ಒಂದು ವಾರದಿಂದ ಕರೀನಾ ಎಲ್ಲಿಯೇ ಹೋದರೂ ಹಳದಿ ಬಣ್ಣದ ಬಟ್ಟೆಯನ್ನೇ ಧರಿಸುತ್ತಿದ್ದಾರೆ. ಮಾವಿನ ಹಣ್ಣಿನ ಸೀಸನ್ನು ಅನ್ನುವುದೇ ಅದಕ್ಕೆ ಕಾರಣ. ಅಲ್ಲದೇ, ಅವರು ದಿನಕ್ಕೆ ಎಂಟು ಗಂಟೆ ಮಾತ್ರವೇ ಕೆಲಸ ಮಾಡುತ್ತೇನೆ ಎಂದು ಹೇಳಿಕೊಂಡಿರುವುದರ ಹಿಂದೆ ಪಕ್ಕಾ ಲೆಕ್ಕಾಚಾರಗಳಿವೆ.

ಈಗಷ್ಟೇ ‘ಡ್ಯಾನ್ಸ್‌ ಇಂಡಿಯಾ ಡ್ಯಾನ್ಸ್‌’ಗೆ ಜಡ್ಜ್‌ ಆಗಿ ಆಯ್ಕೆಯಾಗಿರುವ ಕರೀನಾ ಆಯ್ಕೆಗೂ ಮೊದಲು ನಾನು ದಿನಕ್ಕೆ ಎಂಟು ಗಂಟೆ ಮಾತ್ರ ನಿಮ್ಮ ಸೆಟ್‌ನಲ್ಲಿ ಇರುತ್ತೇನೆ ಎನ್ನುವ ಷರತ್ತನ್ನು ವಿಧಿಸಿದ್ದರಂತೆ. ಇದನ್ನು ಈಗ ಸ್ವತಃ ಕರೀನಾ ಹೇಳಿಕೊಂಡಿದ್ದಾರೆ. ‘ಟೆಲಿವಿಷನ್‌ಗಳು ಸಿನಿಮಾಗಿಂತ ಹೆಚ್ಚು ಸಮಯ ಬೇಡುತ್ತವೆ. ಇಲ್ಲಿ ಇಷ್ಟೇ ಸಮಯ ಎಂದು ಲೆಕ್ಕ ಹಾಕಿಕೊಂಡು ಕೆಲಸ ಮಾಡುವುದಕ್ಕೆ ಆಗುವುದಿಲ್ಲ. ಆದರೂ ನಾನು ಇಲ್ಲಿ ಕೇವಲ ಎಂಟು ಗಂಟೆ ಮಾತ್ರ ಕೆಲಸ ಮಾಡಬೇಕು ಎನ್ನುವ ನಿರ್ಧಾರಕ್ಕೆ ಬಂದಿದ್ದೇನೆ. ಇದಕ್ಕೆ ಕಾರಣ ಇನ್ನು ನನ್ನ ವಯಕ್ತಿಕ ಬದುಕಿಗೂ ಸಾಕಷ್ಟುಸಮಯ ನೀಡಬೇಕು. ಒಂದು ಶಿಸ್ತಿನಿಂದ ಜೀವನ ಮಾಡಬೇಕು ಎನ್ನುವುದು’ ಎಂದು ಹೇಳಿಕೊಳ್ಳುವ ಮೂಲಕ ಲೆಕ್ಕಾಚಾರಕ್ಕೆ ಇಳಿದಿದ್ದಾರೆ ಕರೀನಾ.

'ನನ್ನ ಮಗ ಕುರುಡನಾಗುತ್ತಾನೆ'! ಸೈಫ್ ಗರಂ ಆಗಿದ್ಯಾಕೆ?