ಬಾಲಿವುಡ್ ಆ್ಯಕ್ಷನ್ ಕಿಂಗ್ ಅಕ್ಷಯ್ ಕುಮಾರ್ ತುಂಬಾ ಡೌನ್ ಟು ಅರ್ತ್ ನೇಚರ್ ಇರುವ ವ್ಯಕ್ತಿ. ಸರಳತೆಯನ್ನು ಇಷ್ಟಪಡುವ ನಟ. 

ಅಮ್ಮನನ್ನು ವೀಲ್ ಚೇರ್ ಮೇಲೆ ಕೂರಿಸಿಕೊಂಡು ಲಂಡನ್ ಬೀದಿಗಳಲ್ಲಿ ಸುತ್ತಾಡುತ್ತಿರುವ ವಿಡಿಯೊವೊಂದನ್ನು ಶೇರ್ ಮಾಡಿ, ‘ಶೂಟಿಂಗನ್ನು ಸದ್ಯಕ್ಕೆ ನಿಲ್ಲಿಸಿ ಅಮ್ಮನ ಜೊತೆ ಲಂಡನ್ ನಲ್ಲಿದ್ದೇನೆ. ನೀವು ಜೀವನದಲ್ಲಿ ಎಷ್ಟು ಬ್ಯುಸಿ ಎನ್ನುವುದು ಮುಖ್ಯವಲ್ಲ. ಎಷ್ಟು ಬೆಳೆಯುತ್ತಿದ್ದೀರಿ ಎನ್ನುವುದೂ ಮುಖ್ಯವಲ್ಲ. ನಿಮ್ಮ ಪೋಷಕರಿಗೂ ವಯಸ್ಸಾಗುತ್ತಿದೆ ಎಂಬುದನ್ನು ಮರಿಯಬೇಡಿ. ನಿಮ್ಮ ಕೈಯಲ್ಲಿ ಸಾಧ್ಯವಾದಷ್ಟು ಅವರ ಜೊತೆ ಸಮಯ ಕಳೆಯಿರಿ’ ಎಂದು ಅಕ್ಷಯ್ ಹೇಳಿದ್ದಾರೆ. 

75 ವರ್ಷದ ಅರುಣಾ ಭಾಟಿಯ ಮೊಣಕಾಲು ನೋವಿನಿಂದ ಬಳಲುತ್ತಿದ್ದರು. ಸರ್ಜರಿಗಾಗಿ ಲಂಡನ್ ಗೆ ಕರೆದೊಯ್ಯಲಾಗಿತ್ತು. ಸರ್ಜರಿ ಯಶಸ್ವಿಯಾಗಿದೆ. 

 

ಅರುಣಾ ಭಾಟಿಯಾ ಯೋಗ ವಿಡಿಯೋವನ್ನು ಅಕ್ಷಯ್ ಶೇರ್ ಮಾಡಿಕೊಂಡಿದ್ದರು.