ಬಿಗ್‌ಬಾಸ್‌ ಮನೆಯ ಅತಿ ಕ್ರೂರಿ ಯಾರು? ಮೋಸ ಮಾಡ್ದೋನೆ ಗೆಲ್ಲೋದು!

First Published 27, Nov 2018, 5:59 PM IST
bigg-boss-kannada-season-6-bodybuilder-ravi-Super Sunday With Sudeep
Highlights

ಬಿಗ್ ಬಾಸ್ ಮನೆಯಿಂದ 35ನೇ ದಿನ ಹೊರಕ್ಕೆ ಬಂದಿರುವ ರವಿ ಅವರು ಮನೆ ಮಂದಿ  ಬಗ್ಗೆ ಹೇಳಿರುವ ಮಾತುಗಳನ್ನು ಕೇಳಲೇಬೇಕು.  ಬಾಡಿ ಬಿಲ್ಡರ್ ಜಿಮ್ ರವಿಗೆ ಕೋಪ ಜಾಸ್ತಿ, ಇದರಿಂದ 'ಬಿಗ್ ಬಾಸ್' ಮನೆ ರಣಾಂಗಂಣವಾಗಲಿದೆ ಎಂದು ಭಾವಿಸಲಾಗಿತ್ತು. ಆದರೆ ರವಿ ಶಾಂತ ರೀತಿಯಿಂದಲೇ ಇದ್ದರು. ಇದೇ ಅಂಶ ಅವರಿಗೆ ಮುಳುವಾಯಿತರ ಗೊತ್ತಿಲ್ಲ.

ಬಿಗ್ ಬಾಸ್ ಮನೆಯಲ್ಲಿ ಹೆಚ್ಚು ದಿನ ಇರಬೇಕು ಅಂದರೆ ಮೋಸ ಮಾಡುವುದು ಗೊತ್ತಿರಬೇಕಂತೆ. ಮನಮೆ ಒಳಗೆ ಇರುವ ಆ್ಯಂಡಿಯಂಥಹ ಕ್ರೂರಿ ಇನ್ನೊಬ್ಬ ಇಲ್ಲ.. ಇದು ಬಿಗ್ ಬಾಸ್ ಮನೆಯಿಂದ ಹೊರಬಂದ ರವಿ ಸುದೀಪ್ ಅವರೊಂದಿಗೆ ಅಭಿಪ್ರಾಯ ಹಂಚಿಕೊಳ್ಳುವಾಗ ಹೇಳಿದ ಮಾತು.

ರಶ್ಮಿ ಬಗ್ಗೆಯೂ ಕಾಲೆಳೆದ ರವಿ ಆಕೆ ಏನು ಮಾಡುತ್ತಾಳೆ ಎಂದು ಅವಳಿಗೆ ಗೊತ್ತಿರುವುದುದಿಲ್ಲ. ಒಂದು ದಿನ ಬೆಳಗ್ಗೆ ಹಾಡೊಂದನ್ನು ಹಾಕಿದಾಗ ಚಪ್ಪಲಿ, ಶೂಗಳನ್ನು ಕದ್ದುಕೊಂಡು ಹೋಗಿ ಬೇರೆ ಕಡೆ ಇಟ್ಟಿದ್ದಳು..ಕಾರಣ ಕೇಳಿದರೆ ಇದನ್ನು ಟಾಸ್ಕ್ ಎಂದು ಹೇಳಿದಳು ಎಂದರು.

ಮನೆಯಲ್ಲಿ ಗಂಡ-ಹೆಂಡತಿ, ಕವಿತಾಗೆ ಮಸಾಜ್ ಮಾಡಿದ ರೈತ!

ಸೋನು ಪಾಟೀಲ್ ಒಂಥರಾ ಖಾಲಿ ಡಬ್ಬದಲ್ಲಿ ಕಲ್ಲು ಹಾಕಿ ತಿರುಗಿಸಿದಂತೆ... ಇನ್ನು ಜಯಶ್ರೀ ಪಕ್ಕಾ ತಂತ್ರಗಾರಿಕೆ,,, ಕವಿತಾ ಗೌಡ ಜಯಶ್ರೀಯ ಕೈ ಚೀಲ ಎಂದು ಹೇಳಿದರು. ಶಶಿ ಇನ್ನು ಬೆಳೆಯಬೇಕು.. ಎಳೆಯ ಹುಡುಗ.ಇಗೋ ಇದೆ ಎಂದರು.. ಅಕ್ಷತಾ ಪಕ್ಕಾ ಡ್ರಾಮಾ ಕ್ವೀನ್ ಎಂದು ಒತ್ತಿ ಹೇಳಿದರು.

ರಶ್ಮಿ ಜೈಲಿಗೆ, ಆ್ಯಂಡಿ-ಕವಿತಾ ಕಿತ್ತಾಟ, ಶಶಿ ಗುದ್ದಿದ್ದು ಯಾರಿಗೆ? ಅಭಿಪ್ರಾಯ 

ನವೀನ್ ಸಜ್ಜು, ಧನರಾಜ್, ಮುರಳಿ ಫೈನಲ್‌ಗೆ ಏರಬಹುದು. ಮನೆಯಲ್ಲಿ ಮುಕ್ತವಾಗಿ ನಗಲು ಸ್ವಾತಂತ್ರ್ಯವಿಲ್ಲ. ಮನೆಗೆ ಹೋದ ಮೇಲೆ ನಗುವುದನ್ನು ಕಲಿಯುತ್ತೇನೆ ಎಂದು ಜಿಮ್ ರವಿ ಹೇಳಿದರು.  ಸುದೀಪ್ ಪ್ರೊ ಕಬಡ್ಡಿಯ ಜರ್ಸಿ ನೀಡಿ ಅವರನ್ನು ಬೀಳ್ಕೊಟ್ಟರು.

 

loader