ದೆಹಲಿ ಮೆಟ್ರೋದಲ್ಲಿ ಹಸ್ತಮೈಥುನ ಮಾಡಿ ಅಪ್ರಾಪ್ತ ಬಾಲಕಿಯ ಮೇಲೆ ಸ್ಖಲಿಸಿದ ವ್ಯಕ್ತಿಯ ಬಂಧನ!
ದೆಹಲಿ ಮೆಟ್ರೋದಲ್ಲಿ ಏನಾಗುತ್ತೆ, ಏನಾಗೋದಿಲ್ಲ ಅಂತಾ ಕೇಳೋ ಹಾಗೇ ಇಲ್ಲ. ಕೇಳಲು ವಿಚಿತ್ರ ಎನಿಸುವ ಸುದ್ದಿಗಳು ಬರುತ್ತಲೇ ಇರುತ್ತದೆ. ಅದರಲ್ಲೂ ಕಳೆದ ಬುಧವಾರ ನಡೆದ ಘಟನೆ ಹೇಸಿಗೆ ಹುಟ್ಟಿಸುವಂಥದ್ದಾಗಿದೆ.
ನವದೆಹಲಿ (ಆ.31): ರಾಷ್ಟ್ರ ರಾಜಧಾನಿ ದೆಹಲಿಯ ಮೆಟ್ರೋದಲ್ಲಿ ಅಗೋ ಅವಾಂತರಗಳು ಲೆಕ್ಕಕ್ಕೇ ಇಲ್ಲ. ಚಿತ್ರಿ ವಿಚಿತ್ರ ಎನಿಸುವಂಥ ಡ್ರೆಸ್‌ಗಳನ್ನು ಧರಿಸಿಕೊಂಡು ಬರೋದು, ಮೆಟ್ರೋ ರೈಲಿನಲ್ಲಿ ರೊಮ್ಯಾನ್ಸ್ ಮಾಡೋವಂಥ ಸುದ್ದಿಗಳು ಪ್ರಕಟವಾಗಿದ್ದವು. ಈಗ ವ್ಯಕ್ತಿಯೊಬ್ಬ ಮೆಟ್ರೋ ರೈಲಿನಲ್ಲೇ ಹಸ್ತಮೈಥುನ ಮಾಡಿಕೊಂಡಿದ್ದು ಮಾತ್ರವಲ್ಲದೆ, ಅಪ್ರಾಪ್ತೆಯೆ ಮೇಲೆ ಸ್ಖಲನ ನಡೆಸಿದ್ದ. ಈ ಕುರಿತಾಗಿ ತಕ್ಷಣವೇ ಕಾರ್ಯಪ್ರವೃತ್ತರಾದ ದೆಹಲಿ ಪೊಲೀಸ್ ವ್ಯಕ್ತಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಕಳೆದ ಬುಧವಾರ ರಕ್ಷಾಬಂಧನದ ದಿನದಂದು ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ಬುಧವಾರ ರಾತ್ರಿ 8.30ರ ವೇಳೆಗೆ ದೆಹಲಿ ಮೆಟ್ರೋದ ರೆಡ್‌ಲೈನ್‌ನಲ್ಲಿ ಈ ಘಟನೆ ನಡೆದಿದೆ. ರಕ್ಷಾಬಂಧನ ಹಬ್ಬದ ಕಾರಣದಿಂದಾಗಿ ರೈಲು ಸಂಪೂರ್ಣ ಭರ್ತಿಯಾಗಿತ್ತು. ಇದರ ಲಾಭವನ್ನು ಪಡೆದುಕೊಂಡು ವ್ಯಕ್ತಿ ಈ ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಕಿಕ್ಕಿರಿದು ತುಂಬಿದ್ದ ಕೋಚ್‌ನಲ್ಲಿ ವ್ಯಕ್ತಿ ತನ್ನ ಮಗಳ ಮೇಲೆ ಸ್ಖಲನ ಮಾಡಿರುವುದನ್ನು ಬಾಲಕಿಯ ತಾಯಿ ಕಂಡು ಆಕೆ ಸೀಲಂಪುರ ನಿಲ್ದಾಣದಲ್ಲಿ ಇಳಿದಿದ್ದಾಳೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪಶ್ಚಿಮ ಬಂಗಾಳ ಮೂಲದ ಆರೋಪಿಯನ್ನು ಘಟನೆಯನ್ನು ಗಮನಿಸಿದ ಇಬ್ಬರು ಸಹ ಪ್ರಯಾಣಿಕರು ಬಂಧಿಸಿದ್ದಾರೆ ಮತ್ತು ನಂತರ ಅವರು ಶಾಹದಾರ ನಿಲ್ದಾಣದಲ್ಲಿ ದೆಹಲಿ ಮೆಟ್ರೋ ಅಧಿಕಾರಿಗಳಿಗೆ ಒಪ್ಪಿಸಿದ್ದಾರೆ ಎಂದು ಅವರು ಹೇಳಿದರು.ನಂತರ ಠಾಣೆಯ ಅಧಿಕಾರಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.