ಅಟಲ್ ಬಿಹಾರಿ ವಾಜಪೇಯಿ ಅವರ ಸಾವು ದೇಶಕ್ಕೆ ತುಂಬಲಾರದ ನಷ್ಟ. ರಾಜಕಾರಣಿಯಾಗಿ, ವಾಗ್ಮಿಯಾಗಿ, ಕವಿಯಾಗಿ ದೇಶಕ್ಕೆ ನೀಡಿದ ಕೊಡುಗೆ ಅಪಾರ. ಭಾರತದ ಮಾಜಿ ಪ್ರಧಾನಿ ಸಾವಿಗೆ ಬಾಲವುಡ್ ಕಂಬನಿ ಮಿಡಿದಿದ್ದು ಹೀಗೆ.....
ವಾಗ್ಮಿ, ಅಜಾತ ಶತ್ರು, ರಾಜಕಾರಣಿ, ಕವಿ...ಹೀಗೆ ಬಹು ವಿಶೇಷತೆಗಳಿಂದ ಭಾರತೀಯರ ಹೃದಯದಲ್ಲಿ ವಿಶೇಷ ಸ್ಥಾನ ಪಡೆದಿದ್ದ ಭಾರತ ರತ್ನ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ನಿಧನಕ್ಕೆ ಬಾಲಿವುಡ್ ಸಂತಾನ ಸೂಚಿಸಿದೆ.
ಕಳೆದ ತಿಂಗಳು ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದ ಅಟಲ್‌ಜೀ ಅವರು ವಯೋ ಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು. ಕಿಡ್ನಿ ಸೋಂಕು ಹಾಗೂ ಎದೆ ಹಿಡಿತದಿಂದ ಕೊನೆಯುಸಿರೆಳೆದಿದ್ದಾರೆ.
1996-1999ರವರೆಗೆ ಭಾರತದ ಪ್ರಧಾನಿಯಾಗಿದ್ದ ವಾಜಪೇಯಿ ಅವರಿಗೆ ದೇಶದ ಅತ್ಯನ್ನತ ನಾಗರಿಕ ಗೌರವ ಭಾರತ ರತ್ನವನ್ನೂ ನೀಡಲಾಗಿದೆ.
ಅಟಲ್ ಸಾವಿಗೆ ಬಾಲಿವುಡ್ ಕಂಬನಿ ಮಿಡಿದಿದ್ದು ಹೀಗೆ...
