ಬಿಗ್‌ ಬಾಸ್ ಮನೆಯಿಂದ ಧನರಾಜ್ ಹೊರಕ್ಕೆ ಬಂದಿದ್ದಾರೆ. ಮಿಡ್ ನೈಟ್  ಎಲಿಮಿನೇಶನ್‌ನಲ್ಲಿ ಧನರಾಜ್ ಫೋಟೋಕ್ಕೆ ಬೆಂಕಿ ಬಿದ್ದಿದೆ. ಆದರೆ ವೀಕ್ಷಕರು ಮಾತ್ರ ಖಾಸಗಿ ವಾಹಿನಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

'ಬಿಗ್ ಬಾಸ್ ಕನ್ನಡ-6' ಕಾರ್ಯಕ್ರಮದಿಂದ ನಿನ್ನೆ ಧನರಾಜ್ ಔಟ್ ಆಗ್ತಾರೆ ಅಂತ ಯಾರೂ ಕಲ್ಪನೆ ಮಾಡಿರಲಿಲ್ಲ.  ಆದರೆ ಮಧ್ಯರಾತ್ರಿಯ ಎಲಿಮಿನೇಶನ್‌ನಲ್ಲಿ  ಧನರಾಜ್ ಫಿನಾಲೆಗೆ ಏರುವ ಅವಕಾಶ ಕಳೆದುಕೊಂಡಿದ್ದಾರೆ.

‘ಅಡ್ಡಗೋಡೆ ಮೇಲೆ ದೀಪ ಇಟ್ಟರು’ ಅಕ್ಷತಾ ಹೀಗಂದಿದ್ಯಾಕೆ?

ವೀಕ್ಷಕರ ವಲಯದಲ್ಲೂ ಜೆಂಟಲ್ ಮ್ಯಾನ್ ಧನರಾಜ್ ರನ್ನ ಹೇಟ್ ಮಾಡುವವರು ಯಾರೂ ಇರಲಿಲ್ಲ. ಅಷ್ಟಕ್ಕೂ, 'ಬಿಗ್ ಬಾಸ್' ಮನೆಯೊಳಗೆ ಬಂದಿದ್ದ ಹಿಂದಿನ ಸೀಸನ್‌ನ  ಪ್ರಥಮ್, ಕಿರಿಕ್ ಕೀರ್ತಿ, ಸಂಜನಾ, ಸಮೀರಾಚಾರ್ಯ, ಕೃಷಿ ತಾಪಂಡ ಸಹ ಧನರಾಜ್ ಫಿನಾಲೆಗೆ ಏರುವ ಎಲ್ಲ ಸಾಧ್ಯತೆಗಳು ಇವೆ ಎಂದಿದ್ದರು.

ಅತ್ಯುತ್ತಮ ಕಂಟೆಸ್ಟೆಂಟ್ ಎಂದು ಗುರುತಿಸಿಕೊಂಡಿದ್ದ ಧನರಾಜ್ ಅವರನ್ನು ಹೊರಹಾಕಿದ ಶೋ ಇನ್ನು ಮುಂದೆ ನೋಡುವುದಿಲ್ಲ. ಪ್ಯಾಕ್ ಹಾಕಿಸಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ. ಧನರಾಜ್ ಮನೆಯಿಂದ ಹೊರಕ್ಕೆ ಬಂದಿರಬಹುದು ಆದರೆ ನಿಜವಾದ ವಿನ್ನರ್ ಧನರಾಜ್ ಅವರೇ ಎಂದು ಕೊಂಡಾಡಿದ್ದಾರೆ.