Asianet Suvarna News Asianet Suvarna News

ಬಿಗ್‌ಬಾಸ್‌ ಫಿನಾಲೆಗೆ ಐವರು..ಯಾರ್ಯಾರು?

ಬಿಗ್ ಬಾಸ್ ಮನೆ ಮಿಡ್ ನೈಟ್ ಎಲಿಮಿನೇಶನ್‌ನಲ್ಲಿ  ಪ್ರಬಲ ಸ್ಪರ್ಧಿಯೊಬ್ಬರು ಹೊರಬಿದ್ದಿದ್ದಾರೆ. ಈ ಮೂಲಕ ಫೈನಲ್ 5 ಸ್ಪರ್ಧಿಗಳು ಪಕ್ಕಾ ಆಗಿದ್ದಾರೆ.

bigg-boss-kannada-season-6-midnight-elimination Dhanraj Out from House
Author
Bengaluru, First Published Jan 21, 2019, 9:49 PM IST
  • Facebook
  • Twitter
  • Whatsapp

ಬಿಗ್ ಬಾಸ್ ಮನೆಯಿಂದ ಧನರಾಜ್ ಹೊರಬಿದ್ದಿದ್ದು ಫೈನಲ್‌ಗೆ 5 ಕಾಲಿರಿಸಿದ್ದಾರೆ. ರಶ್ಮಿ, ಕವಿತಾ, ಶಶಿ, ಆ್ಯಂಡಿ ಮತ್ತು ನವೀನ್ ಬಿಗ್ ಬಾಸ್ ಸೀಸನ್ 6 ರ ಫೖನಲ್ ಪ್ರವೇಶ ಮಾಡಿದ್ದಾರೆ.

ಬಿಗ್​ಬಾಸ್​ ಸೀಸನ್​​ 6ರ ಗ್ರ್ಯಾಂಡ್​ ಫಿನಾಲೆಗೆ ಇನ್ನೊಂದು ವಾರ ಬಾಕಿ  ಇದೆ.  ಭಾನುವಾರ ರಾತ್ರಿ ನಡೆದ ಮಿಡ್​ ವೀಕ್​​ ಎಲಿಮಿನೇಷನ್​ನಲ್ಲಿ ಧನರಾಜ್​ ಬಿಗ್​ಬಾಸ್​ ಮನೆಯಿಂದ ಹೊರ ಬಂದಿದ್ದಾರೆ. ರಾಕೇಶ್ ಶನಿವಾರ ಬಿಗ್ ಬಾಸ್ ಮನೆಯಿಂದ ಹೊರಬಂದಿದ್ದರು ನವೀನ್, ಶಶಿ, ಕವಿತಾ, ಆ್ಯಂಡಿ, ರಶ್ಮಿ ಮತ್ತು ಧನರಾಜ್ ಪೈಕಿ ನವೀನ್ ಮತ್ತು ಧನರಾಜ್ ಫಿನಾಲೆಗೆ ಎಂಟ್ರಿ ಪಡೆದುಕೊಂಡಿದ್ದರು ಎಂದು ಮೊದಲು ಹೇಳಲಾಗಿತ್ತು. ಆದರೆ ಬೆಂಕಿ ಟ್ವಿಸ್ಟ್ ನಲ್ಲಿ ಎಲ್ಲವೂ ಅದಲು ಬದಲಾಗಿದೆ.

ಬಿಗ್‌ಬಾಸ್‌ಗೆ ತುಳಸಿ ಪ್ರಸಾದ್ ಬಾರದಿರಲು ಅಸಲಿ ಕಾರಣ!

ಮಧ್ಯರಾತ್ರಿ ಸ್ಪರ್ಧಿಗಳನ್ನು ಎಬ್ಬಿಸಿದ ಬಿಗ್‌ ಬಾಸ್ ಗಾರ್ಡನ್ ಏರಿಯಾಕ್ಕೆ ಬರುವಂತೆ ಹೇಳಿದರು. ಯಾವ ಅಭ್ಯರ್ಥಿಯ ಭಾವಚಿತ್ರಕ್ಕೆ ಬೆಂಕಿ ಹೊತ್ತುಕೊಳ್ಳುತ್ತದೆಯೋ ಅವರು ಮನೆಯಿಂದ ಹೊರ ಹೋಗುತ್ತಾರೆ ಎಂದು  ಹೇಳಲಾಗಿತ್ತು.  ಅಂತಿಮವಾಗಿ ಧನರಾಜ್ ಅವರ ಚಿತ್ರಕ್ಕೆ ಬೆಂಕಿ ಹೊತ್ತಿಕೊಂಡಿತು.

3 ವಾರ ಬಾಕಿಇರುವಾಗಲೇ ಬಿಗ್​ಬಾಸ್​-6 ಫೈನಲ್ ಗೆ ಎಂಟ್ರಿಕೊಟ್ಟ ಸ್ಪರ್ಧಿ: ಯಾರವರು..?

Follow Us:
Download App:
  • android
  • ios