ಮುಂಬೈ (ಆ. 10): ಬಾಲಿವುಡ್ ಸೆಲಬ್ರಿಟಿಗಳ ಮೋಸ್ಟ್ ಫೇವರೇಟ್ ಡೈರಕ್ಟರ್ ಕರಣ್ ಜೋಹರ್, ಗೌರಿ ಖಾನ್ ಜೊತೆಗಿನ ಸ್ನೇಹದ ಬಗ್ಗೆ ಮಾತನಾಡಿದ್ದಾರೆ. ಕರಣ್ ಜೋಹರ್ ಹಾಗೂ ಗೌರಿ ಖಾನ್ ಪಾರ್ಟಿಗಳಲ್ಲಿ, ಫ್ಯಾಮಿಲಿ ಕಾರ್ಯಕ್ರಮಗಳಲ್ಲಿ ಆಗಾಗ ಒಟ್ಟಾಗಿ ಕಾಣಿಸಿಕೊಳ್ಳುತ್ತಾರೆ. ಪರ್ಸನಲ್ ಸಂಬಂಧದ ಬಗ್ಗೆ ಏನೂ ಮಾತನಾಡದೇ ವೃತ್ತಿ ಸಂಬಂಧದ ಬಗ್ಗೆ ಮಾತನಾಡಿದ್ದಾರೆ. 

ಕರಣ್ ಜೋಹರ್ ಅವಳಿ ಮಕ್ಕಳಿಗಾಗಿ ಗೌರಿ ಖಾನ್ ಮನೆಯನ್ನು ವಿನ್ಯಾಸಗೊಳಿಸಿದ್ದಾರೆ. 

ಸ್ನೇಹಿತ ಕರಣ್ ಜೋಹರ್ ಹಾಗೂ ಅವಳಿ ಮಕ್ಕಳಿಗಾಗಿ ಮಾಡಿದ ಡಿಸೈನನ್ನು ಗೌರಿ ಖಾನ್ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದರು. ಫೋಟೋಗಳ ಜೊತೆ ಭಾವನಾತ್ಮಕವಾಗಿ ಬರೆದುಕೊಂಡಿದ್ದರು. ಪ್ರತಿಯೊಬ್ಬ ಸೃಜನಾತ್ಮಕ ವ್ಯಕ್ತಿಗೂ ಸ್ಫೂರ್ತಿ ಅಗತ್ಯ. ಕರಣ್ ಜೋಹರ್ ಸಿನಿಮಾಗಳು ಟ್ರೆಂಡ್ಸ್ ಹುಟ್ಟು ಹಾಕುತ್ತವೆ. ಇನ್ನಷ್ಟು ಹೊಸ ಚಿತ್ರಗಳು ಬರಲಿ ಎಂದು ಬರೆದುಕೊಂಡಿದ್ದಾರೆ.