ದಿಶಾ ಪಟಾನಿ ಹೆಸರು ಕೇಳಿದರೆ ಕಣ್ಣ ಮುಂದೆ ಅವರ ಹಾಟ್‌ ಫೋಟೋಗಳು ಬಂದು ಹೋಗುತ್ತವೆ. ಸೀದಾ ಸೋಷಲ್‌ ಮೀಡಿಯಾಗಳಲ್ಲಿ ಅವರ ಅಕೌಂಟ್‌ ಪ್ರವೇಶ ಮಾಡಿದರೆ ಅಲ್ಲಿಯೂ ಬಿಕಿನಿ ತೊಟ್ಟ ಫೋಟೋಗಳಿಗೆ ಬರ ಇರುವುದಿಲ್ಲ. ಅದಕ್ಕಾಗಿಯೇ ದಿಶಾ ಎಂದರೆ ಹಾಟ್‌ ಬೆಡಗಿ ಎನ್ನುವ ಮಾತು ಬಾಲಿವುಡ್‌ ಅಂಗಳದಲ್ಲಿ ಚಾಲ್ತಿಯಲ್ಲಿದೆ.

ಈ ಪಟ್ಟಬಿಲ್‌ಕುಲ್‌ ದಿಶಾ ಪಟಾನಿಗೆ ಬೇಡವಾಗಿದೆ. ಅದಕ್ಕಾಗಿಯೇ ಅವರೀಗ ‘ನಾನು ಹಾಟ್‌ ಅಲ್ಲ, ಅದಕ್ಕೆ ಬದಲಾಗಿ ಧೈರ್ಯವಂತೆ. ಸ್ಟೆ್ರೖಟ್‌ ಫಾರ್ವಡ್‌’ ಎಂದು ಹೇಳಿಕೊಂಡಿದ್ದಾರೆ.

ಬಾತ್‌ಟಬ್‌ಗಿಳಿದ ದಿಶಾ ಪಟಾನಿ ಪೋಟೋ ವೈರಲ್... ಅಂಥಾದ್ದೇನು ಇಲ್ಲ

‘ಐ ಆ್ಯಮ್‌ ನಾಟ್‌ ಹಾಟ್‌, ಐ ಆ್ಯಮ್‌ ಎ ಟಾಮ್‌ಬಾಯ್‌ (ಕನ್ನಡದಲ್ಲಿ ಗಂಡುಬೀರಿ). ಬಿಕಿನಿ ತೊಟ್ಟಫೋಟೋಗಳನ್ನು ಹಾಕಿದ ಮಾತ್ರಕ್ಕೆ ನಾನು ಹಾಟ್‌ ಬ್ಯೂಟಿ ಎಂದು ಪರಿಗಣಿಸಬೇಕಿಲ್ಲ’ ಎಂದು ದಿಶಾ ಹೇಳಿಕೊಳ್ಳುವುದರ ಜೊತೆಗೆ ತಾನು ಗಂಡುಬೀರಿಯ ರೀತಿ ಅನ್ನಿಸಿದ್ದನ್ನು ನೇರವಾಗಿ ಮಾಡಿಯೇ ತೀರುತ್ತೇನೆ ಎಂದು ಹೇಳಿಕೊಂಡಿದ್ದಾರೆ.

View post on Instagram

ಇದರ ಜೊತೆಗೆ ಸೋಷಲ್‌ ಮೀಡಿಯಾವನ್ನು ನಾನು ಹೆಚ್ಚು ಇಷ್ಟಪಡುತ್ತೇನೆ. ಅದರ ಮೂಲಕವೇ ನೇರವಾಗಿ ನನ್ನ ಅಭಿಮಾನಿಗಳೊಂದಿಗೆ ನನ್ನ ಭಾವನೆಗಳನ್ನು ಶೇರ್‌ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಸೋಷಲ್‌ ಮೀಡಿಯಾ ನನ್ನ ಜೀವನದ ಅವಿಭಾಜ್ಯ ಅಂಗ. ಆದರೂ ಅದರಿಂದ ಅಂತರ ಕಾಯ್ದುಕೊಳ್ಳಲೂ ನನಗೆ ಬರುತ್ತದೆ ಎಂದು ಹೇಳಿಕೊಂಡಿದ್ದಾರೆ ದಿಶಾ. ಇಲ್ಲಿ ದಿಶಾ ತನ್ನ ಸ್ವಭಾವವನ್ನು ಹೇಳಿಕೊಳ್ಳುವುದರ ಜೊತೆಗೆ ತನ್ನ ಬಗ್ಗೆ ಇರುವ ಅಭಿಪ್ರಾಯವೊಂದಕ್ಕೂ ಉತ್ತರ ಕೊಟ್ಟಿದ್ದಾರೆ.

ಆರ್ ಯು ವರ್ಜಿನ್? ತೂರಿ ಬಂದ ಪ್ರಶ್ನೆಗೆ ಟೈಗರ್ ಶ್ರಾಫ್ ಕೊಟ್ಟ ಉತ್ತರ ...