆಜಿಎಫ್’ ಚಿತ್ರವನ್ನು ಹಿಂದಿಯಲ್ಲಿ ಬಿಡುಗಡೆ ಮಾಡಲು ನಿರ್ಧರಿಸಿದರೋ ಅಂದಿನಿಂದ ಚಿತ್ರ ಭರ್ಜರಿಯಾಗಿ ಸೌಂಡು ಮಾಡುತ್ತಿರುವ ಸುದ್ದಿ ತಿಳಿದ ಸಂಜಯ್ ದತ್ ‘ಕೆಜಿಎಫ್ ಚಾಪ್ಟರ್ 2’ನಲ್ಲಿ ಅಭಿನಯಿಸಲು ಗ್ರೀನ್ ಸಿಗ್ನಲ್ ಕೊಟ್ಟಿದ್ದಾ.

ಹಿಂದಿಯಲ್ಲೂ ಅದು ದೊಡ್ಡ ಸದ್ದು ಮಾಡುತ್ತಿರುವುದರಿಂದ ಅವರೇ ಚಿತ್ರದ ನಿರ್ದೇಶಕರ ಜತೆಗೆ ಫೋನ್‌ನಲ್ಲಿ ಮಾತುಕತೆ ಮಾಡಿದ್ದಾರೆ. ಈಗ ಮತ್ತೊಮ್ಮೆ ಕತೆ ಮತ್ತು ಅವರ ಪಾತ್ರದ ವಿವರ ಹೇಳುವುದೊಂದೇ ಬಾಕಿಯಿದೆ ಎನ್ನುವುದು ಚಿತ್ರ ತಂಡದ ಮಾತು.