ಶಾರೂಕ್ ಖಾನ್ ಅಭಿನಯದ ಜೀರೋ ಚಿತ್ರದಲ್ಲಿ ಅಭಿಮಾನಿಗಳಿಗೆ ಸರ್ಪ್ರೈಸ್ | ಭಾರೀ ಸದ್ದು ಮಾಡುತ್ತಿದೆ ’ಜೀರೋ’ | ತೆರೆ ಮೇಲೆ ಬರಲಿದ್ದಾರೆ ಶ್ರೀದೇವಿ  

ಮುಂಬೈ (ನ. 28): ಬಾಲಿವುಡ್ ಬಾದ್ ಶಾ ಶಾರೂಕ್ ಖಾನ್ ಅಭಿನಯದ ಜೀರೋ ಚಿತ್ರ ಟ್ರೇಲರ್ ನಿಂದಲೇ ಭಾರೀ ಸದ್ದು ಮಾಡುತ್ತಿದೆ. ಚಿತ್ರ ಬಿಡುಗಡೆಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ. 

Add Asianetnews Kannada as a Preferred SourcegooglePreferred

ಚೀನಾ ಬೀಚ್‌ನಲ್ಲಿ ಹಾಟ್ ಲುಕ್‌ನಲ್ಲಿ ಮಾನುಷಿ ಛಿಲ್ಲರ್!

ಈ ಚಿತ್ರದಲ್ಲಿ ಶಾರೂಖ್ ಅಭಿಮಾನಿಗಳಿಗೆ ಸರ್ಪ್ರೆಸ್ ನೀಡಿದ್ದಾರೆ. ಬಾಲಿವುಡ್ ದಂತಕತೆ, ಅತಿಲೋಕ ಸುಂದರಿ ಶ್ರೀದೇವಿ ಜೀರೋ ಚಿತ್ರದ ಹಾಡೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಪಾರ್ಟಿಯಲ್ಲಿ ನಡೆಯುವ ಸಂದರ್ಭದಲ್ಲಿ ಶ್ರೀದೇವಿ ಹಾಡೊಂದಕ್ಕೆ ಸ್ಟೆಪ್ ಹಾಕಿದ್ದಾರೆ. ಕರಿಷ್ಮಾ ಕಪೂರ್ ಹಾಗೂ ಅಲಿಯಾ ಭಟ್ ಜೊತೆ ಸ್ಟೆಪ್ ಹಾಕಿದ್ದಾರೆ. 

ನಿಶಕ್ತಿಯಿಂದ ಬಳಲುತ್ತಿದ್ದಾರಾ ರಮ್ಯಾ? ಅನುಮಾನ ಮೂಡಿಸಿದೆ ಈ ಫೋಟೋ!

ಅಭಿಮಾನಿಗಳಿಗೆ ಸರ್ಪ್ರೈಸ್ ಕೊಡಲು ಶಾರೂಕ್ ಕಾದಿದ್ದಾರೆ. ಶ್ರೀದೇವಿಯವರ ಹಾಡಿಗೆ ಕತ್ತರಿ ಪ್ರಯೋಗ ಮಾಡುವುದಿಲ್ಲ ಎಂದಿದ್ದಾರೆ. 

ಜೀರೋ ಚಿತ್ರವನ್ನು ಆನಂದ್ ಎಲ್ ರೈ ನಿರ್ದೇಶಿಸಿದ್ದು, ಶಾರೂಕ್ ಖಾನ್ ಗೆ ಕತ್ರಿನಾ ಕೈಫ್ ಹಾಗೂ ಅನುಷ್ಕಾ ಶರ್ಮಾ ಸಾಥ್ ನೀಡಿದ್ದಾರೆ. ಇದೇ ಡಿಸಂಬರ್ 21 ಕ್ಕೆ ಚಿತ್ರ ತೆರೆ ಕಾಣಲಿದೆ.