ಬಾಬಿ ಡಾರ್ಲಿಂಗ್‌ನ ವೀಡಿಯೊ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇದರಲ್ಲಿ ಆಕೆ ದೆಹಲಿ ಮೆಟ್ರೋದಲ್ಲಿ ಪ್ರಯಾಣಿಕನನ್ನು ಥಳಿಸಿ ನಿಂದಿಸುತ್ತಿರುವುದನ್ನು ಕಾಣಬಹುದು. ಪರಿಸ್ಥಿತಿ ಹದಗೆಡುವ ಲಕ್ಷಣ ಕಂಡಾಗ ಸಿಐಎಸ್‌ಎಫ್‌ ಸೈನಿಕ ಮಧ್ಯಪ್ರವೇಶಿಸಿ ಅವಾಂತರವನ್ನು ತಡೆದಿದ್ದಾನೆ.

ನವದೆಹಲಿ (ಅ.5): ತಾಲ್‌, ಚಲ್ತೇ ಚಲ್ತೇ, ಪೇಜ್‌ 3 ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದ ಬಾಲಿವುಡ್‌ ನಟಿ ಬಾಬಿ ಡಾರ್ಲಿಂಗ್‌, ಮೊದಲ ಆವೃತ್ತಿಯ ಬಿಗ್‌ ಬಾಸ್‌ನಲ್ಲೂ ಕಾಣಸಿಕೊಂಡಿದ್ದರು. ಅವರ ವಿಡಿಯೋವೊಂದು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ದೆಹಲಿ ಮೆಟ್ರೋದಲ್ಲಿ ಪ್ರಯಾಣಿಕನ ಜೊತೆ ವಾಗ್ವಾದಕ್ಕೆ ಇಳಿಯುವುದು ಮಾತ್ರವಲ್ಲ ಆತನ ಜೊತೆ ಫೈಟ್‌ ನಡೆಸಿದ ವಿಡಿಯೋ ಇದಾಗಿದೆ. ಇಬ್ಬರ ನಡುವೆ ಗಂಭೀರ ಪ್ರಮಾಣದಲ್ಲಿ ನಡೆದ ಫೈಟ್‌ನ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ಪ್ರಕಟವಾಗಿದೆ. ಪರಿಸ್ಥಿತಿ ಹದಗೆಡುವ ಲಕ್ಷಣ ಕಂಡಾಗಲೇ, ಮೆಟ್ರೋದಲ್ಲಿ ಭದ್ರತೆಯಲ್ಲಿದ್ದ ಸಿಐಎಸ್‌ಎಫ್‌ ಸೈನಿಕ ಮಧ್ಯಪ್ರವೇಶಿಸಿ ಇಬ್ಬರನ್ನೂ ಸಮಾಧಾನ ಮಾಡಿದ್ದಾರೆ. ವೈರಲ್ ವೀಡಿಯೊದಲ್ಲಿ, ಬಾಬಿ ಡಾರ್ಲಿಂಗ್ ಕೈಯಲ್ಲಿ ಬಿಳಿ ಬಣ್ಣದ ಬ್ಯಾಗ್‌ಅನ್ನು ಹಿಡಿದುಕೊಂಡಿದ್ದು, ಅದನ್ನು ವ್ಯಕ್ತಿಯೊಬ್ಬರು ಎಳೆಯಲು ಪ್ರಯತ್ನಿಸುತ್ತಿದ್ದಾರೆ. ಸಿಐಎಸ್ಎಫ್ ಸೈನಿಕ ಪ್ರಯಾಣಿಕನನ್ನು ರಕ್ಷಣೆ ಮಾಡಲು ಪ್ರಯತ್ನಿಸಿದ್ದಾರೆ. ಈ ನಡುವೆ ಬಾಬಿ ಡಾರ್ಲಿಂಗ್ ಆ ವ್ಯಕ್ತಿಯನ್ನು ನಿಂದಿಸುವುದು ಮತ್ತು ಥಳಿಸುವುದು ವಿಡಿಯೋದಲ್ಲಿ ದಾಖಲಾಗಿದೆ. ಈ ವಿಡಿಯೋವನ್ನು ಟ್ವಿಟರ್ ಬಳಕೆದಾರರು ಎಕ್ಸ್‌ನಲ್ಲಿ ಹಂಚಿಕೊಂಡಿದ್ದು, ಬಳಕೆದಾರರಿಂದ ಸಾಕಷ್ಟು ಪ್ರತಿಕ್ರಿಯೆಗಳು ಬರುತ್ತಿವೆ. 

