ಬಾಲಿವುಡ್ ಪೌರಾಣಿಕ ಸಿನಿಮಾಗಳೆಂದರೇನೇ ಹಾಗೆ. ಗಗನ ಮುಟ್ಟುವ ಬಜೆಟ್, ಮನ ಮುಟ್ಟುವ ಕಥೆ ಹಾಗೂ ಮಿಸ್ ಮಾಡದ ಬಾಕ್ಸ್ ಆಫೀಸ್ ಕಲೆಕ್ಷನ್. ಎವರ್ ಗ್ರೀನ್ ಲಿಸ್ಟ್ ಸೇರಲು ರೆಡಿಯಾಗುತ್ತಿದೆ ‘ರಾಮಾಯಣ’.

 

ಪೌರಾಣಿಕ ಕಥನವಾದ ರಾಮಾಯಣವನ್ನು ಮೂರು ಭಾಗಗಳಲ್ಲಿ, ‘ತ್ರೀಡಿ’ ಮಾದರಿಯಲ್ಲಿ ತೆರೆಯ ಮೇಲೆ ತರಲು ತೆಲುಗು ಚಿತ್ರರಂಗದ ಘಟಾನುಘಟಿಗಳಾದ ಅಲ್ಲು ಅರವಿಂದ್‌, ಪ್ಯಾಂಟಮ್‌ ಫಿಲ್ಮ್ ಸಂಸ್ಥಾಪಕ ಮಧು ಮಂಟೆನಾ ಮತ್ತು ಪ್ರೈಂ ಫೋಕಸ್‌ ಸ್ಟುಡಿಯೋ ಸಂಸ್ಥಾಪಕ ನಮಿತ್‌ ಮಲ್ಹೋತ್ರಾ ಅಣಿಯಾಗಿದ್ದಾರೆ.

ರಾಮಾಯಣ ಕುರಿತು ಬರಲಿದೆ ಮೆಗಾ ಬಜೆಟ್ ಚಿತ್ರ

ಹಿಂದಿ, ತಮಿಳು ಮತ್ತು ತೆಲುಗು ಭಾಷೆಯಲ್ಲಿ ನಿರ್ಮಾಣಕ್ಕೆ ಯೋಜಿಸಲಾಗಿದೆ. ದಂಗಲ್‌ ಚಿತ್ರದ ನಿರ್ದೇಶಕ ನಿತೀಶ್‌ ತಿವಾರಿ ಮತ್ತು ಮಾಮ್‌ ಚಿತ್ರದ ನಿರ್ದೇಶಕ ರವಿ ಉದ್ಯಾವರ್‌ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಮುಖ್ಯವಾಗಿ ಪಾತ್ರ ಆಯ್ಕೆ ಬಗ್ಗೆ ತಲೆ ಕೆಡಿಸಿಕೊಂಡ ಚಿತ್ರತಂಡ ರಾಮನ ಪಾತ್ರದಲ್ಲಿ ಹೃತಿಕ್ ರೋಷನ್ ಕಾಣಿಸಿಕೊಂಡರೆ ಸೀತಾ ಪಾತ್ರದಲ್ಲಿ ಬಾಲಿವುಡ್ ಡಿಂಪಲ್ ಕ್ವೀನ್ ದೀಪಿಕಾ ಪಡುಕೋಣೆ ಕಾಣಿಸಿಕೊಳ್ಳಲಿದ್ದಾರೆ ಎಂದು ಸುದ್ದಿ ಹರಿದಾಡುತ್ತಿದೆ.