ನಾಯಕಿ ಮಿಥಾಲಿರಾಜ್ ಪಾತ್ರದಲ್ಲಿ ಕಾಣಿಸಿಕೊಳ್ತಾರ ತಾಪ್ಸಿ ಪನ್ನು?

First Published 30, Jul 2018, 7:54 PM IST
pink star tappse pannu keen to play Mithali raj in cricketers boipic
Highlights

ಬಾಲಿವುಡ್‌ನಲ್ಲಿ ಜೀವನಾಧಾರಿತ ಚಿತ್ರಗಳು ಹೆಚ್ಚು ಸದ್ದು ಮಾಡುತ್ತಿದೆ. ಅದರಲ್ಲೂ ಕ್ರೀಡಾಪಟುಗಳು ಬಯೋಪಿಕ್ ಚಿತ್ರಗಳು ಬಾಕ್ಸ್‌ಆಫಿಸ್ ಕೊಳ್ಳೆ ಹೊಡೆದಿದೆ. ಇದೀಗ ಟೀಂ ಇಂಡಿಯಾ ಮಹಿಳಾ ನಾಯಕಿ ಮಿಥಾಲಿ ರಾಜ್ ಚಿತ್ರಕ್ಕೂ ತಯಾರಿ ಆರಂಭಗೊಂಡಿದೆ. ಹಾಗಾದರೆ ಮಿಥಾಲಿ ಪಾತ್ರ ಮಾಡ್ತಾರ ತಾಪ್ಸಿ? ಇಲ್ಲಿದೆ ಉತ್ತರ.

ಮುಂಬೈ(ಜು.30): ಟೀಂ ಇಂಡಿಯಾ ಮಾಜಿ ನಾಯಕರಾದ ಎಂ ಎಸ್ ಧೋನಿ, ಮೊಹಮ್ಮದ್ ಅಜರುದ್ದೀನ್ ಜೀವನಾಧಾರಿತ ಚಿತ್ರಗಳು ಈಗಾಗಲೇ ಬಾಲಿವುಡ್‌ನಲ್ಲಿ ಭರ್ಜರಿ ಯಶಸ್ಸು ಕಂಡಿದೆ. ಇದೀಗ ಟೀಂ ಇಂಡಿಯಾ ಮಹಿಳಾ ನಾಯಕಿ ಮಿಥಾಲಿ ರಾಜ್ ಬಯೋಪಿಕ್‌ಗೆ ತಯಾರಿ ನಡೆಯುತ್ತಿದೆ.

ಕಳೆದ ಸೆಪ್ಟೆಂಬರ್‌ನಲ್ಲಿ ಮಿಥಾಲಿ ರಾಜ್ ಬಯೋಪಿಕ್‌ ಚಿತ್ರದ ಹಕ್ಕುಗಳನ್ನ ಖಾಸಿಗಿ ಫಿಲ್ಮ್ ಪ್ರೊಡಕ್ಷನ್ ಪಡೆದುಕೊಂಡಿದೆ. ಮಹಿಳಾ ಕ್ರಿಕೆಟಿಗರಲ್ಲಿ ಗರಿಷ್ಠ ರನ್ ಸಿಡಿಸಿ ವಿಶ್ವದಾಖಲೆ ಬರೆದಿರುವ ಮಿಥಾಲಿ ರಾಜ್ ಚಿತ್ರದ ತಯಾರಿಗಳು ಆರಂಭಗೊಂಡಿದೆ.

ಮಹಿಳಾ ತಂಡದ ಯಶಸ್ವಿ ನಾಯಕಿ ಮಿಥಾಲಿ ರಾಜ್ ಪಾತ್ರ  ಯಾರು  ನಿರ್ವಹಿಸಲಿದ್ದಾರೆ ಅನ್ನೋ ಕುತೂಹ ಈಗ ಅಭಿಮಾನಿಗಳಲ್ಲಿ ಮನೆಮಾಡಿದೆ. ಬಾಲಿವುಡ್‌ನಲ್ಲಿ ಸದ್ಯ ಜನಪ್ರೀಯವಾಗಿರೋ ತಾಪ್ಸಿ ಪನ್ನು, ಮಿಥಾಲಿ ಪಾತ್ರ ನಿರ್ವಹಿಸಲು ಉತ್ಸುಕರಾಗಿದ್ದಾರೆ.

ಹಾಕಿ ಪಟು ಸಂದೀಪ್ ಸಿಂಗ್ ಜೀವನಾಧಾರಿತ ಸೂರ್ಮ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಂಡ ತಾಪ್ಸಿ ಪನ್ನು ಇದೀಗ ಮಿಥಾಲಿ ಬಯೋಪಿಕ್‌ನಲ್ಲಿ ಮುಖ್ಯಪಾತ್ರ ನಿರ್ವಹಿಸಲು ಆಸಕ್ತಿ ತೋರಿದ್ದಾರೆ. ಮಿಥಾಲಿ ಪಾತ್ರಕ್ಕೆ ನನ್ನನ್ನ ಆಯ್ಕೆ ಮಾಡಿದರೆ ಅದಕ್ಕಿಂತ ಸಂತಸದ ವಿಚಾರ ಮತ್ತೊಂದಿಲ್ಲ ಎಂದು ತಾಪ್ಸಿ ಹೇಳಿದ್ದಾರೆ.

loader