ಬಾಲಿವುಡ್‌ ಆ್ಯಕ್ಷನ್ ಸ್ಟಾರ್ ಅಕ್ಷಯ್ ಕುಮಾರ್ ಕುಟುಂಬ ಸಮೇತ ವಿದೇಶ ಪ್ರಯಾಣ ಮಾಡಿದ್ದಾರೆ. ದಾರಿಯಲ್ಲಿ ಫಿಟ್ನೆಸ್ ಚಾಲೆಂಜ್‌ವೊಂದನ್ನು ಕಂಡು ಸಾಹಸಕ್ಕೆ ಕೈ ಹಾಕಿದ್ದಾರೆ. ಇದರಲ್ಲಿ ಗೆದ್ದವರಿಗೆ 100 ಪೌಂಡ್ ಅಂದರೆ 8000 ಸಾವಿರ ರೂಪಾಯಿ ಬಹುಮಾನ ನೀಡುವುದಾಗಿ ಹೇಳಲಾಗಿತ್ತು. ಅಕ್ಷಯ್ ಸಾಹಸಕ್ಕೆ ಕೈ ಹಾಕಿ ಜಯಶಾಲಿ ಆಗಿದ್ದಾರೆ.

ವಿಶ್ವದ ಹೈಯೆಸ್ಟ್ ಪೇಯ್ಡ್ ನಟರಲ್ಲಿ ‘ಕೇಸರಿ’ ಹೀರೋ

 

ಇದರ ವಿಡಿಯೋ ಸೆರೆಹಿಡಿದ ಪತ್ನಿ ಟ್ವಿಂಕಲ್ ಖನ್ನಾ ' ಫೋರ್ಬ್ಸ್‌ ಪಟ್ಟಿಯಲ್ಲಿ ಅತೀ ಶ್ರೀಮಂತ ನಟನಾಗಿದ್ದರೂ ಇನ್ನೂ ಸಾಲದು. 100 ಪೌಂಡ್‌ಗಾಗಿ ಅಕ್ಷಯ್ ಏನು ಮಾಡಿದರು ನೋಡಿ ' ಎಂದು ಬರೆದುಕೊಂಡಿದ್ದಾರೆ.

‘ಫನಿ’ ಸಂತ್ರಸ್ತರಿಗೆ ಅಕ್ಷಯ್ ಕುಮಾರ್ ಆರ್ಥಿಕ ನೆರವು

ಇನ್ನು ಅಕ್ಷಯ್ ಅಭಿನಯಿಸಿರುವ ಸಿನಿಮಾಗಳೆಲ್ಲಾ ಬಾಕ್ಸ್ ಆಫೀಸ್ ನಲ್ಲಿ ಹಿಟ್ ಆಗಿದೆ. ಅದರಲ್ಲೂ ಕೆಲ ತಿಂಗಳ ಹಿಂದೆ ಬಿಡುಗಡೆಯಾದ ಚಿತ್ರ 'ಕೇಸರಿ' 200 ಕೋಟಿ ಆಧಿಕ ಹಣ ಗಳಿಸಿತ್ತು. ಈಗ ಮಿಷನ್ ಮಂಗಲ್ ನಲ್ಲಿ ಬ್ಯುಸಿಯಾಗಿದದ್ದು, ಬಾರೀ ನಿರೀಕ್ಷೆ ಹುಟ್ಟಿಸಿದೆ.