ಬಿಗ್‌ಬಾಸ್‌ ಮನೆಯಿಂದ ಆಟ ಮುಗಿಸಿ ಹೊರ ಬಂದಿರುವ ಮಾಡ್ರನ್ ಮಹಾಕವಿ ಮಂಜ ಅವರ ರೂಟಿನ್ ಲೈಫ್ ಮತ್ತೆ ಶುರುವಾಗಿದೆ. ಬಿಗ್‌ ಬಾಸ್ ಮುಗಿಸಿ ಹೊರ ಬಂದ ಬೆನ್ನಲ್ಲೇ, ಮಾಧ್ಯಮಗಳ ಮುಂದೆ ಕೆಲವು ಇಂಟರೆಸ್ಟಿಂಗ್ ವಿಚಾರವನ್ನು ಬಿಚ್ಚಿಟ್ಟಿದ್ದಾರೆ.

ಬಿಗ್‌ ಬಾಸ್ (Bigg Boss) ಮನೆಯಿಂದ ಕಿಕ್‌ಔಟ್ ಆಗಿ ಹೊರ ಬಂದಿರುವ ಮಾಡ್ರನ್ ಮಹಾಕವಿ ಮಂಜ (Modren MahaKavi Manja), ತಮ್ಮ ಅನುಭವಗಳನ್ನ ಹಂಚಿಕೊಂಡಿದ್ದಾರೆ. ಮನೆಯಿಂದ ಆಚೆ ಬರುತ್ತಿದ್ದಂತೆಯೇ ಮಾಧ್ಯಮಗಳ ಮುಂದೆ ಬಂದು ಬಿಗ್‌ ಬಾಸ್‌ ಮನೆಯಲ್ಲಿನ ಇಂಟರೆಸ್ಟಿಂಗ್ ವಿಚಾರವನ್ನು ಹಂಚಿಕೊಂಡಿದ್ದಾರೆ. ಇನ್ನು ಮಂಜು ಬಗ್ಗೆ ಬಿಗ್‌ಬಾಸ್ ಶೋನಿಂದಾಗಿ ಎಲ್ಲರಿಗೂ ಗೊತ್ತಾಗಿದೆ. ಆದರೆ ಅವರ ಫ್ಯಾಮಿಲಿ ಹಿನ್ನೆಲೆ ಏನು ಅನ್ನೋ ವಿಚಾರ ಎಲ್ಲರಿಗೂ ಗೊತ್ತಿಲ್ಲ. ಇದೀಗ ಅವರು ತಮ್ಮ ಕುಟುಂಬದ ಹಿನ್ನೆಲೆ ಬಗ್ಗೆ ತಿಳಿಸಿದ್ದಾರೆ.

ಮಂಜನ ಹಿನ್ನೆಲೆ ಏನು?

ಮಂಜು ಅಲಿಯಾಸ್ ಮಂಜುನಾಥ್ ಮೂಲತಃ ಬೆಂಗಳೂರಿನವರು. ಬೆಂಗಳೂರಿನ ಜೆಪಿ ನಗರದವರು. ಹುಟ್ಟಿ ಬದುಕುತ್ತಿರೋದು, ಬೆಳೆಯುತ್ತಿರೋದು, ಮುಂದೆ ಬದುಕೋದು ಎಲ್ಲವೂ ಬೆಂಗಳೂರಿನಲ್ಲೇ. ತಂದೆ ಮನೆಯಲ್ಲೇ ಇದ್ದಾರೆ. ಸದ್ಯ ಅವರು ಏನು ಕೆಲಸ ಮಾಡಲ್ಲ. ಮಂಜು ಜೊತೆ ಅಷ್ಟಕಷ್ಟೇ ಮಾತುಕತೆ. ಮಂಜುಗೆ ಅಕ್ಕ ಇದ್ದಾರೆ. ಅವರು ಬ್ಯೂಟಿಷಿಯನ್. ಪಾರ್ಲರ್ ಒಂದಕ್ಕೆ ಕೆಲಸಕ್ಕೆ ಹೋಗ್ತಾರೆ. ಅವರಿಗೆ ಇಬ್ಬರು ಹೆಣ್ಣುಮಕ್ಕಳು ಇದ್ದಾರೆ.

ಇನ್ನು ಮಂಜು ಅವರ ತಾಯಿ ಗುಣ ಹೂವು ಕಟ್ಟಿಕೊಂಡು ಬದುಕು ಕಟ್ಟಿಕೊಂಡವರು. ಮಂಜು ಅವರನ್ನು ಬೆಳೆಸಿದ್ದು ಇದೇ ಹೂವುಗಳನ್ನ ಕಟ್ಟಿಯೇ. ಮಂಜು ಅವರೇ ಹೇಳಿವಂತೆ ನಮ್ಮ ಅಮ್ಮ ಮದರ್ ಇಂಡಿಯಾ. ಈಗಲೂ ನನ್ನಮ್ಮ ಹೂವು ಕಟ್ಟುತ್ತಾರೆ. ನಾನು ಆಗಾಗ ಅಲ್ಲಲ್ಲಿ ಕೆಲಸಕ್ಕೆ ಹೋಗ್ತಿದ್ದೆ. ನಮಗೆ ತಿಂಗಳ ಕೊನೆಯಲ್ಲಿ ದುಡ್ಡು ಬಂದ್ರೆ ಮಾತ್ರ ಜೀವನ ನಡೆಯೋದು. ಹಾಗಿದ್ರೆ ಮಾತ್ರ ನಮಗೆ ತಿಂಗಳ ರೇಷನ್ ತರೋಕೆ ಆಗೋದು. ಈಗಲೂ ಕೂಡ ಅದೇ. ನಾನು ದುಡಿದ ಹಣದಲ್ಲಿ ರೇಷನ್‌ಗೆ ಮಾತ್ರ ನೀಡಿ. ಉಳಿದ ಹಣವನ್ನು ನನ್ನ ಖರ್ಚಿಗೆ ಕೊಟ್ಟು ಇಟ್ಕೋತಿನಿ. ನಾನು ಇವಾಗಲೂ ಅದನ್ನೇ ಮಾಡುತ್ತೇನೆ.

