ಸೈಫ್ ಅಲಿ ಖಾನ್ ಹಾಗೂ ಕರೀನಾ ಕಪೂರ್ ಪುತ್ರ ತೈಮೂರ್ ಅಲಿ ಖಾನ್ ಬಾಲಿವುಡ್‌ನ ಕ್ಯೂಟ್ ಕಿಡ್. ನೋಡಲು ಮುದ್ದಾಗಿರುವ ಈತ ಕ್ಯಾಮೆರಾ ಕಂಡರೆ ಪೋಸ್ ಕೊಡಲು ಶುರು ಮಾಡಿ ಬಿಡುತ್ತಾನೆ ಈ ಪುಟಾಣಿ.

 

ಕೆಲ ದಿನಗಳ ಹಿಂದೆ ವಿಮಾನ ನಿಲ್ದಾಣದಲ್ಲಿ ಪೋಷಕರೊಂದಿಗೆ ಕಾಣಿಸಿಕೊಂಡ ತೈಮೂರ್ ಮಾಧ್ಯಮದವರನ್ನು ಕಂಡು ಪೋಸ್ ಕೊಡುತ್ತಿದ್ದ. ಆತನ ತುಂಟಾಟ ಕಂಡವರೇ ಇನ್ನಷ್ಟು ಫೋಟೋಸ್ ತೆಗೆಯಲು ಶುರು ಮಾಡಿದರು. ಇದನ್ನು ಕಂಡು ಸೈಫ್ ಅಲಿ ಖಾನ್ ಗರಂ ಆಗಿದ್ದಾರೆ.

ಅಬ್ಬಾ! ಏನ್ ಪೌರುಷ... ಕುದುರೆ ಸವಾರಿ ಮಾಡಿದ್ದಾನೆ ತೈಮೂರ್ ಅಲಿ ಖಾನ್

'ನನ್ನ ಮಗನ ಫೋಟೋಸ್ ತೆಗೆಯಬೇಡಿ. ಕ್ಯಾಮೆರಾದ ಲೈಟ್‌ ನಿಂದಾಗಿ ಆತ ಬೇಗ ಕುರುಡನಾಗುತ್ತಾನೆ ' ಎಂದು ಮಾಧ್ಯಮದವರ ಮೇಲೆ ಗರಂ ಆಗಿದ್ದಾರೆ ಸೈಫ್ ಅಲಿ ಖಾನ್.