‘ನನ್ನ ಪ್ರಕಾರ ಈಗ ಸಿನಿಮಾ ಅಥವಾ ಸೀರಿಯಲ್‌ಗೆ ಅಷ್ಟೇನು ವ್ಯತ್ಯಾಸ ಇಲ್ಲ. ಸಿನಿಮಾ ಜಗತ್ತಿನ ಜನಪ್ರಿಯ ಕಲಾವಿದರೇ ಇವತ್ತು ಸೀರಿಯಲ್‌ ಲೋಕದಲ್ಲೂ ಕಾಣಿಸಿಕೊಳ್ಳುತ್ತಿರುವುದು ಕಾಮನ್‌ ಆಗಿದೆ. ನಾನು ಕೂಡ ಸೀರಿಯಲ್‌ ಒಪ್ಪಿಕೊಳ್ಳುವುದಕ್ಕೆ ಇದ್ದ ಕಾರಣಗಳಲ್ಲಿ ಅದು ಕೂಡ ಒಂದು. ಜತೆಗೆ ಸೀರಿಯಲ್‌ ಮೂಲಕ ಬಹುಬೇಗ ಜನರನ್ನು ತಲುಪಬಹುದು ಎನ್ನುವ ಖುಷಿಯೂ ಇದೆ. ಅದಕ್ಕಿಂತ ಮುಖ್ಯವಾಗಿ ನನಗೆ ಇಲ್ಲಿ ಒಳ್ಳೆಯ ಪಾತ್ರವೇ ಸಿಕ್ಕಿದೆ. ಕಥಾ ನಾಯಕಿ ಸುಜಾತಾ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದೇನೆ. ಸುಜಾತಾ ಓರ್ವ ಮಧ್ಯಮ ವರ್ಗದ ಹುಡುಗಿ. ಆಕೆಯ ಬದುಕಿನ ಸುತ್ತಲ ಕತೆಯಿದು’ ಎನ್ನುವ ಮಾತುಗಳ ಮೂಲಕ ಸಿನಿಮಾದಿಂದ ವರ್ಗಾವಣೆಯಾಗುತ್ತಿರುವ ಸೀರಿಯಲ್‌ ಜರ್ನಿ ಮತ್ತು ಅಲ್ಲಿನ ತಮ್ಮ ಪಾತ್ರದ ವಿವರ ನೀಡುತ್ತಾರೆ ಮೇಘಶ್ರೀ.

ಸೂರಜ್‌ ಗೌಡ ಜತೆಗೆ ರಾಜ್‌ಕುಮಾರ್‌ ಮೊಮ್ಮಗಳು!

‘ನಾಗಕನ್ನಿಕೆ’ ಧಾರಾವಾಹಿಯಲ್ಲೂ ಮೇಘಶ್ರೀ ಕಾಣಿಸಿಕೊಂಡಿದ್ದರು.ಸೀರಿಯಲ್‌ ಜತೆಗೀಗ ಮೇಘಶ್ರೀ ಸಿನಿಮಾಗಳಲ್ಲೂ ಬ್ಯುಸಿ ಇದ್ದಾರೆ. ಸದ್ಯಕ್ಕೀಗ ‘ರಿದಮ್‌’ ಹೆಸರಿನ ಚಿತ್ರದಲ್ಲಿ ನಾಯಕಿ ಆಗಿ ಅಭಿನಯಿಸುತ್ತಿದ್ದಾರೆ. ಯುವ ಪ್ರತಿಭೆ ಮಂಜು ಸಾಗರ್‌ ಈ ಚಿತ್ರಕ್ಕೆ ನಾಯಕ ಕಮ್‌ ನಿರ್ದೇಶಕ.

ರಾಧಾ ರಮಣ 'ಸಿತಾರ ದೇವಿ' ತೆರೆ ಹಿಂದೆ ಹೀಗಿದ್ದಾರೆ ನೋಡಿ!