ನಾನು ಎಲ್ಲಿಯೂ ಸರಿಯಾಗಿ ನಿಂತಿಲ್ಲ. ಅದು ಕೆಲಸ ಮಾತ್ರವಲ್ಲ. ಎಲ್ಲಾ ವಿಚಾರದಲ್ಲೂ. ನನಗೆ ಚಿಕ್ಕವನಿದ್ದಾಗಲೇ ಒಂದು ಕನಸು ಇತ್ತು. ಬರವಣಿಗೆಯಲ್ಲಿ ಏನಾದರೂ ಮಾಡಬೇಕು. ಸಿನಿಮಾ ಇಂಡಸ್ಟ್ರಿಗೆ ಬರಬೇಕು. ಏನಾದರೂ ಒಂದು ಕಲಿಯಬೇಕು. ಜೀವನದಲ್ಲಿ ಏನಾದರೂ ಒಂದು ಸಾಧನೆ ಮಾಡಲೇಬೇಕು ಅಂದುಕೊಂಡಿದ್ದೆ. ಇವತ್ತು ಒಂದು ವೇದಿಕೆ ಸಿಕ್ಕಿತ್ತು. ತುಂಬಾ ಕಷ್ಟ ಪಟ್ಟು ಹೋಗಿದ್ದೆ. ಎಲ್ಲರೂ ಕಷ್ಟಪಟ್ಟೆ ಬಂದಿರುತ್ತಾರೆ. ನಾನು ಆ ಕಷ್ಟನ ಇಷ್ಟ ಪಟ್ಟು ಬಂದಿದ್ದೀನಿ ಅಷ್ಟೇ ಎಂದಿದ್ದಾರೆ.

ನಾನು, ಕೆಲಸ ಅಂತಾ ಬಂದರೆ ಡೆಲಿವರಿ ಡಿಪಾರ್ಟ್ಮೆಂಟ್‌ನಲ್ಲಿ ಯಾವುದನ್ನೂ ಬಿಟ್ಟಿಲ್ಲ. ಎಲ್ಲದರಲ್ಲೂ ಕೆಲಸ ಮಾಡಿಕೊಂಡು ಬಂದಿದ್ದೇನೆ. ಸ್ವಿಗ್ಗಿ, ಜೊಮೆಟೋ, ಓಲಾ, ಉಬರ್, ಬ್ಲೂ ಡಾಟ್ ಎಕ್ಸ್ಪ್ರೆಸ್ ಬೀಸ್ ಯಾವುದನ್ನೂ ಬಿಟ್ಟಿಲ್ಲ. ಮಾರ್ಕೆಟಿಂಗ್ ಕೆಲಸವನ್ನೂ ನಾನು ಮಾಡಿದ್ದೀನಿ. ಮೆಡಿಕಲ್ ಡಿಪಾರ್ಟ್‌ಮೆಂಟ್‌ನಲ್ಲೂ ಕೆಲಸ ಮಾಡಿದ್ದೇನೆ. ಪೆಟ್ ಹಾಸ್ಪಿಟಲ್ ಅಲ್ಲಿ ಕೆಲಸ ಮಾಡಿದ್ದೇನೆ ಎಂದಿದ್ದಾರೆ.

ಇನ್ನು ಓದಿನ ಬಗ್ಗೆ ಪ್ರತಿಕ್ರಿಯಿಸಿರುವ ಮಂಜ, ನಾನು ಓದು ಕಂಪ್ಲೀಟ್ ಮಾಡಿಲ್ಲ. ಡಿಗ್ರಿ ಅರ್ಧಕ್ಕೆ ನಿಲ್ಲಿಸಿದ್ದೇನೆ. ಓಕೆ. ಓದಿದ್ದು ಕಮರ್ಷಿಯಲ್ ಕಾಮರ್ಸ್. ಬಟ್ ಮೆಡಿಕಲ್ ಮಿರಾಕಲ್. ಅರ್ಧಕ್ಕೆ ನಿಲ್ಲಿಸಿಬಿಟ್ಟೆ. ನನ್ನ ಓದನ್ನು ಯಾಕೆ ಅರ್ಧಕ್ಕೆ ನಿಲ್ಲಿಸಿದೆ ಅಂತಾ ಹೇಳೋದಾದರೆ, ಹಣಕಾಸು ಸಮಸ್ಯೆ ಎಂದಿದ್ದಾರೆ. ಅಂದರೆ ಅವರು ಬಡತನದಿಂದ ಓದನ್ನು ಅರ್ಧಕ್ಕೆ ನಿಲ್ಲಿಸಿದ್ದಾರೆ ಎಂದು ಹೇಳಿಕೊಂಡಿದ್ದಾರೆ.