ನಿನ್ನ ಬಾಡಿ ಪಾರ್ಟ್ಸ್ ಇಷ್ಟ ಎಂದು ಟ್ವೀಟ್ ಮಾಡಿದವನಿಗೆ ಬಾಲಿವುಡ್ ಸುಂದರಿ ತಾಪ್ಸಿ ಪನ್ನು ನೀಡಿದ ಉತ್ತರ ನಿಮಗೊಮ್ಮೆ ನಗು ತರಿಸುತ್ತೆ. ಹಾಗಾದ್ರೆ ಅವರು ನೀಡಿದ ಆ ಉತ್ತರ ಏನು..? 

ಬೆಂಗಳೂರು: ಬಾಲಿವುಡ್ ಸುಂದರಿ, ಪಿಂಕ್ ಚಿತ್ರದ ನಟನೆಯಿಂದ ಪ್ರಬುದ್ಧಳು ಎನಿಸಿಕೊಂಡ ತಾಪ್ಸಿ ಪನ್ನು ಟ್ವಿಟ್ಟರ್ ಸದಾ ಆ್ಯಕ್ಟಿವ್. ಅಲ್ಲದೇ, ತಮ್ಮ ಕಾಲೆಳೆದವರಿಗೆ ಒಂದಲ್ಲಿ ಒಂದು ರೀತಿಯಲ್ಲಿ ಟಾಂಗ್ ನೀಡುವುದಲ್ಲಿಯೂ ಎತ್ತಿದೆ ಕೈ. 

ಇದೀಗ ಮತ್ತೆ ಕೆಟ್ಟದಾಗಿ ಕಾಮೆಂಟ್ ಮಾಡಿದವನ್ನೊಬ್ಬನಿಗೆ ಬಿಸಿ ಮುಟ್ಟಿಸಿದ್ದಾರೆ ತಾಪ್ಸಿ. 'ನಿಮ್ಮ ದೇಹದ ಅಂಗಾಂಗಳು ನಂಗಿಷ್ಟ...' ಎಂದು ತಾಪ್ಸಿಯನ್ನು ಕೆಟ್ಟ ಭಾವನೆಯಿಂದ ನೋಡಿದವನಿಗೆ ಬಾಲಿವುಡ್ ಸುರ ಸುಂದರಾಂಗಿ, ತಮಾಷೆಯಾಗಿಯೇ ಉತ್ತರಿಸಿದ್ದಾರೆ.

ಟ್ವಿಟರ್‌ನಲ್ಲಿ ಅಕು ಪಾಂಡೆ ಎನ್ನುವಾತ Taapsee i love your body parts ಎಂದು ಟ್ವೀಟ್ ಮಾಡಿದ್ದಾನೆ. ಇದಕ್ಕೆ ಪ್ರತಿಕ್ರಿಯಿಸಿದ ತಾಪ್ಸಿ, 'ವಾವ್ ಐ ಲೈಕ್ ದೆಮ್ ಟೂ, ನಿಮ್ಮ ಇಷ್ಟದ ಭಾಗ ಯಾವುದು? ನನಗೆ ಮಂದುಳಿನ ಸೆರೆಬ್ರಮ್ ಇಷ್ಟ,' ಎಂದು ಪ್ರತಿಕ್ರಿಯಿಸಿದ್ದಾರೆ. 

ನಾಯಕಿ ಮಿಥಾಲಿರಾಜ್ ಪಾತ್ರದಲ್ಲಿ ಕಾಣಿಸಿಕೊಳ್ತಾರ ತಾಪ್ಸಿ ಪನ್ನು?

ಸೆರೆಬ್ರಮ್ ಮೆದುಳಿನಲ್ಲಿ ಅತ್ಯಂತ ಪ್ರಮುಖ ಭಾಗವಾಗಿದ್ದು, ಕಾಲೆಳೆದವನಿಗೆ ಜಾಣ್ಮೆಯಿಂದ ಉತ್ತರಿಸಿದ್ದಾರೆ. ಇದಕ್ಕೆ ತಾಪ್ಸಿ ಅಭಿಮಾನಿಗಳು ಪ್ರತಿಕ್ರಿಯಿಸಿದ್ದು 'ಯು ಆರ್ ಬಾಸ್ ಲೇಡಿ...' ಎಂದಿದ್ದಾರೆ. 

Scroll to load tweet…

ತಾಪ್ಸಿ ಖಾರವಾದ ಪ್ರತಿಕ್ರಿಯೆ ನೀಡಿದ್ದು, ಇದೇ ಮೊದಲ ಬಾರಿಯಲ್ಲ. ಈ ಹಿಂದೆಯೂ ಅನೇಕ ಬಾರಿ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ವಿರುದ್ಧ ಟ್ರಾಲ್ ಮಾಡಿದವರನ್ನು ಸರಿಯಾಗಿಯೇ ತರಾಟೆಗೆ ತೆಗೆದುಕೊಂಡಿದ್ದರು. 

ಬಿಕಿನಿ ಫೋಟೋಗೆ ಕಮೆಂಟು ತಾಪ್ಸಿಗೆ ಸಿಟ್ಟು: ಕೊಟ್ಟ ಮಾತಿನ ತಿರುಗೇಟು ಇದು!

ಈ ಹಿಂದೆ ವ್ಯಕ್ತಿಯೋರ್ವ 'ತಾಪ್ಸಿ ಬಾಲಿವುಡ್ ಕಂಡ ಅತ್ಯಂತ ಕೆಟ್ಟ ತಾರೆ, ಆಕೆ ಎರಡು ಮೂರು ಚಿತ್ರಗಳ ನಂತರ ಬಾಲಿವುಡ್ ನಲ್ಲಿ ಉಳಿಯುವುದಿಲ್ಲ...' ಎಂದು ಹೇಳಿದ್ದ. ಇದಕ್ಕೂ ಖಡಕ್ ಆಗಿಯೇ ಪ್ರತಿಕ್ರಯೆ ನೀಡಿದ್ದ ತಾಪ್ಸಿ, ಈಗಾಗಲೇ ಮೂರು ಚಿತ್ರಗಳಲ್ಲಿ ತಾವು ನಟಿಸಿದ್ದು, ಇನ್ನೂ ಮೂರು ಚಿತ್ರಗಳಿಗೆ ಸಹಿ ಹಾಕಿದ್ದಾಗಿ ಹೇಳಿದ್ದರು.