ಮಂಡ್ಯದ ಗಂಡು ಅಂಬರೀಶ್ ಅಂತಿಮ ಕ್ರಿಯೆಗೆ ನಟಿ ರಮ್ಯಾ ಗೈರಾಘಿದ್ದು, ಈ ವಿಚಾರ ಹಲವಾರು ಊಹಾಪೋಹಗಳನ್ನು ಹುಟ್ಟು ಹಾಕಿದ್ದವು. ಕಾಂಗ್ರೆಸ್ ನಾಯಕಿ ನಟಿ ರಮ್ಯಾ ಕೂಡಾ ಈ ಕುರಿತಾಗಿ ಯಾವುದೇ ಸ್ಪಷ್ಟೀಕರಣ ನೀಡದಿರುವುದು ಮತ್ತಷ್ಟು ಚರ್ಚೆಗೆ ಗ್ರಾಸವಾಗಿತ್ತು. ಆದರೀಗ ಈ ಎಲ್ಲಾ ಬೆಳವಣಿಗೆಗಳ ಬೆನ್ನಲ್ಲೇ ರಮ್ಯಾ ತನ್ನ ಇನ್ಸ್ಟಾಗ್ರಾಂ ಸ್ಟೇಟಸ್‌ನಲ್ಲಿ ಫೋಟೋ ಒಂದನ್ನು ಶೇರ್ ಮಾಡಿಕೊಂಡಿದ್ದು ಅವರಿಗೇನಾಗಿದೆ ಎಂಬ ಅನುಮಾನಗಳು ಹುಟ್ಟಿಕೊಳ್ಳುವಂತೆ ಮಾಡಿದೆ.  

ಮಂಡ್ಯದ ಗಂಡು ನಟ ಅಂಬರೀಶ್ ಅಂತಿಮ ದರ್ಶನ ಪಡೆಯಲು ಬಾರದ ರಮ್ಯಾ ವಿರುದ್ಧ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಅಕ್ರೋಶಿತ ಜನರು ರಮ್ಯಾಗೆ ಶ್ರದ್ಧಾಂಜಲಿ ಸಲ್ಲಿಸುವ ಫೋಟೋಗಳನ್ನೂ ಶೇರ್ ಮಾಡಿಕೊಂಡಿದ್ದರು. ಇದಾದ ಬಳಿಕ ಡಿಕೆ ಶಿವಕುಮಾರ್ ಕಾಲುನೋವಿನ ಕಾರಣದಿಂದಾಗಿ ರಮ್ಯಾಗೆ ಅಂತಿಮ ಕ್ರಿಯೆಯಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ ಎಂಬ ಸ್ಪಷ್ಟೀಕರಣ ನೀಡಿದ್ದರು. ಇದೀಗ ಈ ಎಲ್ಲಾ ಬೆಳವಣಿಗೆಗಳ ಬೆನ್ನಲ್ಲೇ ನಟಿ ಮಂಡ್ಯದ ಹುಡುಗಿ ಫೋಟೋ ಒಂದನ್ನು ಶೇರ್ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: ರಮ್ಯಾ ವಿರುದ್ಧ ನಟ ಜಗ್ಗೇಶ್ ಕಿಡಿ

Scroll to load tweet…

ಕಲಿಯುಗದ ಕರ್ಣನ ನಿಧನದ ಬಳಿಕ ಟ್ವೀಟ್ ಒಂದನ್ನು ಮಾಡಿ ಸಂತಾಪ ಸೂಚಿಸಿದ್ದ ರಮ್ಯಾ ಮೌನ ವಹಿಸಿದ್ದರು. ಆದರೀಗ ತಮ್ಮ ದೀರ್ಘ ಮೌನವನ್ನು ಮುರಿದಿರುವ ರಮ್ಯಾ ಇನ್ಸ್ಟಾಗ್ರಾಂ ಸ್ಟೇಟಸ್ ನಲ್ಲಿ ಔಷಧಿಯೊಂದರ ಫೋಟೋ ಶೇರ್ ಮಾಡಿ 'ಕಾಪಾಡಿಕೊಳ್ಳಲು' ಎಂದು ಬರೆದುಕೊಂಡಿದ್ದಾರೆ. ತಾವು ಯಾಕೆ ಅಂಬಿ ದರ್ಶನಕ್ಕೆ ಬಂದಿಲ್ಲ ಎಂದು ಸ್ಪಷ್ಟನೆ ನೀಡದ ರಮ್ಯಾ, ಈ ಫೋಟೋ ಹಂಚಿಕೊಂಡಿರುವುದು ಮಾತ್ರ ಬಹಳಷ್ಟು ಅನುಮಾನಗಳನ್ನು ಹುಟ್ಟು ಹಾಕಿದೆ.

