ಸೂಪರ್ ಸಂಡೆ ವಿತ್ ಸುದೀಪಕ್ಕೆ ಗೋಲ್ಡನ್ ಸ್ಟಾರ್ ಗಣೇಶ್ ಆಗಮಿಸಿದ್ದರು.  ಸುದೀಪ್ ಮತ್ತು ಗಣೇಶ್ ಜುಗಲ್‌ಬಂದಿ ಪ್ರೇಕ್ಷಕರನ್ನು ನಗೆ ಕಡಲಲ್ಲಿ ತೇಲಿಸಿತು.

ಕನ್ನಡ ಸಿನಿಮಾ ಜಗತ್ತಿನ ಸೂಪರ್ ಹಿಟ್ ಚಿತ್ರ ಮುಂಗಾರು ಮಳೆಗೆ ಯೋಗರಾಜ್‌ ಭಟ್ಟರು ಇಟ್ಟ ಹೆಸರು ಬೇರೆಯಾಗಿತ್ತು. ಈ ವಿಚಾರವನ್ನು ಗೋಲ್ಡನ್ ಸ್ಟಾರ್ ಗಣೇಶ್ ಅವರೆ ಬಹಿರಂಗ ಮಾಡಿದರು. 

ಮುಂಗಾರು ಮಳೆ ಚಿತ್ರಕ್ಕೆ ‘ಚುಮ್ಮಾ’ ಅಂಥ ಹೆಸರಿಟ್ಟಿದ್ದರಂತೆ. ಆದರೆ ಕಾರಣಾಂತರಗಳಿಂದ ಮುಂಗಾರುಮಳೆ ಎಂದು ಬದಲಾಯಿಸಲಾಯಿತಂತೆ. ಮುಂಗಾರು ಮಳೆ ಸಿನಿಮಾದ ವಿವರಗಳನ್ನು ಯೋಗರಾಜ್‌ ಭಟ್ಟರು ಸುದೀಪ್ ಅವರಿಗೆ ತಿಳಿಸಿದ್ದರಂತೆ. ಆಗ ಸುದೀಪ್ ಅವರಿಗೂ ಟೈಟಲ್ ಕೇಳಿ ಅಂಥ ಪ್ರಭಾವ ಏನೂ ಆಗಿತ್ತಿಲ್ಲವಂತೆ ಈ ವಿಚಾರವನ್ನು ಸುದೀಪ್ ಅವರೆ ಹೇಳಿದರು.

ಇದಾದ ಮೇಲೆ ಸಿನಿಮಾ ಬಿಡಗುಡೆ ನಂತರ ಸುದೀಪ್ ಗೆ ಚಿತ್ರ ತೋರಿಸಲು ಭಟ್ಟರು ವ್ಯವಸ್ಥೆ ಮಾಡಿದ್ದರಂತೆ. ಚಿತ್ರ ನೋಡಿದ ನಂತರ ಸುದೀಪ್ ಗಣೇಶ್ ಅವರ ನಂಬರ್ ಪಡೆದು ಅವರಿಗೆ ಕರೆ ಮಾಡಿದ್ದರಂತೆ. ಏನ್ ಮಾಡಿದ್ದಾನೆ ಬಡ್ಡಿ ಮಗ ಎಂದು ಮನಸ್ಸಿನಲ್ಲೇ ಹೇಳಿಕೊಂಡಿದ್ದರಂತೆ.