ಬಾಲಿವುಡ್ ಹುಡುಗಿ ನೇಹಾ ಶರ್ಮಾ ಕಳೆದ ವಾರ ಸುದ್ದಿಯಲ್ಲಿದ್ದದ್ದು ಜಿಮ್‌ನಲ್ಲಿ ಭಾರೀ ತೂಕದ ವೆಯಿಟ್ ಲಿಫ್ಟ್ ಮಾಡೋ ಮೂಲಕ. ತನ್ನ ಅಫೀಶಿಯಲ್ ಇನ್‌ಸ್ಟಾಗ್ರಾಮ್‌ನಲ್ಲಿ ನೇಹಾ ಪೋಸ್ಟ್ ಮಾಡಿರೋ ವರ್ಕೌಟ್ ವೀಡಿಯೋ ಈಗ ಸಖತ್ ಫೇಮಸ್ ಆಗಿದೆ. ಬಾಲಿವುಡ್ ಜೊತೆಗೆ ದಕ್ಷಿಣ ಭಾರತೀಯ ಚಿತ್ರಗಳಲ್ಲೂ ನೇಹಾ ಮಿಂಚುತ್ತಿದ್ದಾರೆ. 

ತಿನ್ನೋದ್ರಲ್ಲಿ ಬ್ಯಾಲೆನ್ಸ್ ಮುಖ್ಯ
ಸಖತ್ ಫುಡೀಯಾಗಿರುವ ಈ ಹುಡುಗಿ ಚಾಕೊಲೇಟ್, ಡೋನಟ್ಸ್, ಐಸ್‌ಕ್ರೀಮ್ ಸೇರಿದಂತೆ ತನಗಿಷ್ಟವಾದ ತಿನಿಸು ತಿನ್ನಲು ಹಿಂದೆ ಮುಂದೆ ನೋಡಲ್ಲ. ಆದರೆ ತಿನ್ನುವ ಪ್ರಮಾಣ ಮಾತ್ರ ಬಹಳ ಕಡಿಮೆ. ‘ಸಣ್ಣಗಾಗುವ ಕ್ರೇಜ್‌ನಲ್ಲಿ ನಾಲಿಗೆ, ಹೊಟ್ಟೆಗೆ ಅನ್ಯಾಯ ಮಾಡಲು ನನಗಿಷ್ಟ ಇಲ್ಲ. ಹಾಗಂತ ಯರ‌್ರಾಬಿರ‌್ರಿ ತಿಂದು ದೇಹ ಒದ್ದಾಡುವಂತೆ ಮಾಡುವ ಪೈಕಿಯೂ ನಾನಲ್ಲ. ಎಲ್ಲವನ್ನೂ ಬ್ಯಾಲೆನ್ಸಿಂಗ್ ಆಗಿ ತಿನ್ಬೇಕು ಅನ್ನೋದು ನನ್ನ ಪಾಲಿಸಿ’ ಅಂತ ಡಯೆಟ್ ಬಗ್ಗೆ ಎಗ್ಗಿಲ್ಲದೇ ಹೇಳಿಕೊಳ್ತಾರೆ ನೇಹಾ. ಹಣ್ಣು, ಓಟ್ಸ್, ಆರೆಂಜ್ ಜ್ಯೂಸ್ ಇದ್ರೆ ಬ್ರೇಕ್‌ಾಸ್ಟ್ ಮುಗಿದಂಗೇ. ಮಧ್ಯಾಹ್ನ ಅನ್ನ, ಚಪಾತಿ, ತರಕಾರಿ. ರಾತ್ರಿ ಮಾತ್ರ ಬಹಳ ಬೇಗ ಊಟ ಮುಗಿಸ್ತಾರೆ.

ತೂಕದ ಹುಡ್ಗಿ
ಜಿಮ್‌ಗೆ ನೇಹಾ ಬರ‌್ತಾರೆ ಅಂದ್ರೆ ಉಳಿದ ಹುಡುಗರಿಗೆ ಸಣ್ಣ ಭಯ ಶುರುವಾಗುತ್ತೆ. ಎಲ್ಲಿ ಈ ಹುಡುಗಿ ತಮ್ಮನ್ನು ಬೀಟ್ ಮಾಡಿ ಉಡಾೆಯ ನಗೆ ಬೀರ‌್ತಾಳೋ ಅಂತ. ಮೊನ್ನೆ ಎಂದಿಗಿಂತ ಹೆಚ್ಚು ಜೋಶ್‌ನಲ್ಲಿ ಜಿಮ್‌ಗೆ ಬಂದ ನೇಹಾ ಒಂದೊಂದೇ ವೇಯ್ಟ್ ಅನ್ನು ಎತ್ತುತ್ತಾ ಹೋದಳು. ಅಚ್ಚರಿಯಿಂದ ನೋಡುತ್ತಿದ್ದವರು ನೋಡುತ್ತಲೇ ಬಾಕಿ. ಆಕೆ ಜಿಮ್‌ನ ಅತೀ ಭಾರದ ವೇಯ್ಟ್ ಅನ್ನೂ ಸರಾಗವಾಗಿ ಎತ್ತಿ ಇಳಿಸಿದಳು. ತನ್ನ ಈ ಸಾಹಸವನ್ನು ಇನ್‌ಸ್ಟಾಗ್ರಾಮ್‌ನಲ್ಲೂ ಹಾಕಿ ಭೇಷ್ ಎನಿಸಿಕೊಂಡಿದ್ದಾಳೆ. ಅಷ್ಟೇ ಅಲ್ಲ, ಪಿಲಾಟೇಸ್‌ನಲ್ಲೂ ತಾನು ಜಾಣೆ ಅಂತ ತೋರಿಸಿಕೊಟ್ಟಿದ್ದಾಳೆ.

View post on Instagram
View post on Instagram