ನಿಮಗೆ ಪಂಚತಾರಾ ಹೊಟೇಲ್‌ನ ಬಿರಿಯಾನಿ ಇಷ್ಟವೋ, ಬೀದಿ ಬದಿಯ ಚಿತ್ರಾನ್ನವೋ ಎಂದು ಸುದೀಪ್ ಗಣೇಶ್ ಅವರನ್ನು ಕೇಳಿದರು. ಇದಕ್ಕೆ ಉತ್ತರಿಸಿದ ಗಣೇಶ್ ನನಗೆ ಬೀದಿ ಬದಿಯ ಚಿತ್ರಾನ್ನವೇ ಬೆಸ್ಟ್ ಎಂದರು. ಅಲ್ಲದೇ ಅದಕ್ಕೆ ಕಾರಣವನ್ನು ಹೇಳಿದರು.

ಕಿಸೆಯಲ್ಲಿ ಕೇವಲ 6 ರೂ. ಇದ್ದಾಗ ನಾನು ಮತ್ತು ನನ್ನ ಸ್ನೇಹಿತರು ಹಾಫ್ ಚಿತ್ರಾನ್ನ ತಿನ್ನುವ ತೀರ್ಮಾನ ಮಾಡಿ ಬೀದಿ ಬದಿ ಚಿತ್ರಾನ್ನ ಪಾರ್ಸಲ್ ತೆಗೆದುಕೊಂಡು ಬಂದಿದ್ದೇವು. ಅದನ್ನು ಓಪನ್ ಮಾಡಿ ಹಂಚಿಕೊಂಡು ತಿನ್ನಬೇಕಿದ್ದರೆ ಚಿತ್ರಾನ್ನದಲ್ಲಿ 5 ರೂ. ನಾಣ್ಯವೊಂದು ಸಿಕ್ಕಿತ್ತು. ಅದನ್ನು ಊಟದ ನಂತರದ ‘ಕೆಲಸಕ್ಕೆ’ ಬಳಸಿಕೊಂಡೆವು ಎಂದು ಗಣೇಶ್ ಉತ್ತರಿಸಿದರು.

‘ಮುಂಗಾರು ಮಳೆಗೆ’ ಭಟ್ಟರು ಮೊದಲು ಇಟ್ಟ ಹೆಸರೇನಾಗಿತ್ತು? ಗಣೇಶ್ ಬಿಚ್ಚಿಟ್ಟ ಸತ್ಯ

ಈಗಲೂ ಚಿತ್ರಾನ್ನ ನೋಡಿದರೆ ಮತ್ತೆ 5 ರೂ. ಕಾಯಿನ್ ಸಿಗಬಹುದೋ? ಎಂದು ಅನಿಸುತ್ತದೆ. ಹಾಗಾಗಿ ಅಂದಿನ ಕಷ್ಟದ ದಿನಗಳನ್ನು ಮರೆಯಲು ಸಾಧ್ಯವೇ ಇಲ್ಲ ಎಂದು ತಮ್ಮ ಸಿನಿಮಾ ಜಗತ್ತಿನ ನೆನಪುಗಳನ್ನು ಹಂಚಿಕೊಂಡರು.