ಈ ಘಟನೆಯ ಬಗ್ಗೆ ಬಾಬಿ ಡಾರ್ಲಿಂಗ್‌ ಈವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಮಾಧ್ಯಮ ವರದಿಗಳ ಪ್ರಕಾರ ಇದು ಒಂದು ವಾರದ ಹಿಂದೆ ನಡೆದಿರುವ ಘಟನೆ ಎನ್ನಲಾಗಿದೆ. ಈ ವಿಡಿಯೋ ಬಗ್ಗೆ ಡಿಎಂಆರ್‌ಸಿ ಕೂಡ ಹೇಳಿಕೆ ನೀಡಿದೆ. ಮೆಟ್ರೋ ರೈಲಿನಲ್ಲಿ ಇಂಥ ನಿಂದನಾರ್ಹ ನಡವಳಿಕೆಯ ಬಗ್ಗೆ ಪರೀಕ್ಷೆ ಮಾಡಲು ಮಾಡಲು ನಾವು ರಾಂಡಮ್‌ ಚೆಕ್‌ ಮಾಡುತ್ತೇವೆ. ಪ್ರಯಾಣಿಕರು ಕೂಡ ಇಂಥ ವಿಚಾರ ತಮ್ಮ ಗಮನಕ್ಕೆ ಬಂದರೆ, ತಕ್ಷಣವೇ ನಮ್ಮ ಗಮನಕ್ಕೆ ತರಬೇಕು. ಆಗ ತಕ್ಷಣವೇ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತದೆ' ಎಂದು ತಿಳಿಸಿದೆ.

ಬಾಬಿ ಡಾರ್ಲಿಂಗ್‌ ತೃತೀಯಲಿಂಗಿ ನಟಿ. ಪಂಕಜ್ ಶರ್ಮ ಆಗಿ ಜನಿಸಿದ್ದ ಇವರು, ನಂತರ ಲಿಂಗ ಬದಲಾಯಿಸಿ ಬಾಬಿ ಡಾರ್ಲಿಂಗ್‌ ಆಗಿದ್ದರು. 1999ರಲ್ಲಿ ಅನಿಲ್‌ ಕಪೂರ್‌ ನಟಿಸಿದ್ದ ಪ್ರಖ್ಯಾತ ತಾಲ್‌ ಚಿತ್ರದಲ್ಲಿ ಡ್ರೆಸ್‌ ಡಿಸೈನರ್‌ ಪಾತ್ರದಲ್ಲಿ ಬಾಬಿ ಡಾರ್ಲಿಂಗ್‌ ನಟಿಸಿದ್ದರು. ಕ್ಯಾ ಕೂಲ್ ಹೈ ಹಮ್ ಚಿತ್ರದ ಮೂಲಕ ಬಾಬಿ ಡಾರ್ಲಿಂಗ್ ನಟಿಯಾಗಿ ಫೇಮಸ್ ಆದರು. ನಾಸರ್ ಮತ್ತು ನವರಸ ಹಿಂದಿ ಚಿತ್ರಗಳಲ್ಲದೆ, ನಟಿ ಬಾಬಿ ಡಾರ್ಲಿಂಗ್ ಅಪ್ನಾ ಸಪ್ನಾ ಮಣಿ ಮಣಿ, ಸೂಪರ್ ಮಾಡೆಲ್, ಹಸೀ ತೋ ಫಾಸೀ, ಅಪಾರ್ಟ್‌ಮೆಂಟ್ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ.

ಮೆಟ್ರೋದಲ್ಲಿ ಚೆಲ್ಲಿದ ಆಹಾರ ಸ್ವಚ್ಛಗೊಳಿಸಿದ ಯುವಕ: ತರುಣನ ಕಾರ್ಯಕ್ಕೆ ವ್ಯಾಪಕ ಶ್ಲಾಘನೆ

ಬಾಬಿ ಡಾರ್ಲಿಂಗ್ 2016ರಲ್ಲಿ ಭೋಪಾಲ್‌ ಮೂಲದ ಉದ್ಯಮಿ ರಾಮ್ನಿಕ್ ಶರ್ಮಾ ಅವರನ್ನು ವಿವಾಹವಾದರು ಆದರೆ ನಂತರ ಅವರು ಬೇರ್ಪಟ್ಟರು. ಬಾಲಿವುಡ್ ತಾರೆಯ ಪತಿ ಭೋಪಾಲ್‌ನಲ್ಲಿ ಉದ್ಯಮಿಯಾಗಿದ್ದರು. ಬಾಬಿ ಡಾರ್ಲಿಂಗ್ ಹಲವಾರು ಟಿವಿ ಕಾರ್ಯಕ್ರಮಗಳಲ್ಲಿ ಕಾಟಿಸಿಕೊಂಡಿದ್ದಾರೆ. ಫೇಮ್ ಗುರುಗುಲ್ ಮತ್ತು ಬಿಗ್ ಬಾಸ್ ಕಾರ್ಯಕ್ರಮಗಳ ಹೊರತಾಗಿ ಸಚ್ ಕಾ ಸಾಮ್ನಾ ಮತ್ತು ಎಮೋಷನಲ್ ಅತ್ಯಾಚಾರ್, ಇಸ್‌ ಪ್ಯಾರ್ ಕೋ ಕ್ಯಾ ನಾಮ್ ದೂನ್ ಮತ್ತು ಆಹದ್ ನಲ್ಲಿ ಕಾಣಿಸಿಕೊಂಡಿದ್ದಾರೆ.

ದೆಹಲಿ ಮೆಟ್ರೋದಲ್ಲಿ ಹಸ್ತಮೈಥುನ ಮಾಡಿ ಅಪ್ರಾಪ್ತ ಬಾಲಕಿಯ ಮೇಲೆ ಸ್ಖಲಿಸಿದ ವ್ಯಕ್ತಿಯ ಬಂಧನ!

Scroll to load tweet…