ಹೌಸ್‌ಫುಲ್‌ 4ನಲ್ಲಿ  ಪಾತ್ರಗಳ ಪರಿಚಯಕ್ಕಾಗಿ ಫಸ್ಟ್‌ಲುಕ್‌ಗಳ ಅನಾವರಣ ಮಾಡಿಕೊಂಡಿದೆ ಚಿತ್ರತಂಡ. ಇದು ಮಾಮೂಲಾದರೂ ಇಲ್ಲೊಂದು ಮಜಾ ಇದೆ.

ವೀಲ್‌ಚೇರ್‌ನಲ್ಲಿ ಅಕ್ಷಯ್ ತಾಯಿ; ಲಂಡನ್ ಬೀದಿಗಳಲ್ಲಿ ಆ್ಯಕ್ಷನ್ ಕಿಂಗ್ ...

ಅಕ್ಷಯ್‌ ಕುಮಾರ್‌, ಕೃತಿ ಸನೂನ್‌, ಪೂಜಾ ಹೆಗಡೆ, ಕೃತಿ ಕರಬಂಧ ರಿತೀಶ್‌ ದೇಶ್‌ಮುಖ್‌ ಅವರು ರಾಯಲ್‌ ಧಿರಿಸಿನ ಅವತಾರದಲ್ಲಿ ಮಿಂಚಿದ್ದಾರೆ. ಇದರೊಂದಿಗೆ ಕೊಂಚ ವಿಭಿನ್ನವಾಗಿ ಪೋಸ್ಟರ್‌ಗಳನ್ನು ತ್ರಿಡಿ ತಂತ್ರಜ್ಞಾನದಲ್ಲಿಯೂ ಮಾಡಿ ಅವುಗಳ ಮುಂದೆ ಸ್ವತಃ ಸ್ಟಾರ್‌ಗಳೇ ನಿಂತು ಆಕ್ಷನ್‌ ಮಾಡಿದ್ದಾರೆ.

8000 ಸಾವಿರ ದುಡಿಯಲು ಇಷ್ಟೊಂದು ಕಷ್ಟಪಡ್ತಾರಾ ಅಕ್ಷಯ್! ...

ಪಾತ್ರಗಳ ಹೆಸರಿನೊಂದಿಗೆ ಅಧಿಕೃತವಾಗಿ ಅಕ್ಷಯ್‌ ಕುಮಾರ್‌ ಮತ್ತು ಕೃತಿ ಸನೂನ್‌ ಈ ಪೋಸ್ಟರ್‌ಗಳನ್ನು ಸೋಷಲ್‌ ಮೀಡಿಯಾದಲ್ಲಿ ಶೇರ್‌ ಮಾಡಿಕೊಂಡಿದ್ದೂ ಆಗಿದೆ. ಅಭಿಮಾನಿಗಳಿಂದ ಚೆಂದದ ಪ್ರತಿಕ್ರಿಯೆಯೂ ಬಂದಾಗಿದೆ. ಇನ್ನು ಸರಿಯಾಗಿ ಒಂದು ತಿಂಗಳಿಗೆ (ಅ. 26) ತೆರೆಗೆ ಬರಲು ಸಿದ್ಧವಾಗಿದೆ ‘ಹೌಸ್‌ಫುಲ್‌ 4’.