ಆಧುನಿಕ ರೈತ ಶಶಿ ಮತ್ತು ಸಂಗೀತ ನಿರ್ದೇಶಕ ಗಾಯಕ ಕೊನೆಯ ಟಾಪ್ 2 ಆಗಿದ್ದರು. ಕಿಚ್ಚ ಸುದೀಪ್, ಶಶಿಕುಮಾರ್​ ಬಿಗ್​ಬಾಸ್​ ಸೀಜನ್​-6 ವಿಜೇತ ಎಂದು ಘೋಷಿಸಿದರು.

ಸೀಜನ್ -6ರ 12ನೇ ಕಂಟೆಸ್ಟೆಂಟ್​​ ಆಗಿ ಶಶಿ ಬಿಗ್​ಬಾಸ್​ ಮನೆಯೊಳಗೆ ಪ್ರವೇಶ ಮಾಡಿದ್ದರು. ರೈತರ ದಿನಚರಿ, ಆಧುನಿಕ ಕೃಷಿ ಬಗ್ಗೆ ಬಿಗ್ ಬಾಸ್ ಮನೆಯಲ್ಲಿ ಹಲವು ಸಾರಿ ಮಾತನಾಡಿದ್ದರು.

ಬಿಗ್‌ಬಾಸ್‌ಗೆ ‘ಭಾವಪೂರ್ಣ’ ಶ್ರದ್ಧಾಂಜಲಿ ಸಲ್ಲಿಸಿದ ವೀಕ್ಷಕರು!

21 ಜನರಲ್ಲಿ ಶಶಿ ಟಾಪ್ ಆಗಿ ಹೊರಹೊಮ್ಮಿದ್ದು ಚಂದನ್ ಶೆಟ್ಟಿ, ವಿಜಯ್ ರಾಘವೇಂದ್ರ, ಶ್ರುತಿ, ಅಕುಲ್ ಬಾಲಾಜಿ, ಪ್ರಥಮ್ ಸಾಲಿಗೆ ಶಶಿ ಸೇರ್ಪಡೆಯಾಗಿದ್ದಾರೆ. ಗಾಯಕ ನವೀನ್ ಸಜ್ಜು ಗೆಲ್ಲುತ್ತಾರೆ ಎಂದು ಹಲವರು ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ ಅಂತಿಮವಾಗಿ ಶಶಿ ಟ್ರೋಫಿಗೆ ಮುತ್ತಿಟ್ಟಿದ್ದಾರೆ. ಗೆದ್ದ ಹಣವನ್ನು ರೈತರಿಗೆ ಮತ್ತು ಯುವಕರಿಗೆ ಹೊಸ ತಂತ್ರಜ್ಞಾನ ತಲುಪಿಸಲು ಬಳಸುತ್ತೇಬೆ ಎಂದು ಶಶಿ ಹೇಳಿದರು.