ಆಲಿಯ ಭಟ್ ಹಾಗೂ ರಣ್ವೀರ್ ಸಿಂಗ್ ಅಭಿನಯದ ಚಿತ್ರ ‘ಗಲ್ಲಿ ಬಾಯ್’ ಪ್ರಚಾರ ಕಾರ್ಯಕ್ರಮದಲ್ಲಿ ಬ್ಯುಸಿಯಾಗಿದ್ದು, ಇದೇ ವೇಳೆ ಅಭಿಮಾಣಿಗಳ ಮೇಲೆ ಬಿದ್ದು ಕೆಲವರಿಗೆ ಗಾಯವಾಗಿದೆ ಎಂಬುವುದು ಸುದ್ದಿ.

ಪ್ರಚಾರದ ನಡುವೆ ಮಾತನಾಡುವಾಗ ಪಕ್ಕದಲ್ಲಿದ ಅಸಿಸ್ಟೆಂಟ್ ಗೆ ಧರಿಸಿದ ಟೊಪಿ ಹಾಗೂ ಕೂಲಿಂಗ್ ಗ್ಲಾಸ್ ಕೊಟ್ಟು ಅಭಿಮಾನಿಗಳ ಮೇಲೆ ಏಕಾಏಕಿ ಜಿಗಿದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಧರಿಸುವ ಪ್ರತಿವೊಂದು ಕಾಸ್ಟ್ಯೂಮ್ ನಲ್ಲಿ ವಿಭ್ನಿನ್ನತೆ ತೋರುವ ರಣ್ವೀರ್ ಸಿಂಗ್ ಎಲ್ಲರ ಗಮನ ಸೆಳೆಯುವುದರಲ್ಲಿ ಯಶಸ್ವಿಯಾಗುತ್ತಾರೆ. ಇನ್ನೂ ಪತ್ರಕರ್ತರಿಗೆ ಹಾಗೂ ಮಾಧ್ಯಮದವರಿಗೆ ಉತ್ತಮವಾಗಿ ಪ್ರತಿಕ್ರಿಯೆ ನೀಡುವ ರಣ್ವೀರ್ ಎಲ್ಲರಿಗೂ ಅಚ್ಚು ಮೆಚ್ಚು.