ಇದನ್ನೂ ಓದಿ: ಅಂಬಿ ಅಂಕಲ್ ದರ್ಶನಕ್ಕೆ ಕೊನೆಗೂ ಬಾರದ ರಮ್ಯಾ ಎಲ್ಲಿದ್ದಾರೆ?

ಫೋಟೋದಲ್ಲಿರುವ ಕ್ಯಾಪ್ಸೂಲ್ ಯಾವುದು? ಯಾಕಾಗಿ ಬಳಸುತ್ತಾರೆ?

ರಮ್ಯಾ 'ಲಯನ್ ಹಾರ್ಟ್' ಎಂಬ ಕ್ಯಾಪ್ಸೂಲ್ ಪೋಟೋ ಶೇರ್ ಮಾಡಿಕೊಂಡಿದ್ದು, ಇದನ್ನು ಯಾಕಾಗಿ ಬಳಸುತ್ತಾರೆ ಎಂದು ಹುಡುಕಾಟ ನಡೆಸಿದಾಗ ಉರಿಯೂತ, ಸಂಧಿವಾತ, ರಕ್ತದೊತ್ತಡ, ಉರಿಯೂತ, ಹೃದಯ ಸಂಬಂಧಿ ಕಾಯಿಲೆ, ನಿಶಕ್ತಿ ಹಾಗೂ ಮಾನಸಿಕ ಒತ್ತಡದ ನಿವಾರಣೆಗೆ ಇದನ್ನು ವೈದ್ಯರು ಸೂಚಿಸುತ್ತಾರೆ ಎಂದು ಗೂಗಲ್‌ನಲ್ಲಿ ಮಾಹಿತಿ ನೀಡಲಾಗಿದೆ.

ರಮ್ಯಾ ಶೇರ್ ಮಾಡಿಕೊಂಡಿರುವ ಫೋಟೋ ಹಾಗೂ ಬರೆದುಕೊಂಡಿರುವ ಸಾಲುಗಳನ್ನು ಗಮನಿಸಿದರೆ ನಿಶಕ್ತಿಯಿಂದ ಬಳಲುತ್ತಿದ್ದಾರಾ ಎಂಬ ಅನುಮಾನಗಳು ಮೂಡುವುದು ಸಹಜ. ಈ ಹಿಂದೆ ಕಾಲಿನ ರಮ್ಯಾ ತಮ್ಮನ್ನು ತಾವು ಯಾವುದರಿಂದ 'ಕಾಪಾಡಿಕೊಳ್ಳಲು' ಈ ಔಷಧಿ ಬಳಸುತ್ತಿದ್ದಾರೆ ಎಂಬುವುದೂ ಉತ್ತರ ಸಿಗದ ಪ್ರಶ್ನೆಯಾಗಿ ಉಳಿದಿದೆ. ಅಂತಿಮವಾಗಿ ಕಾಂಗ್ರೆಸ್ ನಾಯಕಿ ಯಾಕಿಷ್ಟು ಮೌನ ವಹಿಸಿದ್ದಾರೆ, ಯಾಕೆ ಸಾರ್ವಜನಿಕವಾಗಿ ಕಾಣಿಸುತ್ತಿಲ್ಲ ಎಂಬುವುದೂ ಇನ್ನೂ ನಿಗೂಢ

View post on Instagram