ಒಂದೆಡೆ ಕನ್ನಡದ ಬಿಗ್ ಬಾಸ್ ಗೆ  ಅಭ್ಯರ್ಥಿಗಳ ಆಯ್ಕೆ ಕಸರತ್ತು ಶುರುವಾಗಿದೆ. ಅಂತಿಮವಾಗಿ ಬಿಗ್ ಬಾಸ್ ಮನೆಗೆ ತೃತೀಯ ಲಿಂಗಿಯೊಬ್ಬರೆ  ಪ್ರವೇಶವಾಗಿದೆ.  ಹೌದು ಈ ಸ್ಟೋರಿಯನ್ನು ನೀವು ಓದಲೇ ಬೇಕು.

ತೃತೀಯ ಲಿಂಗಿ ನಟಿ ಅಂಜಲಿ ಅಮೀರ್ ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿ ಪಡೆದುಕೊಂಡಿದ್ದಾರೆ. ನಾವು ಹೇಳ್ತಾ ಇರೋದು ಮಲಯಾಳಂ ಬಿಗ್ ಬಾಸ್ ಕತೆ..

ಜುಲೈ 29 ರಂದೇ ಎಂಟ್ರಿ ಪಡೆದುಕೊಂಡಿರುವ ನಟಿ ಈ ಹಿಂದೆ ಬಿಗ್ ಬಾಸ್ ನಿಂದ ಬಂದ ಆಫರ್ ತಿರಸ್ಕರಿಸಿದ್ದರು. ತಮ್ಮ ನಟನೆಯ ಸಿನಿಮಾದ ಪ್ರಮೋಶನ್‌ ಗೆ ಸಮಸ್ಯೆಯಾಗುತ್ತದೆ ಎಂದು ಆಫರ್ ತಿರಸ್ಕರಿಸಿದ್ದರು.ಆದರೆ ಈಗ 16 ಜನ ಸ್ಪರ್ಧಿಗಳೊಂದಿಗೆ ಈ ನಟಿ ಕೂಡ ಸ್ಥಾನ ಪಡೆದುಕೊಂಡಿದ್ದಾರೆ. ಕನ್ನಡದ ಬಿಗ್ ಬಾಸ್ ಹೊಸ ಸೀಸನ್ ಶುರುವಾಗಬೇಕಿದೆ. ಅತ್ತ ತಮಿಳಿನ ಬಿಗ್ ಬಾಸ್ ಕೂಡ ದೊಡ್ಡ ಪ್ರಮಾಣದಲ್ಲಿ ಸುದ್ದಿ ಮಾಡಿತ್ತು. ಇನ್ನು ಮುಂದೆ ಮಲಯಾಳಂ ಬಿಗ್ ಬಾಸ್ ಮನೆಯಲ್ಲಿಯೂ ಬಿಸಿ ಏರಲಿದೆ.

ಲಿಪ್ ಲಾಕ್ ದೃಶ್ಯಕ್ಕೆ ಬೆಚ್ಚಿಬಿತ್ತು ಬಿಗ್‌ಬಾಸ್ ಮನೆ!

ಮೊದಲು ಮಾಡಲೆ ಆಗಿದ್ದ ಅಂಜಲಿ ನಂತರ ನಟಿಯಾಗಿ ಹೆಸರು ಮಾಡಿದರು. ತಮಿಳು ಮತ್ತು ಮಲೆಯಾಳಂ ಎರಡು ಭಾಷೆಯಲ್ಲಿ ಬಿಡುಗಡೆಯಾದ ಮುಮ್ಮಟ್ಟಿ ಜತೆ ಬಿಗ್ ಬಾಸ್ ಮನೆಗೆ ಈ ತೃತೀಯಲಿಂಗಿ ನಟಿ ಪ್ರವೇಶಅಭಿನಯಿಸಿದ ಸಿನಿಮಾ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಲ್ಲದೆ ಇಂಟರ್ ಬ್ಯಾಶನಲ್ ಫಿಲ್ಮ್ ಫೆಸ್ಟಿವಲ್ ನಲ್ಲಿಯೂ ಸ್ಥಾನ ಪಡೆದುಕೊಂಡಿತ್ತು.