ನವದೆಹಲಿ(ಸೆ.21): ಭಾರತದ ಸಿನಿಪ್ರಿಯರಿಗೆ ಖುಷಿಯ ಸುದ್ದಿಯೊಂದು ಬಂದಿದ್ದು, ಈ ಬಾರಿಯ 92ನೇ ಆಸ್ಕರ್ ಪ್ರಶಸ್ತಿಗೆ ಭಾರತದ ಚಲನಚಿತ್ರಗಳ ಪೈಕಿ  ಗಲ್ಲಿ ಭಾಯ್  ಚಿತ್ರವನ್ನು ನಾಮಾಂಕಿತ ಮಾಡಲಾಗಿದೆ.

ಅಪರ್ಣ ಸೆನ್‌ ಅಧ್ಯಕ್ಷತೆಯಲ್ಲಿ ನಡೆದ ಸಮಿತಿ ಸದಸ್ಯರ ಸಭೆಯಲ್ಲಿ ಗಲ್ಲಿ ಭಾಯ್ ಚಿತ್ರವನ್ನು ಆಸ್ಕರ್‌ಗೆ ನಾಮಾಂಕಿತಗೊಳಿಸುವ ನಿರ್ಣಯಕ್ಕೆ ಬರಲಾಗಿದೆ.

ಬಾಲಿವುಡ್ ನಟ ರಣವೀರ್ ಸಿಂಗ್ ಮತ್ತು ಆಲಿಯಾ ಭಟ್ ಜೋಡಿಯ ಗಲ್ಲಿ ಬಾಯ್ ಆಸ್ಕರ್ ಪ್ರಶಸ್ತಿಗೆ ಭಾರತದಿಂದ ಅಧಿಕೃತವಾಗಿ ಸೇರಿದೆ. ಅತ್ಯುತ್ತಮ ಅಂತಾರಾಷ್ಟೀಯ ಚಲನಚಿತ್ರ ವಿಭಾಗಕ್ಕೆ ಈ ಚಿತ್ರ ಆಯ್ಕೆಯಾಗಿರುವುದು ವಿಶೇಷ.

ಗಲ್ಲಿ ಬಾಯ್ ಚಿತ್ರವನ್ನು ಖ್ಯಾತ ನಿರ್ದೇಶಕಿ ಝೋಯಾ ಅಖ್ತರ್ ನಿರ್ದೇಶಿಸಿದ್ದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಲು ಕನಸು ಕಂಡ ಮುಂಬೈನ ರ‍್ಯಾಪರ್ ೋರ್ವನ ಕಥೆಯಾಧಾರಿತ ಸಿನಿಮಾ ಇದಾಗಿದೆ. 

ಇನ್ನು ಗಲ್ಲಿ ಭಾಯ್ ಚಿತ್ರವನ್ನು ಆಸ್ಕರ್‌ಗೆ ನಾಮಾಂಕಿತ ಮಾಡಿದ ಜ್ಯೂರಿ ಪ್ಯಾನಲ್‌ನಲ್ಲಿ ಕರ್ನಾಟಕದಿಂದ ನಾಗತಿಹಳ್ಳಿ ಚಂದ್ರಶೇಖರ್ ಭಾಗವಹಸಿದ್ದರು.