ಬಿಗ್‌ ಬಾಸ್ ಮನೆ ಮಂದಿಯಿಂದ ರಿಮೋಟ್  ಎಂದೇ ಕರೆಸಿಕೊಂಡಿದ್ದವರು 9ನೇ ವಾರ ಮನೆಯಿಂದ ಹೊರಬಿದ್ದಿದ್ದಾರೆ. ಗುಂಪುಗಾರಿಕೆಯ ಮೂಲ ಬೀಜ  ಬಿತ್ತಿದ್ದ ಆರೋಪಕ್ಕೆ ಗುರಿಯಾಗಿದ್ದ ಜಯಶ್ರೀ ಮನೆಯಿಂದ ಹೊರಬಿದ್ದಿದ್ದಾರೆ.

ಬಿಗ್‌ ಬಾಸ್ ಮನೆಯಿಂದ ಮತ್ತೊಂದು ವಿಕೆಟ್ ಪತನವಾಗಿದೆ. ಬಿಗ್​ಬಾಸ್ ಸೀಜನ್ 6ರ ಮೂರನೇ ಕಂಟೆಸ್ಟೆಂಟ್​ ಆಗಿ ಬಿಗ್​ಬಾಸ್​ ಮನೆಗೆ ಎಂಟ್ರಿ ನೀಡಿದ್ದ ಜಯಶ್ರೀ ಇಂದು ಮನೆಯಿಂದ ಹೊರ ಬೀಳುತ್ತಿದ್ದಾರೆ.

ಆರು ಜನ ಸ್ಪರ್ಧಿಗಳು ನಾಮಿನೇಟ್ ಆಗಿದ್ದು ಅವರಲ್ಲಿ ಜಯಶ್ರೀ ಹೊರಬಿದ್ದಿದ್ದಾರೆ. ಮೂರು ನಾಲ್ಕು ಸಾರಿ ನಾಮಿನೇಟ್ ಆಗಿದ್ದ ಜಯಶ್ರೀ ಸೇಫ್ ಆಗಿದ್ದರು. ಕಿರುತೆರೆ ಮತ್ತು ಸಿನಿಮಾಗಳಲ್ಲಿ ಕಾಣಿಸಿಕೊಂಡು ಹೆಸರು ಮಾಡಿರುವ ಜಯಶ್ರೀ ಬಿಗ್ ಬಾಸ್ ಮನೆಗೆ ಪ್ರವೇಶ ಪಡೆದಿದ್ದರು.

ಕವಿತಾ ಗೌಡ ಆ ಒಂದು ಶಬ್ದ ಸಿಕ್ಕಾಪಟ್ಟೆ ವೈರಲ್.. ಬೇಕಿತ್ತಾ!

ವಾರದ ಕತೆ ಕಿಚ್ಚನ ಜತಯಲ್ಲಿ ಹಲವಾರು ವಿಚಾರಗಳು ಚರ್ಚೆಯಾದವು. ಕಾಲೇಜು ಟಾಸ್ಕ್‌ನಲ್ಲಿ ಮುರುಳಿ ನೀಡಿದ್ದ ಪ್ರದರ್ಶನ ಇಟ್ಟುಕೊಂಡು ಸುದೀಪ್ ಕಾಲೆಳೆದರು. ಒಬ್ಬರೋ ಇಬ್ಬರೋ ಎಂದು ಹೇಳುತ್ತ ಸುದೀಪ್ ಅಂತಿಮವಾಗಿ ಜಯಶ್ರೀ ಮನೆಯಿಂದ ಹೊರಹೊಗುತ್ತಾರೆ ಎಂದು ಘೋಷಿಸಿದರು.