2017ರಲ್ಲಿ ಜನಿಸಿದ ಆರೋಹಿ ಹಾಗೂ ಯಶ್ ಜೋಹಾರ್ ಬಾಲಿವುಡ್ ಪಾಪ್ಯೂಲರ್ ಸ್ಟಾರ್ ಕಿಡ್ಸ್ ಎಂಬ ಪಟ್ಟಿಗೆ ಸೆರಿಕೊಂಡಿದ್ದರು. ಇವರಿಬ್ಬರ ವಿಡಿಯೋ ಹಾಗೂ ಫೋಟೊವನ್ನು ಕರಣ್ ತಮ್ಮ ಇನ್ ಸ್ಟಾಗ್ರಾಂ ಖಾತೆಯಲ್ಲಿ ಅಪ್ಲೋಡ್ ಮಾಡಿದ್ದಾಗ ಸಿಕ್ಕಾಪಟ್ಟೆ ವೈರಲ್ ಆಗಿದ್ದವು.

ಇನ್ನು ಬರ್ತ್ ಡೇ ಕೇಕ್ ಮೇಲೆ ‘ವಿ ಲವ್ ಯೂ’ ಎಂದು ಇಬ್ಬರು ಮಕ್ಕಳ ಎರಡು ವರ್ಷದ ಜರ್ನಿ ಫೋಟೊಗಳನ್ನು ಹಾಕಿಸಿದ್ದರು. ಒಂದೇ ರೀತಿಯ ಉಡುಪು ತೊಡಿಸಿ ಸೆಲಬ್ರೇಟ್ ಮಾಡಿದರು. ಆರೋಹಿ ಕೆಂಪು ಬಣ್ಣದ ಜೆರ್ಸಿ, ಯಶ್ ನೀಲಿ ಜರ್ಸಿಯಲ್ಲಿ ಕಣ್ಮನ ಸೆಳೆದರು.

 

 

ಬಾಲಿವುಡ್ ನಟ ನಟಿಯರಾದ ಆಲಿಯ ಭಟ್, ಮೀರಾ ಕಪೂರ್, ಮನೀಷ್ ಮಲ್ಹೋತ್ರಾ, ವರುಣ್ ಸೇರಿದಂದೆ ಹಲವಾರು ಗಣ್ಯರು ಆಗಮಿಸಿದ್ದರು.

 

ಕರಣ್ ಅವಳಿ ಮಕ್ಕಳಿಗೆ ಮನೆಯೊಂದನ್ನು ವಿನ್ಯಾಸಗೊಳಿಸಿದ್ದು, ಗೌರಿ ಖಾನ್ ಇದರ ಬಗ್ಗೆ ಇನ್ ಸ್ಟಾಗ್ರಾಂ ಖಾತೆಯಲ್ಲಿ ಫೋಟೊ ಜೊತೆ ಭಾವನಾತ್ಮಕವಾಗಿ ಬರೆದುಕೊಂಡಿದ್ದರು.

ಕರಣ್ ಜೋಹರ್ ಅವಳಿ ಮಕ್ಕಳಿಗಾಗಿ ಮನೆ ಡಿಸೈನ್ ಮಾಡಿದ ಗೌರಿ ಖಾನ್